ರಟ್ಟೀಹಳ್ಳಿ; ವಿವೇಕಾನಂದರ ಸಂದೇಶಗಳು ನಮ್ಮ ಅಂತರಂಗದ ಕದವನ್ನು ನಿತ್ಯ ತಟ್ಟುತ್ತಿವೆ, ನಮ್ಮ ನಾಡು ನುಡಿ, ಸಂಸ್ಕೃತಿ ಮೌಲ್ಯಗಳನ್ನು ಎತ್ತಿ ಹಿಡಿದು, ಇಡೀ ವಿಶ್ವಕ್ಕೆ ಸಾರಿದ ವಿವೇಕಾನಂದರ “ವಿವೇಕ” ಆನಂದದ ನುಡಿಗಳು ರಾಷ್ಟ್ರಪ್ರೇಮದ -ವಿಶ್ವ ಭ್ರಾತೃತ್ವದ ನಂದಾದೀಪವಾಗಿ ಬೆಳಗುವಂತಾಗಲು ನಾವು ಸಂಕಲ್ಪ ಮಾಡಬೇಕು ಎಂದು ಡಾ. ಎಂ.ಬಿ. ತಲ್ಲೂರ ನುಡಿದರು.

ಇಲ್ಲಿನ ಕುಮಾರೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಎಬಿವಿಪಿಯ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಮಾತನಾಡಿದರು.“ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನಾವೆಲ್ಲ ವಿವೇಕಾನಂದರ ಬದುಕು, ಚಿಂತನೆ, ಆದರ್ಶಗಳ. ನೆನಪು ಮಾಡಿಕೊಂಡು ಸರ್ವಧರ್ಮ ಸಮಭಾವ, ಸಹೋದರತೆ, ದೇಶಪ್ರೇಮ, ವಿಶ್ವಪ್ರೇಮ ಬೆಳೆಸಿಕೊಂಡು ಸೌಹಾರ್ದತೆಯ ಬೆಳಕಲ್ಲಿ ಬಾಳುವ ದೀಕ್ಷೆ ತೊಡಬೇಕು” ಎಂದರು.

ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡುತ್ತಾ ನಮ್ಮ ಭಾರತ ಮಾತೆ “ಹಿರಣ್ಯಗರ್ಭ ವಸುಂಧರೆ” ಎಂಬ ಹಿರಿಮೆಗೆ ಪಾತ್ರಳಾದ ಮಹಾಮಹಿಮಳು. ಇವಳ ಪುಣ್ಯಗರ್ಭದಲ್ಲಿ ಕೋಟಿ-ಕೋಟಿ ಮಹಾತ್ಮರು, ವೀರರು, ದೇಶಪ್ರೇಮಿಗಳು,ಸಾಧಕರು ಜನ್ಮತಾಳಿದ್ದಾರೆ. ದೇಶದ ಹಿರಿಮೆ-ಗರಿಮೆಗಳನ್ನು ದೇಶ-ವಿದೇಶಗಳಲ್ಲಿ ಮೆರೆಸಿದ್ದಾರೆ, ಅಂತ ಪುತ್ರರತ್ನರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು’ ಎಂದರು.

ಎಬಿವಿಪಿಯ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎಸ್. ಸಿದ್ದನವರ ಮತ್ತು ಎಂ.ಆರ್.ಬಸವನಾಳಮಠ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಬಿ.ಜಿ. ಅಮೋಘಿಮಠ, ಉಪಾಧ್ಯಕ್ಷರಾದ ಎಸ್.ಬಿ.ಬೆನಕನಕೊಂಡ, ಡಿ,ಭರಮಗೌಡ್ರ, ಎಚ್.ವಿ. ಪ್ರಕಾಶ, ಕಾರ್ಯದರ್ಶಿ ಚೇತನ ಅಂಗರಗಟ್ಟಿ. ಸಂಚಾಲಕರಾದ ಪ್ರಸನ್ನ ಅಘನಾಶಿನಿಕರ, ಸತೀಶ ಸರಶೆಟ್ಟ್ರ, ಪ್ರವೀಣ ನಾಯಕ, ರಾಕೇಶ ಡಿ.ಜಿ, ಮಂಜುನಾಥ ತಳವಾರ, ಬಸವರಾಜ ದ್ಯಾಚಕ್ಕಳವರ, ಪ್ರಶಾಂತ ಜಾಧವ, ಬಸವರಾಜ ಹೊಸಮನಿ. ಫಾಲಾಕ್ಷಿ,ಎಂ,ಕೆ, ಭೀಷ್ಮಾಚಾರಿ. ಜಗದೀಶ ಎಂ, ನವೀನ ಜಾಧವ, ಅರುಣ ಕುಪ್ಪೇಲೂರ. ತೀರ್ಥೇಶ,ಬಿ,ಆರ, ಇತರರಿದ್ದರು. ಎಚ.ವಿ. ಪ್ರಕಾಶ ಸ್ವಾಗತಿಸಿ ವಂದಿಸಿದರು, ಡಿ. ಭರಮಗೌಡ್ರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.