ಬೆಂಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ (ಎಸ್ಎಚ್ಆರ್ಸಿ) ಕಚೇರಿಯು ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿರುವುದಾಗಿ ದೂರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

`ಸಿಕ್ರಂ~ ಸಂಘಟನೆ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.

ನಿಯಮದ ಪ್ರಕಾರ ಕಚೇರಿಯು ಕನಿಷ್ಠ 20 ಸಾವಿರ ಚದರ ಅಡಿ ಜಾಗ ಹೊಂದಿರಬೇಕು. ಆದರೆ ಈಗ ಇರುವುದು ಕೇವಲ 4,500 ಚದರ ಅಡಿ ಮಾತ್ರ.

ವೃಂದ ಮತ್ತು ನೇಮಕಾತಿ ನಿಯಮದ ಅಡಿ ನೇಮಕಾತಿ ಪ್ರಕ್ರಿಯೆ ಇನ್ನೂ ಸರ್ಕಾರ ನಡೆಸಿಲ್ಲ. ಸದ್ಯ ರಾಜ್ಯದಾದ್ಯಂತ ಕೇವಲ 77 ಮಂದಿ ಸಿಬ್ಬಂದಿ ಮಾತ್ರ ಇದ್ದು, ಅವರೂ ನಿಯೋಜನೆ ಮೇರೆಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದು ಅರ್ಜಿದಾರರ ವಾದ.

`ಆರು ಪೊಲೀಸ್ ಠಾಣೆಗಳಲ್ಲಿ ಆಯೋಗದ ಶಾಖೆ ತೆರೆಯುವ ಶಿಫಾರಸು ದೂಳು ತಿನ್ನುತ್ತಿದೆ. ಕಳೆದ ಬಜೆಟ್ನಲ್ಲಿ ಆಯೋಗದ ಮೂಲ ಸೌಕರ್ಯಕ್ಕೆ ಏಳು ಕೋಟಿ ರೂಪಾಯಿ ಹಣ ಮಂಜೂರು ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಕೇವಲ 2.25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ~ ಎಂದು ಅರ್ಜಿದಾರರ ಪರ ವಕೀಲ ಎಂ.ಸಿಜಿ ವಾದಿಸಿದರು. ವಿಚಾರಣೆ ಮುಂದೂಡಲಾಯಿತು.

ಎಚ್ಡಿಕೆ ವಿವಾದ: 28ಕ್ಕೆ ವಿಚಾರಣೆ
ಲೋಕಾಯುಕ್ತ ವಿಶೇಷ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ 28ಕ್ಕೆ ಮುಂದೂಡಿದೆ. ಇವರ ವಿರುದ್ಧ ವಕೀಲ ವಿನೋದ್ಕುಮಾರ್ ದಾಖಲು ಮಾಡಿರುವ ದೂರಿನ ವಿವಾದ ಇದಾಗಿದೆ.

ಇನ್ನೊಂದು ಅರ್ಜಿಯಲ್ಲಿ, ಲೋಕಾಯುಕ್ತ ಕೋರ್ಟ್ ಪ್ರತಿವಾದಿ ಪಟ್ಟಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಹೆಸರನ್ನು ಕೈ ಬಿಟ್ಟಿರುವುದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನೂ ನ್ಯಾಯಮೂರ್ತಿ ವಿ.ಜಗನ್ನಾಥನ್ ಅಂದೇ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.