ಶನಿವಾರ, ಜೂನ್ 19, 2021
27 °C

ಎಫ್–1: ಹ್ಯಾಮಿಲ್ಟನ್‌ಗೆ ‘ಪೋಲ್‌ ಪೊಸಿಷನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌ (ಎಎಫ್‌ಪಿ/ ಪಿಟಿಐ): ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಮೊದಲನೆಯವರಾಗಿ (ಪೋಲ್‌ ಪೊಸಿಷನ್‌) ಸ್ಪರ್ಧೆ ಆರಂಭಿಸಲಿದ್ದಾರೆ.ಶನಿವಾರ ನಡೆದ ಅರ್ಹತಾ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ರಿಟನ್‌ನ ಚಾಲಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ರೆಡ್‌ಬುಲ್‌ ತಂಡದ ಡೇನಿಯಲ್ ರಿಕಾರ್ಡೊ ಮತ್ತು ಮರ್ಸಿಡಿಸ್‌ ತಂಡದ ನಿಕೊ ರೋಸ್‌ಬರ್ಗ್‌ ಕ್ರಮವಾಗಿ ಎರಡು ಮತ್ತು ಮೂರನೆಯವರಾಗಿ ಸ್ಪರ್ಧೆ ಆರಂಭಿಸುವರು.ಫೋರ್ಸ್‌ ಇಂಡಿಯಾ ತಂಡದ ನಿಕೊ ಹುಲ್ಕೆನ್‌ಬರ್ಗ್‌ ಅರ್ಹತಾ ಹಂತದಲ್ಲಿ ಗಮನಾರ್ಹ ಪ್ರದರ್ಶನ ತೋರಿ ಏಳನೇ ಸ್ಥಾನ ಪಡೆದರು. ಈ ತಂಡದ ಇನ್ನೊಬ್ಬ ಚಾಲಕ ಸೆರ್ಜಿಯೊ ಪೆರೆಜ್‌ 16ನೆಯವರಾಗಿ ಸ್ಪರ್ಧೆ ಆರಂಭಿಸಲಿದ್ದಾರೆ. ಹಾಲಿ ಚಾಂಪಿಯನ್‌ ಸೆಬಾಸ್ಟಿಯನ್‌ ವೆಟೆಲ್‌ ಋತುವಿನ ಮೊದಲ ರೇಸ್‌ನಲ್ಲಿ 12ನೆಯವರಾಗಿ ಸ್ಪರ್ಧೆ ಆರಂಭಿಸುವರು. ರೆಡ್‌ಬುಲ್‌ ತಂಡದ ಈ ಚಾಲಕ ಅರ್ಹತಾ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.