ಕ್ವಾಲಾಲಂಪುರ (ಪಿಟಿಐ/ಕ್ಸಿನ್ಹುವಾ/ಐಎಎನ್ಎಸ್/ಎಪಿ): ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾದ ವಿಮಾನ ಐದನೇ ದಿನವೂ ಪತ್ತೆಯಾಗಿಲ್ಲ. ಹಲವು ರಾಷ್ಟ್ರಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ತಂಡಕ್ಕೆ ಬುಧವಾರ ಭಾರತವೂ ಸೇರಿಕೊಂಡಿದೆ. ಈ ಮಧ್ಯೆ, ಶೋಧನೆಯ ಪರಿಧಿ ವಿಸ್ತರಿಸಿ, ತೀವ್ರಗೊಳಿಸಲಾಗಿದೆ. ಇದರ ಅಂಗವಾಗಿ ಅಂಡಮಾನ್ ಸಮುದ್ರದಲ್ಲಿ ಹುಡುಕಾಟ ಭರದಿಂದ ಸಾಗಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ತೀವ್ರ ಶೋಧ ನಡೆಸಿದರೂ ವಿಮಾನ ಪತ್ತೆಯಾಗದ ಕಾರಣ ಮತ್ತು ವಿಮಾನವು ತನ್ನ ಮಾರ್ಗ ಬದಲಿಸಿ ವಾಪಸು ಬಂದಿರುವ ಸಾಧ್ಯತೆ ಇದೆ ಎಂದು ವಾಯುಪಡೆಯು ರೆಡಾರ್ ಸಂಕೇತ ನೀಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಅಂಡಮಾನ್ ಸಮುದ್ರ ದಕ್ಷಿಣ ಭಾಗದಲ್ಲಿ ಬುಧವಾರ ಮತ್ತಷ್ಟು ಚುರುಕುಗೊಳಿಸಲಾಯಿತು ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಇಲಾಖೆ ಮುಖ್ಯಸ್ಥ ಅಜ್ಹರುದ್ದೀನ್ ಅಬ್ದುಲ್ ರೆಹಮಾನ್ ತಿಳಿಸಿದರು.

‘ಇದುವರೆಗೆ ಮಲಾಕ ಜಲಸಂಧಿ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿಯೂ ಸೇರಿದಂತೆ ಅಂದಾಜು 27 ಸಾವಿರ ಚದರ ನಾವಿಕ ಮೈಲಿಗಳಷ್ಟು ದೂರು (ಒಂದು ನಾವಿಕ ಮೈಲಿಗೆ ಸುಮಾರು 1852 ಮೀಟರ್) ಶೋಧ ಕಾರ್ಯ ನಡೆಸಲಾಗಿದೆ’ ಎಂದು ಮಲೇಷ್ಯಾದ ಸಾರಿಗೆ ಖಾತೆಯ ಹೆಚ್ಚುವರಿ ಹೊಣೆಗಾರಿಕೆ ಹೊತ್ತಿರುವ ರಕ್ಷಣಾ ಸಚಿವ ಹಿಶಮುದ್ದೀನ್ ಹುಸೇನ್ ಬುಧವಾರ ಕಿಕ್ಕಿರಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘39 ವಿಮಾನಗಳು, 42 ಹಗಡುಗಳು ಶೋಧ ಕಾರ್ಯ ನಡೆಸುತ್ತವೆ. ಈ ಶೋಧ ಕಾರ್ಯಕ್ಕೆ ಈಗ ಭಾರತ, ಜಪಾನ್, ಬ್ರೂನಿ ಕೂಡ ಕೈ ಜೋಡಿಸಿದ್ದು, ಒಟ್ಟಾರೆ 12 ದೇಶಗಳು ಶೋಧ ಕಾರ್ಯಕ್ಕೆ ನೆರವು ನೀಡುತ್ತಿವೆ’ ಎಂದರು.

ಅಲ್ಲಗಳೆದ ವಾಯುಪಡೆ ಮುಖ್ಯಸ್ಥ: ನಾಪತ್ತೆಯಾದ ವಿಮಾನವನ್ನು ಮಲೇಷ್ಯಾ ವಾಯುಪಡೆಯ (ಆರ್ಎಂಎಎಫ್) ರೆಡಾರ್ ಶನಿವಾರ ನಸುಕಿನ 2.40ರಲ್ಲಿ ಮಲಾಕ ದ್ವೀಪದ ಉತ್ತರ ತುದಿಗೆ ಇರುವ ಪುಲಾವು ಪೆರಕ್ ದ್ವೀಪದ ಬಳಿ ಪತ್ತೆ ಮಾಡಿತ್ತು ಎಂದು ತಮ್ಮನ್ನು ಉಲ್ಲೇಖಿಸಿ ‘ಬೆರಿಟಾ ಹರಿಯನ್’ ದೈನಿಕ ಮಂಗಳವಾರ ಪ್ರಕಟಿಸಿರುವ ವರದಿಯನ್ನು ವಾಯುಪಡೆಯ ಮುಖ್ಯಸ್ಥ ಜನರಲ್ ರೋಜಾಲಿ ದೌಡ್ ಅವರು ಬುಧವಾರ ಅಲ್ಲಗಳೆದರು.

ಶೋಧ ಕಾರ್ಯ ತಾತ್ಕಾಲಿಕ ತಡೆ: ವಿಯೆಟ್ನಾಂ ತನ್ನ ಜಲಗಡಿಯಲ್ಲಿ ನಡೆಸುತ್ತಿದ್ದ ಶೋಧ ಕಾರ್ಯವನ್ನು ಬುಧವಾರದಿಂದ ತಾತ್ಕಾಲಿಕವಾಗಿ ತಗ್ಗಿಸಿದೆ.

ಉಗ್ರರ ನಂಟು ತಳ್ಳಿಹಾಕಲಾಗದು (ಅಮೆರಿಕ ವರದಿ): ಕಳವು ಪಾಸ್ಪೋರ್ಟ್ ಬಳಸಿ ಕಣ್ಮರೆಯಾಗಿರುವ ವಿಮಾನದಲ್ಲಿ ಪ್ರಯಾಣಿಸಿರುವ ಇಬ್ಬರು ಇರಾನ್ ನಾಗರಿಕರ ಕುರಿತ ತನಿಖೆ ಪೂರ್ಣಗೊಂಡಿಲ್ಲ. ಆದ್ದರಿಂದ ಅವರಿಗೆ ಉಗ್ರರ ನಂಟು ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಹೇಳಿದೆ.

ಇರಾನ್ ನಾಗರಿಕರಿಗೆ ಉಗ್ರರ ನಂಟಿಲ್ಲ ಎಂದು ಇಂಟರ್ಪೋಲ್ ಮಂಗಳವಾರ ಹೇಳಿತ್ತು.

ಶುಕ್ರವಾರ ಮಧ್ಯರಾತ್ರಿಯಿಂದ ನಾಪತ್ತೆಯಾಗಿರುವ ವಿಮಾನದ ಪತ್ತೆಗೆ ಏನಾದರು ಸುಳಿವು ಸಿಗಬಹುದೆಂದು ಅಂದಾಜು ಆರು ಲಕ್ಷ ಜನರ ಚಲನವಲನಗಳನ್ನು ಉಪಗ್ರಹದ ಮೂಲಕ ಗಮನಿಸಲಾಗಿದೆ ಎಂದು ಅಮೆರಿಕದ ಕೊಲರಾಡೊ ಮೂಲದ ಕಂಪೆನಿಯೊಂದು ಹೇಳಿದೆ.

ಅಧಿಕಾರಿ ನೇಮಕ: (ನವದೆಹಲಿ ವರದಿ): ವಿಮಾನದ ಪತ್ತೆಗಾಗಿ ಭಾರತದ ನೆರವನ್ನು ಮಲೇಷ್ಯಾ ಕೋರಿದೆ. ಈ ವಿಚಾರದ ಮಾಹಿತಿಯನ್ನು ಹಂಚಿಕೊಳ್ಳಲು ಕೇಂದ್ರ ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಬುಧವಾರ ತಿಳಿಸಿದ್ದಾರೆ. ಅಂಡಮಾನ್ ಸಮುದ್ರದಲ್ಲಿ ಶೋಧ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮಲೇಷ್ಯಾ ಸಹಾಯಕ್ಕೆ ಮನವಿ ಮಾಡಿಕೊಂಡಿದೆ.

ಇದಕ್ಕೆ ಸ್ಪಂದಿಸಿರುವ ಭಾರತ, ವಾಯುಪಡೆಯು ವಿಮಾನಗಳನ್ನು ಸನ್ನದುಗೊಳಿಸಿದೆ. ವಾಯುಪಡೆ ವಿಮಾನಗಳು ಅಂಡಮಾನ್ ಸಮುದ್ರಕ್ಕೆ ಸನಿಹದಲ್ಲಿರುವ ಮಲಾಕ ಜಲಸಂಧಿಯಲ್ಲಿ ಶೋಧ ಕಾರ್ಯಕ್ಕೆ ಇಳಿಯುವ ಸಾಧ್ಯತೆ ಇದೆ.

ಈ ಮಧ್ಯೆ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಲೇಷ್ಯಾದ ರಾಜ ಅಬ್ದುಲ್ ಹಲೀಂ ಅವರಿಗೆ ಸಂದೇಶ ಕಳುಹಿಸಿ ವಿಮಾನ ಕಣ್ಮರೆ ಬಗ್ಗೆ ತೀವ್ರ ಕಳವಳ ಮತ್ತು ಪರಿತಾಪ ವ್ಯಕ್ತಪಡಿಸಿದ್ದಾರೆ. ವಿಮಾನ ಪತ್ತೆ ಕಾರ್ಯಕ್ಕೆ ಮಲೇಷ್ಯಾ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

239 ಪ್ರಯಾಣಿಕರಿದ್ದ ಈ ವಿಮಾನದಲ್ಲಿ ಭಾರತ ಮೂಲದ ಕೆನಡಾ ನಾಗರಿಕರೊಬ್ಬರು ಸೇರಿದಂತೆ ಆರು ಭಾರತೀಯರು ಇದ್ದರು.

ಹರಿಹಾಯ್ದ ಚಂದ್ರಿಕಾ ಪತಿ
(ಚೆನ್ನೈ ವರದಿ): ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ವಿಷಯವಾಗಿ ಕೇಂದ್ರ ಸರ್ಕಾರ ಮೌನವಾಗಿದೆ. ಈ ವಿಮಾನದಲ್ಲಿ ಭಾರತದ ಪ್ರಯಾಣಿಕರು ಇದ್ದರು ಎನ್ನುವುದನ್ನು ಅದು ಮರೆತಂತಿದೆ ಎಂದು ಈ ವಿಮಾನದ ಪ್ರಯಾಣಿಕರಾದ ಚಂದ್ರಿಕಾ ಶರ್ಮಾ ಅವರ ಪತಿ ಕೆ.ಎಸ್. ನರೇಂದ್ರನ್ ಬುಧವಾರ ಕಟುವಾಗಿ ಟೀಕಿಸಿದರು.

‘ವಿಮಾನ ನಾಪತ್ತೆಯಾಗಿ ಐದು ದಿನಗಳಾದರೂ ಸರ್ಕಾರದ ಯಾವೊಬ್ಬ ಅಧಿಕಾರಿಯೂ ನಮ್ಮನ್ನು ಸಂಪರ್ಕಿಸಿಲ್ಲ. ವಿಮಾನದ ಪ್ರಯಾಣಿಕರ ಸ್ಥಿತಿಗತಿ ಅಥವಾ ಪತ್ತೆ ಕಾರ್ಯದ ಬೆಳವಣಿಗೆ ಬಗ್ಗೆ ಯಾವ ಮಾಹಿತಿಯನ್ನು ನೀಡಿಲ್ಲ’ ಎಂದು ಅವರು ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿದಿಲ್ಲ. ಮಲೇಷ್ಯಾದ ಜೊತೆಗೆ ಸಮನ್ವಯ ನಡೆಸಲು ಯಾರನ್ನೂ ನಿಯೋಜಿಲ್ಲ’ ಎಂದು ಅವರು ಆಕ್ಷೇಪಿಸಿದರು. ‘ಮಲೇಷ್ಯಾ ಸರ್ಕಾರ ಮಾಹಿತಿಯನ್ನು ಮುಚ್ಚಿಡುತ್ತಿದೆ. ಪತ್ನಿಯ ಬಗ್ಗೆ ಮಾಹಿತಿ ತಿಳಿಯದೆ ನಾವು ವ್ಯಾಕುಲರಾಗಿದ್ದೇವೆ’ ಎಂದ ಅವರು ಭಾವೋದ್ವೇಗಕ್ಕೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.