ಸೋಮವಾರ, ಜನವರಿ 20, 2020
27 °C

ಎಡೆಸ್ನಾನವೂ ಬೇಡ

–ಈ.ಬಸವರಾಜು,ಬೆಂಗಳೂರು- Updated:

ಅಕ್ಷರ ಗಾತ್ರ : | |

ಯಾರೋ ಊಟ ಮಾಡಿದ ಎಂಜಲು ಎಲೆಗಳ ಮೇಲೆ ಇನ್ನೊಬ್ಬರು ಉರುಳು­ವ ಮಡೆ ಮಡೆ­ಸ್ನಾನದ ಬಗ್ಗೆ ರಾಜ್ಯದ ಎಲ್ಲೆಡೆ ವಿವಿಧ ಸಂಘಟನೆ­ಗಳಿಂದ ವಿರೋಧ ವ್ಯಕ್ತವಾಗಿದೆ.ಮಡೆ ಮಡೆ ಸ್ನಾನ­ವನ್ನು ಕಟುವಾಗಿ ಟೀಕಿಸದ ಪೇಜಾ­ವರ ಶ್ರೀಗಳು ಈಗ ರಾಜಿ ಸೂತ್ರ­ವೊಂದನ್ನು ಮುಂದಿಟ್ಟಿ­ದ್ದಾರೆ. ಅದೆಂದರೆ ಮಡೆ ಮಡೆ ಸ್ನಾನದ ಬದಲು ಎಡೆಸ್ನಾನ! ಅಂದರೆ ದೇವರ ಎಡೆಯ ಮೇಲೆ ಉರುಳುವುದು. ಸಾಮಾನ್ಯ­ವಾಗಿ ನಮ್ಮ ಮನೆ­ಗಳಲ್ಲಿ ದೇವರಿಗೆ, ಹಿರಿಯರಿಗೆ ಇಟ್ಟ ಎಡೆಯ ಆಹಾ­ರ­ವನ್ನು ಭಕ್ತಿ ಹಾಗೂ ಪ್ರೀತಿ­ಯಿಂದ ಸೇವಿಸು­ತ್ತೇವೆ.ಅಂಥ ಆಹಾ­ರದ ಮೇಲೆ ಉರುಳುವ ಎಡೆ­ಸ್ನಾನದ ಸಲಹೆ ಮಾಡಿರುವ ಪೇಜಾವರ ಶ್ರೀಗಳ ಸಲಹೆ ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ವಾಸ್ತವವಾಗಿ ಮಡೆಸ್ನಾನಕ್ಕೂ ಎಡೆಸ್ನಾನಕ್ಕೂ ಯಾವುದೇ ವ್ಯತ್ಯಾಸ­ವಿಲ್ಲ. ಹಾಗಾಗಿ ನಮಗೆ ಈ ಎರಡೂ ಸ್ನಾನ ಬೇಡ. ಸರ್ಕಾರ ಈ ಎರಡನ್ನೂ ನಿಷೇಧಿಸ­ಬೇಕು. ಜನರು ಎಚ್ಚೆತ್ತು­ಇವೆರಡರ­ಲ್ಲಿಯೂ ಭಾಗವಹಿಸುವುದನ್ನು ನಿಲ್ಲಿಸಬೇಕು.

 

ಪ್ರತಿಕ್ರಿಯಿಸಿ (+)