ರಾಜಕೀಯ ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯ ಲಹರಿಯಲ್ಲಿವೆ. ಬಿಜೆಪಿ, ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ತಮ್ಮ ಪಕ್ಷದ ಪರ ಅಲೆ ಎಬ್ಬಿಸುವ ತವಕದಲ್ಲಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ಸಂಯುಕ್ತ ಜನತಾದಳ (ಜೆಡಿಯು) ಬಿಹಾರದಲ್ಲಿ ಬಿಜೆಪಿ ಸಖ್ಯ ತೊರೆದು ಎನ್ಡಿಎ ಮೈತ್ರಿಕೂಟದ ಉತ್ಸಾಹ ಉಡುಗಿಸಿದೆ.

ಮೋದಿ ಅವರನ್ನು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ ನಿರ್ಧಾರ ಆ ಪಕ್ಷದ ಒಳಗೇ ಬಿಕ್ಕಟ್ಟು ಮೂಡಿಸಿತ್ತು. ಪಕ್ಷದ ಹಿರಿಯ ನೇತಾರ ಎಲ್.ಕೆ. ಅಡ್ವಾಣಿ ಅವರೇ ಮುನಿಸಿಕೊಂಡಿದ್ದರು. ಈ ಒಳಗುದಿ ಮತ್ತಷ್ಟು ಉಲ್ಬಣಿಸದಂತೆ ತಡೆಯುವಷ್ಟರಲ್ಲಿ ಪಕ್ಷದ ನಾಯಕರು ಹೈರಾಣ ಆಗಿದ್ದರು. ಮೋದಿಗೆ ಮಣೆ ಹಾಕಿದ ಅದೇ ತೀರ್ಮಾನ ಈಗ ಎನ್ಡಿಎ ಮೈತ್ರಿಕೂಟದಲ್ಲಿ ಕಂಪನಗಳನ್ನು ಎಬ್ಬಿಸಿದೆ. ಬಿಹಾರದಲ್ಲಿ ಹದಿನೇಳು ವರ್ಷಗಳಿಂದ ಜತೆಯಾಗಿದ್ದ, ಒಟ್ಟಿಗೆ ಚುನಾವಣೆ ಎದುರಿಸಿ, ಅಧಿಕಾರ ಹಂಚಿಕೊಂಡಿದ್ದ ಜೆಡಿಯು ಮತ್ತು ಬಿಜೆಪಿ ನಡುವಣ ಮೈತ್ರಿ ಮುರಿದುಬಿದ್ದು, ಎನ್ಡಿಎ ಅಡಿಪಾಯವನ್ನು ಅಲುಗಾಡಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರಿಗೆ ಮೋದಿ ಅವರನ್ನು ಕಂಡರೆ ಮೊದಲಿನಿಂದಲೂ ಅಷ್ಟಕಷ್ಟೇ. ಮೋದಿ ಅವರ ಉಗ್ರ ಹಿಂದೂತ್ವವಾದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸದಿದ್ದರೂ ಮುಖಂಡರ ಮಾತಿನ ವರಸೆ ಅದೇ ಧಾಟಿಯಲ್ಲಿದೆ. ಮೋದಿಯವರು ಬಿಜೆಪಿಯ ಪ್ರಚಾರದ ರಥ ಏರಿದರೆ ತಮ್ಮ ಪಕ್ಷಕ್ಕೆ ಅಲ್ಪಸಂಖ್ಯಾತ ಮುಸ್ಲಿಮರ ಮತಗಳು ತಪ್ಪಿಹೋಗುತ್ತವೆ ಎಂಬ ರಾಜಕೀಯ ಲೆಕ್ಕಾಚಾರವೂ ನಿತೀಶ್ ನಡೆಯಲ್ಲಿ ಕಾಣಿಸುತ್ತದೆ.

ನಿತೀಶ್ ಸರ್ಕಾರಕ್ಕೆ ಸರಳ ಬಹುಮತಕ್ಕೆ ನಾಲ್ವರು ಶಾಸಕರ ಕೊರತೆ ಇದೆ. ಪಕ್ಷೇತರ ಶಾಸಕರ ಬೆಂಬಲ ಇರುವುದರಿಂದ ಸರ್ಕಾರದ ಉಳಿವಿಗೆ ಈ ಕ್ಷಣಕ್ಕೆ ಅಪಾಯ ಇಲ್ಲ. ಆದರೆ, ಲೋಕಸಭಾ ಚುನಾವಣೆ ಎರಡೂ ಪಕ್ಷಗಳಿಗೆ ಅಗ್ನಿ ಪರೀಕ್ಷೆ ಆಗಲಿದೆ. ಮೈತ್ರಿ ಮುರಿದಿರುವುದರಿಂದ ಎರಡೂ ಪಕ್ಷಗಳಿಗೆ ನಷ್ಟ ಆಗಲಿದೆ.

ಆದರೆ ಯಾರಿಗೆ ಹೆಚ್ಚು ನಷ್ಟ ಎಂಬುದು ಈ ಚುನಾವಣಾ ಫಲಿತಾಂಶದಿಂದ ಗೊತ್ತಾಗಲಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್, ಬಿಜೆಪಿ ಮತ್ತು ಎಡಪಕ್ಷಗಳು ಇಲ್ಲದ ಹೊಸದೊಂದು ರಾಜಕೀಯ ರಂಗದ ಕನಸಿಗೆ ತಿದಿ ಒತ್ತಿದ್ದಾರೆ. ಒಡಿಶಾ ಮುಖ್ಯಮಂತ್ರಿ ಬಿಜು ಪಟ್ನಾಯಕ್, ತೆಲುಗುದೇಶಂ ಮುಖಂಡ ಚಂದ್ರಬಾಬು ನಾಯ್ಡು ಮತ್ತಿತರರು ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.

ಸೈದ್ಧಾಂತಿಕ ಬದ್ಧತೆ ಇಲ್ಲದ ವಿವಿಧ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಈ ನಡುವೆ ಬಿಹಾರದಲ್ಲಿ ಜೆಡಿಯು ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ನಿತೀಶ್ ಮುಂದಿನ ನಡೆ ಎತ್ತ ಎಂಬುದು ಈ ಕ್ಷಣಕ್ಕೆ ಯಕ್ಷಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.