ಚೆನ್ನೈ(ಪಿಟಿಐ): ಅಗ್ಗದ ದರದ ವಿಮಾನ ಪ್ರಯಾಣ ಒದಗಿಸುವ ಚಿಂತನೆಯಲ್ಲಿ ರುವ ‘ಏರ್ ಏಷ್ಯಾ ಇಂಡಿಯಾ’ ಕಂಪೆನಿ, ಏರ್ಬಸ್ ಕಂಪೆನಿಯಿಂದ ‘ಎ320’ ವಿಮಾನವನ್ನು ಪಡೆದುಕೊಳ್ಳುವುದ ರೊಂದಿಗೆ ಅಧಿಕೃತ ಹಾರಾಟ ಆರಂಭಕ್ಕೆ ಕ್ಷಣಗಣನೆ ಶುರುವಾದಂತಾಗಿದೆ.

ಯೂರೋಪ್ನ ಹೆಸರಾಂತ ವಿಮಾನ ತಯಾರಿಕಾ ಕಂಪೆನಿ ಏರ್ ಬಸ್ನಿಂದ ‘ಏರ್ ಏಷ್ಯಾ ಇಂಡಿಯಾ’ ಖರೀದಿಸಿದ ಮೊದಲ ‘ಎ320’ ವಿಮಾನ ಶನಿವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ರೆಕ್ಕೆಗಳು ಮಡಿಚಿದಂತೆ ಇರುವ (ಶಾರ್ಕ್ಲೆಟ್ಸ್) ಈ ವಿಮಾನದ ವೈಶಿಷ್ಟ್ಯ ವೆಂದರೆ ಸುಲಭದ ಹಾರಾಟ ಕಡಿಮೆ, ಇಂಧನ ಬಳಕೆ, ಕಡಿಮೆ ಹೊಗೆ ವಿಸರ್ಜನೆ.

‘ಏರ್ ಏಷ್ಯಾ ಇಂಡಿಯಾ’, ಟಾಟಾ ಸನ್ಸ್ ಲಿ., ಮಲೇಷ್ಯಾದ ಏರ್ಏಷ್ಯಾ ಬಿಎಚ್ಡಿ ಮತ್ತು ಅರುಣ್ ಭಾಟಿಯಾ ಅವರ ಟೆಲೆಸ್ಟ್ರಾ ಟ್ರೇಡ್ಪ್ಲೇಸ್ ಪ್ರೈ.ಲಿ.ನ ಜಂಟಿ ಸಹಭಾಗಿತ್ವದ ಕಂಪೆನಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.