ಬುಧವಾರ, ಜೂನ್ 23, 2021
30 °C

ಏಷ್ಯಾಕಪ್‌: ಪಾಕ್‌ಗೆ 246ರನ್‌ಗಳ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ, ಬಾಂಗ್ಲಾದೇಶ (ಪಿಟಿಐ): ರೋಹಿತ್‌ ಶರ್ಮಾ (56ರನ್‌, 7ಬೌ, 2ಸಿ), ಅಂಬಟಿ ರಾಯುಡು (58ರನ್‌,4ಬೌ, 1ಸಿ) ಹಾಗೂ ರವೀಂದ್ರ ಜಡೇಜಾ (52ರನ್‌, 4ಬೌ, 2ಸಿ) ಅವರ ಅರ್ಧ ಶತಕಗಳ ನೆರವಿನಿಂದ ಭಾರತ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 246 ರನ್‌ಗಳ ಗುರಿ ನೀಡಿದೆ.

ಷೇರ್‌–ಎ–ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 245 ರನ್‌ಗಳಿಸಿತು.

ಟಾಸ್‌ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಭಾರತ ಆರಂಭಿಕ ಆಘಾತ ಅನುಭವಿಸಿತು. ಮೊದಲ ವಿಕೆಟ್‌ ಪತನವಾದಾಗ ತಂಡದ ಮೊತ್ತ 18ರನ್‌. ಶಿಖರ್‌ ಧವನ್‌ 10 ರನ್‌ಗಳಿಸಿದ್ದಾಗ ಮೊಹಮ್ಮದ್‌ ಹಫೀಜ್‌ ಅವರ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಾಯಕ ವಿರಾಟ್‌ ಕೊಹ್ಲಿಗೂ ಈ ಪಂದ್ಯದಲ್ಲಿ ‘ಅದೃಷ್ಟ’ ಕೈಹಿಡಿಯಲಿಲ್ಲ. 11 ಎಸೆತ ಎದುರಿಸಿ 5 ರನ್‌ ಗಳಿಸಿದ್ದ ವೇಳೆ ಅವರು ಉಮರ್‌ ಗುಲ್‌ ಎಸೆತದಲ್ಲಿ ಉಮರ್‌ ಅಕ್ಮಲ್‌ಗೆ  ಕ್ಯಾಚ್‌ ನೀಡಿ ನಡೆದರು. ಬಳಿಕ ಬಂದ ಅಂಜಿಕ್ಯಾ ರಹಾನೆ (23), ದಿನೇಶ್‌ ಕಾರ್ತಿಕ್‌ (23), ಆರ್‌.ಅಶ್ವಿನ್‌ (9) ಹಾಗೂ ಮೊಹಮ್ಮದ್‌ ಶಮಿ (0) ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಆದರೆ ಆರಂಭಿಕ ಆಟಗಾರ ರೋಹಿತ್‌ ಶರ್ಮ, ರಾಯುಡು ಹಾಗೂ ಜಡೇಜಾ ಅವರ ಅರ್ಧ ಶತಕಗಳು ಭಾರತ ತಂಡದ ಮೊತ್ತ ಹೆಚ್ಚಲು ಕಾರಣವಾಯಿತು.

ಮಿಂಚಿದ ಸಯೀದ್‌: ಪಾಕಿಸ್ತಾನ ಪರ ಸಯೀದ್‌ ಅಜ್ಮಲ್‌ ಮೂರು ವಿಕೆಟ್‌ ಕಬಳಿಸಿ ಮಿಂಚಿದರೇ ಹಫೀಜ್‌ ಹಾಗೂ ಮೊಹಮ್ಮದ್ ತಲ್ಹಾ ಅವರು ತಲಾ ಎರಡು ವಿಕೆಟ್‌ ಪಡೆದರು. ಉಮರ್‌ ಗುಲ್‌ ಒಂದು ವಿಕೆಟ್‌ ಕಿತ್ತರು.

ಮರು ಹೋರಾಟ: 245ರನ್‌ಗಳ ಗುರಿ ಬೆನ್ನಟ್ಟಿರುವ ಮಿಸ್ಬಾ ಉಲ್‌ ಹಕ್ ನೇತೃತ್ವದ ಪಾಕಿಸ್ತಾನ 10 ಓವರ್‌ಗಳಲ್ಲಿ ವಿಕೆಟ್‌ ನಷ್ಟ ವಿಲ್ಲದೇ 67 ಗಳಿಸಿದೆ.

ಪಂದ್ಯದ ಲೈವ್‌ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ... http://www.prajavani.net/cricket

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.