ಮೌಂಟ್ ಎವರೆಸ್ಟ್ಗೆ ಈ ಹೆಸರು ಬಂದದ್ದು ಹೇಗೆ?
ಭಾರತದಲ್ಲಿದ್ದ ಬ್ರಿಟಿಷ್ ಸರ್ವೇಯರ್ ಸರ್ ಜಾರ್ಜ್ ಎವರೆಸ್ಟ್. 8,840 ಮೀಟರ್ ಎತ್ತರದ ಪರ್ವತಕ್ಕೆ ಅವರ ಹೆಸರನ್ನೇ ಇಡಲಾಗಿದೆ.

ನೇಪಾಳ ಹಾಗೂ ಟಿಬೆಟ್ನಲ್ಲಿ ಮೌಂಟ್ ಎವರೆಸ್ಟನ್ನು ಏನೆಂದು ಕರೆಯುತ್ತಾರೆ?
ನೇಪಾಳದಲ್ಲಿ ಎವರೆಸ್ಟನ್ನು `ಸಾಗರ್ಮಾತಾ~ ಎನ್ನುತ್ತಾರೆ. ಟಿಬೆಟಿಯನ್ನರು `ಚೋಮೋಲುಂಗ್ಮಾ~ ಎಂದು ಕರೆಯುತ್ತಾರೆ.

ಪರ್ವತವು ರೂಪುಗೊಂಡದ್ದು ಹೇಗೆ?
ಮೇಜಿನ ಮೇಲೆ ಬಟ್ಟೆಯೊಂದನ್ನು ಹಾಕಿ. ಆಮೇಲೆ ಮೇಜನ್ನು ಮೆಲ್ಲಗೆ ಜರುಗಿಸಿ. ಮೇಲಿನ ಬಟ್ಟೆಯಲ್ಲಿ ಪದರಗಳು ಮೂಡುತ್ತವೆ. ಅದೇ ರೀತಿ ಭೂಮಿಯ ತಳದ ಒತ್ತಡದಿಂದಾಗಿ ಭೂಭಾಗವು ತುಸು ಜರುಗಿದಾಗ, ಅದರ ಮೇಲ್ಭಾಗದ ಹಿಮಪದರಗಳು ಪರ್ವತಗಳಾಗಿ ರೂಪು ಪಡೆಯುತ್ತವೆ. ಮೌಂಟ್ ಎವರೆಸ್ಟ್ ರೂಪುಗೊಂಡಿರುವುದೂ ಹೀಗೆಯೇ. ಈಗಲೂ ಅಪರೂಪಕ್ಕೆ ಭೂಭಾಗ ತುಸು ಜರುಗಿದಾಗ ಪರ್ವತದಲ್ಲಿ ಹೊಸ ಪದರಗಳು ಮೂಡುತ್ತವೆ.

ಪರ್ವತದಲ್ಲಿನ ತಾಪಮಾನವೆಷ್ಟು?
ಚಳಿಗಾಲದಲ್ಲಿ ಮೌಂಟ್ ಎವರೆಸ್ಟ್ನ ಸರಾಸರಿ ಉಷ್ಣಾಂಶ ಮೈನಸ್ 36 ಡಿಗ್ರಿ ಸೆಲ್ಷಿಯಸ್. ಬೇಸಿಗೆಯಲ್ಲಿ ಮೈನಸ್ 60 ಡಿಗ್ರಿ ಸೆಂಟಿಗ್ರೇಡ್ವರೆಗೂ ಕುಸಿಯಬಲ್ಲದು. ಅಲ್ಲಿನ ಉಷ್ಣಾಂಶ ಸರಾಸರಿ ಮೈನಸ್ 19 ಡಿಗ್ರಿ ಸೆಂಟಿಗ್ರೇಡ್.

ಎವರೆಸ್ಟ್ಗೆ ಈಗಿರುವ ಆತಂಕಗಳೇನು?
ಅತಿ ಹೆಚ್ಚು ತ್ಯಾಜ್ಯವಸ್ತುಗಳನ್ನು ಅಡಗಿಸಿಟ್ಟುಕೊಂಡ ತಾಣ ಎಂಬ ಕಳಂಕ ಅದಕ್ಕೆ ಅಂಟಿಕೊಳ್ಳುವ ಅಪಾಯವಿದೆ. ಆಮ್ಲಜನಕ ತುಂಬಿಸಿದ ನಂತರ ಬಿಸುಟ ಖಾಲಿ ಸಿಲಿಂಡರ್ಗಳು, ಟೆಂಟ್ಗಳು, ಬಳಸಿ ಬಿಸಾಡಿದ ಪಾತ್ರೆ ಪಡಗಗಳು, ಹಿಮಗಟ್ಟಿದ ಆಹಾರ, ಗಾಜಿನ ಬಾಟಲುಗಳು, ಕ್ಯಾನ್ಗಳು ಹಾಗೂ ಪೇಪರ್ ಪ್ಲೇಟ್ಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಅಂತರ್ರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನಾಚರಣೆ ಎಂದು ನಡೆಯುತ್ತದೆ?
1953ರ ಮೇ 29ರಂದು ಸರ್ ಎಡ್ಮಂಡ್ ಹಿಲ್ಲರಿ ಹಾಗೂ ತೇನ್ಸಿಂಗ್ ನೋರ್ಗೆ ಮೌಂಟ್ ಎವರೆಸ್ಟನ್ನು ಮೊದಲು ಏರಿದರು. ಅದರ ಸ್ಮರಣಾರ್ಥ ಪ್ರತಿವರ್ಷ ಮೇ 29ನ್ನು `ಅಂತರ್ರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ~ ಎಂದು ಆಚರಿಸಲಾಗುತ್ತದೆ.

ಎವರೆಸ್ಟ್ ಏರಿದ ಸಾಧಕರು
ಮೊದಲ ಮಹಿಳೆ- ಜಪಾನಿನ ಜಂಕೋ ತಾಬಿ (1975)
ಭಾರತದ ಮೊದಲ ಮಹಿಳೆ- ಬಚೇಂದ್ರಿ ಪಾಲ್ (1984)
ಮೊದಲು ಏರಿದ ದೈಹಿಕವಾಗಿ ಅಸಮರ್ಥ ವ್ಯಕ್ತಿ- ಟಾಮ್ ವಿಟ್ಟಕರ್ (1998)
ಮೊದಲು ಏರಿದ ದೃಷ್ಟಿಹೀನ ವ್ಯಕ್ತಿ- ಎರಿಕ್ ವೀಹೆನ್ಮೇಯರ್ (2001)
ಅತಿ ಹಿರಿಯ ಆರೋಹಿ- 76 ವರ್ಷದ ಮಿನ್ ಬಹಾದುರ್ ಶೆರ್ಚಾನ್ (2008)
ಅತಿ ಕಿರಿಯ ಆರೋಹಿ- 13 ವಯಸ್ಸಿನ ಜೋರ್ಡಾನ್ ರೊಮೆರೊ (2010)
ಅತಿ ಹೆಚ್ಚು ಸಲ ಹತ್ತಿರುವ ವ್ಯಕ್ತಿ-ಅಪಾ ಶರ್ಪಾ (21 ಸಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.