ಮುಂಬೈ(ಪಿಟಿಐ): ಈ ಬಾರಿ ಮುಂಗಡ ತೆರಿಗೆ ಪಾವತಿಯಲ್ಲಿ ಮಾಹಿತಿ ತಂತ್ರ ಜ್ಞಾನ ಕಂಪೆನಿಗಳು (ಐ.ಟಿ) ಮುಂದಿವೆ. ಆದರೆ, ಹಲವು ಬ್ಯಾಂಕುಗಳು ಮತ್ತು ಸಿಮೆಂಟ್ ತಯಾರಿಕೆ ಕಂಪೆನಿಗಳು ಹಿಂದೆ ಬಿದ್ದಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿ ಡಿಟಿ) ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಮುಂಗಡ ತೆರಿಗೆ ಪಾವತಿ ಗಡುವನ್ನು ಮಾ. 15ರಿಂದ 18 ರವರೆಗೆ ಮೂರು ದಿನಗಳ ಕಾಲ ವಿಸ್ತರಿಸಿತ್ತು. ಮಂಗಳವಾರ ತೆರಿಗೆ ಪಾವತಿಗೆ ಕೊನೆಯ ದಿನವಾಗಿತ್ತು.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ₨1,450 ಕೋಟಿ ಮುಂಗಡ ತೆರಿಗೆ ಪಾವತಿಸಿದೆ.

ಎಸ್ ಬ್ಯಾಂಕ್ ₨200 ಕೋಟಿ ಮುಂಗಡ ತೆರಿಗೆ ಪಾವತಿ ಸಿದ್ದು ಕಳೆದ ವರ್ಷದ ನಾಲ್ಕನೇ ತ್ರೈಮಾ ಸಿಕಕ್ಕೆ ಹೋಲಿಸಿದರೆ ಶೇ 20ರಷ್ಟು ಹೆಚ್ಚ ಳವಾಗಿದೆ. ಕಳೆದ ವರ್ಷ ₨600 ಕೋಟಿ ತೆರಿಗೆ ಪಾವತಿಸಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಈ ಬಾರಿ ₨1,130 ಕೋಟಿ ಮುಂಗಡ ತೆರಿಗೆ ಪಾವತಿಸಿದೆ. ಭಾರತ್ ಪೆಟ್ರೋಲಿಯಂ ಕಳೆದ ವರ್ಷದ ₨230 ಕೋಟಿ ಬದಲಿಗೆ ಈ ಬಾರಿ ₨705 ಕೋಟಿ ತೆರಿಗೆ ಪಾವತಿ ಸಿದೆ.

ಬ್ಯಾಂಕ್ ಆಫ್ ಬರೋಡ ₨360 ಕೋಟಿ, ಬ್ಯಾಂಕ್ ಆಫ್ ಇಂಡಿಯಾ ₨500 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ₨158 ಕೋಟಿ ಮುಂಗಡ ತೆರಿಗೆ ಪಾವತಿಸಿವೆ. ಮುಂಬೈ ಆದಾಯ ತೆರಿಗೆ ವಲಯ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಶೇ 19 ರಷ್ಟು ಏರಿಕೆ ದಾಖಲಿಸಿದೆ. ₨1.56 ಲಕ್ಷ ಕೋಟಿ ಗುರಿಗೆ ಬದಲಾಗಿ ₨2.09 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ.

ಬ್ಯಾಂಕ್ಗೆ 3 ದಿನ ರಜೆ ಇಲ್ಲ
ಮಾ. 29 ಶನಿವಾರ, 30 ಭಾನು ವಾರ ಮತ್ತು 31 ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನ ಹಾಗೂ ದೇಶದ ಕೆಲವೆಡೆ ಸಾರ್ವಜನಿಕ ರಜಾ ದಿನ. ಆದರೆ, ತೆರಿಗೆ ಪಾವತಿಸುವವರ ಅನುಕೂಲಕ್ಕಾಗಿ ಬ್ಯಾಂಕುಗಳು ಈ ಮೂರೂ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

ತೆರಿಗೆದಾರರ ಹಿತದೃಷ್ಟಿಯಿಂದ ಈ ಮೂರು ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲು ಬ್ಯಾಂಕ್ಗಳಿಗೆ ಸೂಚನೆ ನೀಡುವಂತೆ ‘ಸಿಬಿಡಿಟಿ’ ಹಣಕಾಸು ಸಚಿ ವಾಲಯಕ್ಕೆ ಮನವಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.