ಸರ್.ಎಂ.ವಿ.ಪಿಯು ಕಾಲೇಜು
ದಾವಣಗೆರೆ: ನಗರದ ಹದಡಿ ರಸ್ತೆಯ ಸರ್.ಎಂ.ವಿ. ಪಿಯು ಕಾಲೇಜು ಆರಂಭವಾದ ಅಲ್ಪ ಅವಧಿಯಲ್ಲಿಯೇ ಉತ್ತಮ ಶಿಕ್ಷಣ ಹಾಗೂ ಫಲಿತಾಂಶಕ್ಕಾಗಿ ಮಧ್ಯ ಕರ್ನಾಟಕ ದಲ್ಲಿಯೇ ತನ್ನದೇ ಆದ ಛಾಪನ್ನು ಮೂಡಿಸಿದೆ. 2009ರಲ್ಲಿ ಕೇವಲ 92 ವಿದ್ಯಾರ್ಥಿಗಳ ನೋಂದಣಿಯೊಂದಿಗೆ ಆರಂಭವಾದ ಈ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ 560 ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಅಧ್ಯಯನಕ್ಕಾಗಿ ನೋದಣಿ ಮಾಡಿಸಿದ್ದಾರೆ.

ಪಿಸಿಎಂಬಿ, ಪಿಸಿಎಂಸಿ ಮತ್ತು ಪಿಸಿಎಂಇ ವಿಷಯಗಳ ಕೋರ್ಸ್ ಗಳೊಂದಿಗೆ ಕಾಮರ್ಸ್ ಕೂಡ ಈ ಕಾಲೇಜಿನಲ್ಲಿ ಲಭ್ಯವಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 43ರಷ್ಟು ಅಂಕಗಳನ್ನು ಪಡೆದು ಈ ಕಾಲೇಜಿನಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಶೇ 98ರಷ್ಟು ಅಂಕಗಳನ್ನು ಪಡೆದು ಹೊರ ಬಂದಿದ್ದಾರೆ. ಈ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಹಲವು ವಿದ್ಯಾರ್ಥಿ ಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆ ಸಹ ಮಾಡಿದೆ.
‘ನಮ್ಮ ಕಾಲೇಜಿನಲ್ಲಿ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯ ರಿಂಗ್ ಪಠ್ಯಗಳ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಇಟಿ ಹಾಗೂ ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತಿದೆ.
ಪೂರಕವಾದ ಆಧುನಿಕ ಪ್ರಯೋಗಾಲಯದ ಸೌಲಭ್ಯ ಇದೆ. ಜತೆಗೆ ವಿಶಾಲವಾದ ಗ್ರಂಥಾಲಯವಿದೆ. 15 ವರ್ಷ ಅನುಭವ ಇರುವ ಶಿಕ್ಷಕ ವರ್ಗವಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ವಿಷಯಗಳ ಪಿಯು ಪರೀಕ್ಷೆಯಲ್ಲಿ ಶೇ 98ರಷ್ಟು ಉತ್ತಮ ಫಲಿತಾಂಶ ಬಂದಿದೆ. ಈಗಾಗಲೇ ಬಹುತೇಕ ಸೀಟುಗಳು ಭರ್ತಿಯಾಗಿದ್ದು, ಕೆಲವೇ ಸೀಟುಗಳು ಬಾಕಿ ಇವೆ’ ಎಂದು ಮಾಹಿತಿ ನೀಡಿದರು ಕಾಲೇಜಿನ ಸಂಸ್ಥಾಪಕ ಎಸ್.ಜೆ. ಶ್ರೀಧರ್.

ಮಾಹಿತಿಗಾಗಿ ಪ್ರಾಂಶುಪಾಲರು ಡಾ.ವಿ.ರಾಜೇಂದ್ರ ನಾಯ್ಡು ಮೊಬೈಲ್ ಸಂಖ್ಯೆ; 92433 12223 ಸಂಪರ್ಕಿಸಬಹುದು.

ಮಹೇಶ್ ಪಿಯು ಕಾಲೇಜು
ನಗರದ ವಿವೇಕಾನಂದ ಬಡಾವಣೆಯ ಮಹೇಶ್ ಪಿಯು ಕಾಲೇಜು, ಜಿಲೆಯಲ್ಲಿಯೇ ಪ್ರಥಮವಾಗಿ ಹವಾ ನಿಯಂತ್ರಿತ ಕೊಠಡಿಗಳನ್ನು ಹೊಂದಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಗಳೂರು ಮೂಲದ ಈ ಕಾಲೇಜು 2013ರಲ್ಲಿ ಆರಂಭವಾಗಿದ್ದು, ಪ್ರಸ್ತುತ ಪಿಸಿಎಂಸಿ ಮತ್ತು ಪಿಸಿಎಂಬಿ ವಿಷಯಗಳ ಕೋರ್ಸ್ನಲ್ಲಿ 86 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಾಲೇಜಿನ 6 ತರಗತಿಗಳಲ್ಲಿಯೂ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಗ್ರಂಥಾಲಯ ಹಾಗೂ ಲ್ಯಾಬ್ ವ್ಯವಸ್ಥೆ ಹೊಂದಿದೆ. ಜತೆಗೆ ವಿದ್ಯಾರ್ಥಿ, ವಿದ್ಯಾರ್ಥಿನಿ ಯರಿಗಾಗಿ ಹಾಸ್ಟೆಲ್ ಸೌಲಭ್ಯ ಕೂಡ ಇದೆ. ಈಗಾಗಲೇ ನೋಂದಣಿ ಆರಂಭವಾಗಿದ್ದು, ಪಿಸಿಎಂಬಿ ಮತ್ತು ಪಿಸಿಎಂಸಿ ಕೋರ್ಸ್ಗಳಿಗೆ ಸೀಟುಗಳು ಲಭ್ಯವಿದೆ.

ಪಠ್ಯಗಳ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಇಟಿ ಹಾಗೂ ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿಯನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಪ್ರಾಂಶುಪಾಲ ಸುಜಯ್ ಮೊಬೈಲ್ ಸಂಖ್ಯೆ: 90366 57575 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.