ಮಂಗಳವಾರ, ಮೇ 18, 2021
28 °C

ಏಕದಿನ ಕ್ರಿಕೆಟ್‌ಗೆ ಮಹತ್ವ ನೀಡಬೇಕಿತ್ತು ದ್ರಾವಿಡ್ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್: ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದರಿಂದ ಏನನ್ನೋ ಕಳೆದುಕೊಂಡಂತಹ ಭಾವನೆ ಉಂಟಾಗುವುದಿಲ್ಲ  ಎಂದು ಶುಕ್ರವಾರ ವೃತ್ತಿಜೀವನದ ಕಟ್ಟಕಡೆಯ ಏಕದಿನ ಪಂದ್ಯವನ್ನಾಡಲಿರುವ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಆದರೆ ಟೆಸ್ಟ್‌ಗೆ ನೀಡಿದ ಮಹತ್ವಕ್ಕಿಂತ ಅಧಿಕ ಗಮನವನ್ನು ನಿಗದಿತ ಓವರ್‌ಗಳ ಪಂದ್ಯಗಳಿಗೆ ನೀಡಬೇಕಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.ಇಂಗ್ಲೆಂಡ್ ವಿರುದ್ಧ ಕಾರ್ಡಿಫ್‌ನಲ್ಲಿ ನಡೆಯುವ ಪಂದ್ಯದೊಂದಿಗೆ ದ್ರಾವಿಡ್ ಅವರ ಏಕದಿನ ಕ್ರಿಕೆಟ್ ಜೀವನಕ್ಕೆ ತೆರೆಬೀಳಲಿದೆ. ನಿವೃತ್ತಿಯ ಬಗ್ಗೆ ಗಾಬರಿ ಏನೂ ಇಲ್ಲ ಎಂದು ಕರ್ನಾಟಕದ ಬ್ಯಾಟ್ಸ್‌ಮನ್ ನುಡಿದರು.`ನಿವೃತ್ತಿಯ ಬಳಿಕ ಎಲ್ಲವೂ ಕೊನೆಗೊಂಡಿತು ಎಂದು ಭಾವಿಸುವುದಿಲ್ಲ. ಆದರೆ ನನ್ನ ಜೀವನದ ಹೆಚ್ಚಿನ ಶ್ರಮವನ್ನು ಟೆಸ್ಟ್‌ಗಿಂತ ಏಕದಿನ ಪಂದ್ಯಗಳಿಗೆ ಮೀಸಲಿಡಬೇಕಿತ್ತು~ ಎಂದು ದ್ರಾವಿಡ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.`ನಿವೃತ್ತಿ ಹೊಂದುತ್ತಿದ್ದೇನೆ ಎಂದು ಗಾಬರಿಗೊಂಡಿಲ್ಲ. ಈ ದಿನದ ಬಗ್ಗೆ ಹೆದರುವ ಅಗತ್ಯವೂ ಇಲ್ಲ. ಒಂದಲ್ಲ ಒಂದು ದಿನ ನಿವೃತ್ತಿ ಹೊಂದಬೇಕು ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಅದೇ ರೀತಿ ಏಕದಿನ ಕ್ರಿಕೆಟ್‌ನಿಂದ ವಿರಮಿಸಿದ ಬಳಿಕ ನನ್ನ ಜೀವನದಲ್ಲಿ ಹೆಚ್ಚಿನ ಬದಲಾವಣೆ ಉಂಟಾಗದು~ ಎಂದರು.ದ್ರಾವಿಡ್ ಏಕೈಕ ಟ್ವೆಂಟಿ-20 ಪಂದ್ಯ ಆಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.