ಬುಧವಾರ, ಏಪ್ರಿಲ್ 21, 2021
25 °C

ಐಒಎ ಚುನಾವಣೆಗೆ ಸ್ಪರ್ಧಿಸಲು ಕ್ರೀಡಾಪಟುಗಳ ಒತ್ತಾಯ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕ್ರೀಡಾಪಟುಗಳು ಹಾಗೂ ಕ್ರೀಡಾಧಿಕಾರಿಗಳ ಒತ್ತಾಯದ ಮೇರೆಗೆ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದಾಗಿ ಐಒಎ ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ ನುಡಿದಿದ್ದಾರೆ.`ಕ್ರೀಡಾ ಆಡಳಿತದಿಂದ ನಿವೃತ್ತನಾಗಬೇಕು ಎಂದು ಹೋದ ವರ್ಷ ತೀರ್ಮಾನಿಸಿದ್ದೆ. ಇದಕ್ಕೆ ಕಾರಣ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಭ್ರಷ್ಟಾಚಾರ. ಆದರೆ ಭಾರತದ ಕ್ರೀಡಾ ಪ್ರಗತಿ ದೃಷ್ಟಿಯಿಂದ ಹಿಂದಿನ ನಿರ್ಧಾರವನ್ನು ವಾಪಸ್ ಪಡೆದಿದ್ದೇನೆ. ಇದಕ್ಕೆ ಕ್ರೀಡಾಪಟುಗಳು ಹಾಗೂ ಕ್ರೀಡಾಧಿಕಾರಿಗಳ ಒತ್ತಾಯ ಕಾರಣ. ಒಳ್ಳೆಯ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ. ಇದಕ್ಕೆ ಎಲ್ಲರ ಬೆಂಬಲ ಬೇಕು~ ಎಂದಿದ್ದಾರೆ.ನವೆಂಬರ್ 25ರಂದು ಐಒಎ ಚುನಾವಣೆ ನಡೆಯಲಿದ್ದು, ರಣಧೀರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.