ಸೋಮವಾರ, ಏಪ್ರಿಲ್ 19, 2021
26 °C

ಏಕಾಂಗಿತನದಿಂದ ಬಳಲಿತ್ತು ಘೇಂಡಾಮೃಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾನವರಲ್ಲಿ ಕರುಳುಬಳ್ಳಿ (ಸಹೋದರ ಸಂಬಂಧ) ಸಂಬಂಧದಲ್ಲಿ ಮದುವೆಯಾದವರಿಗೆ ಜನಿಸುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ತಲೆದೋರುವುದು ಗೊತ್ತು. ಈ ಸಮಸ್ಯೆ ವನ್ಯ ಪ್ರಾಣಿಗಳಲ್ಲಿಯೂ ಆಗುತ್ತದಂತೆ!

ಗುರುವಾರ ಸಾವಿಗೀಡಾದ 16 ವರ್ಷದ ಹೆಣ್ಣು ಘೇಂಡಾಮೃಗ `ಪ್ರಿಯಾ~ ಕೂಡ ಇಂತಹ ಸಮಸ್ಯೆಯಿಂದ ಬಳಲಿತ್ತು ಎಂದು ಹೇಳಲಾಗುತ್ತಿದೆ.ಶುಕ್ರವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಶ್ರೀಜಯಚಾಮ ರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ. ರವಿ, ` ಪ್ರಿಯಾ ತಂದೆ ರಾಜೇಂದ್ರ ಮತ್ತು ತಾಯಿ ಪ್ರೇಮಾ ಇದೇ ಮೃಗಾಲಯ ದಲ್ಲಿ ಜನಿಸಿದ್ದವು. ಅವುಗಳಿಗೆ ಪ್ರಿಯಾ 1996ರಲ್ಲಿ ಜನಿಸಿತ್ತು. ಆದರೆ ಇವೆರಡಕ್ಕೂ ಸಹೋದರ ಸಂಬಂಧ ಇದ್ದುದ್ದರಿಂದ ಪ್ರಿಯಾಗೆ ಸಮಸ್ಯೆಯಾಗಿ ರಲೂಬಹುದು~ ಎಂದು ಹೇಳುತ್ತಾರೆ.`ಪ್ರಿಯಾ  `ಏಕಾಂಗಿತನ~ವನ್ನು ಅನುಭವಿಸುತ್ತಿತ್ತು. ಇದರಿಂದಾಗಿಯೇ ಎರಡು ದಿನಗಳಿಂದ  ಆಹಾರ ಸೇವನೆ ಬಿಟ್ಟು ನಿತ್ರಾಣಗೊಂಡಿತ್ತು. ಮುಂಗಾರಿನ ವಾತಾವರಣದಲ್ಲಿ ಕೆಲವು ಅಲರ್ಜಿಗಳು ಅಂಟಿಕೊಂಡು ಅನಾ ರೋಗ್ಯಕ್ಕೆ ತುತ್ತಾಯಿತು. ರೋಗಲಕ್ಷಣ ಗಳು ಕಂಡುಬಂದಾಗಲೇ ಕೆಲವು ಚಿಕಿತ್ಸೆ ನೀಡಲಾಗಿತ್ತು. ಆದರೆ, ಅತ್ಯಂತ ನಾಚಿಕೆ ಸ್ವಭಾವದ ಈ ಪ್ರಾಣಿಯು ವೈದ್ಯರ ಚಿಕಿತ್ಸೆಗೆ ತಕ್ಷಣ ಸ್ಪಂದಿಸುತ್ತಿರಲಿಲ್ಲ. ಬಹಳಷ್ಟು ಕಷ್ಟದಿಂದಲೇ ಚಿಕಿತ್ಸೆ ನೀಡಲಾಗಿತ್ತು~ ಎಂದು ಹೇಳಿದರು.`ಯುರೋಪ್ ರಾಷ್ಟ್ರಗಳಲ್ಲಿ ಪ್ರಾಣಿಗಳ ವಂಶಾವಳಿಯ ದಾಖ ಲೀಕರಣ ವ್ಯವಸ್ಥೆ ಇದೆ. ಆದರೆ ಅದು ನಮ್ಮಲ್ಲಿ ಇಲ್ಲ. ಇದರಿಂದಾಗಿಯೇ ಬಹಳಷ್ಟು ಗೊಂದಲಗಳಾಗುತ್ತವೆ. ಅಲ್ಲದೇ ಪ್ರತಿವರ್ಷವೂ ಮೃಗಾಲಯ ದಲ್ಲಿ ಸಾವುಗಳು ಸಂಭವಿಸುತ್ತವೆ. ವಿಷಪ್ರಾಶನದ  ಘಟನೆಗಳು ನಡೆದಿಲ್ಲ~ ಎಂದು ಸ್ಪಷ್ಟಪಡಿಸಿದರು.`ಸದ್ಯ ನಡೆದಿರುವ ಘಟನೆಗಳಲ್ಲಿ ಮೃಗಾಲಯದ ಸಿಬ್ಬಂದಿ ಅಥವಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಇಲ್ಲ.  ಬೇಟೆ ಚೀತಾ ಮತ್ತು ಘೇಂಡಾ ಮೃಗಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು. ಆದರೂ ಅವು ನಮ್ಮ ಮೃಗಾಲಯದಲ್ಲಿ ಸಂತಾನ್ಪೋತ್ಪತ್ತಿ ಮಾಡಿರುವುದು ವಿಶೇಷ. 16 ವರ್ಷದ ಹಿಂದೆ ಇದು ನಮ್ಮ ವ್ಯವಸ್ಥೆಯ ಗುಣಮಟ್ಟ ತೋರಿಸುತ್ತದೆ.  ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡು, ಬೇಟೆ ಯಾಡಿಕೊಂಡು ಇರುವ ಪ್ರಾಣಿಗಳನ್ನು ನಾಡಿಗೆ ತಂದು ಪಂಜರದಲ್ಲಿಟ್ಟು ಸಲಹುವುದು ಸುಲಭದ ಕೆಲಸವಲ್ಲ. ಉದಾಹರಣೆಗೆ ಬೇಟೆ ಚೀತಾ ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಓಡುವ ಪ್ರಾಣಿ. ಸಾವಿರಾರು ಎಕರೆ ವಿಶಾಲವಾದ ಅರಣ್ಯಪ್ರದೇಶದಲ್ಲಿ ಓಡುವ ಮಾದರಿಯಲ್ಲಿಯೇ ಮೃಗಾಲಯದ ತನ್ನ ಮನೆಯಲ್ಲಿ ಓಡಲು ಹೋಗುವುದು, ಮರಹತ್ತಿ ಜಿಗಿ ಯುವುದು ಮುಂತಾದ ಚಟುವಟಿಕೆ ಮಾಡಲು ಹೋಗಿ ಗಾಯಗೊಳ್ಳುತ್ತವೆ. ಅಲ್ಲದೇ ಪ್ರತಿದಿನ ಸಾವಿರಾರು ಪ್ರವಾಸಿ ಗರು ಬಂದು ಹೋಗುವು ದರಿಂದ ಕಾಡಿನ ವಾತಾವರಣ ಸಿಗುವುದೇ ಇಲ್ಲ. ಹೊತ್ತಿಗೆ ಸರಿಯಾಗಿ ಊಟ ಸಿಗುವುದು ಬಿಟ್ಟರೆ ಅರಣ್ಯದ ವಾತಾವರಣದ ಬಹುತೇಕ  ಚಟುವಟಿಕೆ ಗಳಿಂದ ಈ ಪ್ರಾಣಿಗಳು ವಿಮುಖ ವಾಗುತ್ತವೆ~ ಎಂದು ವಿವರಿಸಿದರು.`ಮೃಗಾಲಯದಲ್ಲಿ ಎಲ್ಲ ಪ್ರಾಣಿ ಗಳಿಗೂ ನಿಯಮಿತವಾಗಿ ರೋಗ ನಿರೋಧಕ ಲಸಿಕೆಗಳನ್ನೂ ಹಾಕಲಾಗು ತ್ತಿದೆ. ವಯಸ್ಸಿನ ಕಾರಣದಿಂದಲೂ ಇವು ಸಾವಿಗೀಡಾಗುತ್ತಿರುವುದು ಸಹಜ. ಈ ಆರು ವಾರಗಳಲ್ಲಿ ಮೃತಪಟ್ಟ ಪ್ರಾಣಿಗಳಲ್ಲಿ ಅಸಹಜ ಲಕ್ಷಣಗಳು ವರದಿಯಾಗಿಲ್ಲ. ಕಾಡಿನಿಂದ ದೂರ ಇದ್ದರೂ ರೀಟಾ ಹುಲಿಯು 20 ವರ್ಷ ಬದುಕಿದೆ. ಇದೀಗ ಅದು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.