ಸೋಮವಾರ, ಜೂನ್ 21, 2021
21 °C

ಐವರು ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ ೧೭ರಂದು ನಡೆಯುವ ಚುನಾವಣೆ­ಗಾಗಿ ನಾಮಪತ್ರ ಸಲ್ಲಿಕೆಯ 4ನೇ ದಿನವಾದ ಶನಿವಾರ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಬಿ.ಟಿ.ಲಲಿತಾ­ನಾಯ್ಕ್ ಅವರು ಒಂದು ನಾಮಪತ್ರ ಸಲ್ಲಿಸಿದರು.ಇದುವರೆಗೆ ಐವರು ಅಭ್ಯರ್ಥಿಗಳು ಒಟ್ಟು ಎಂಟು ನಾಮಪತ್ರಗಳನ್ನು ಸಲ್ಲಿಸಿದ್ದಾರೆ  ಎಂದು ಚುನಾವಣಾ­ಧಿಕಾರಿ ಡಾ.ಎನ್.ವಿ.­ಪ್ರಸಾದ್ ತಿಳಿಸಿದ್ದಾರೆ.ಜನಜಾಗೃತಿ ಜಾಥಾ ನಾಳೆ

ಗುಲ್ಬರ್ಗ: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾ. ೨೪ ರಂದು ಬೆಳಿಗ್ಗೆ ೮ ಗಂಟೆಗೆ ನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಲಾಗಿದೆ.ಜಿಲ್ಲಾ ಆಸ್ಪತ್ರೆಯಿಂದ ಎಸ್‌ಪಿ ಕಚೇರಿ ಹಿಂಭಾಗದ ಎಚ್‌ಐಟಿ ಸಭಾಂಗಣವರೆಗೆ ಜಾಥಾ ನಡೆಯಲಿದೆ. ನಂತರ ಇದೇ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಯಾದೃಚ್ಛೀಕರಣ ನಾಳೆ

ಗುಲ್ಬರ್ಗ:ಲೋಕಸಭಾ ಚುನಾವಣೆ­ಯಲ್ಲಿ ಬಳಸಲಾಗುತ್ತಿರುವ ವಿದ್ಯು­ನ್ಮಾನ ಮತಯಂತ್ರಗಳ ಮೊದಲ ಸುತ್ತಿನ ಯಾದೃಚ್ಛೀಕರಣ (ರ್‍ಯಾಂಡಮೈ­ಜೇಷನ್) ಕಾರ್ಯವನ್ನು ಮಾ. ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿ­ಕಾರಿ ಕಚೇರಿ ಸಭಾಂಗಣದಲ್ಲಿ ನಡೆಸ­ಲಾಗುತ್ತಿದೆ.ಎಲ್ಲ ಪಕ್ಷಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪ್ರತಿನಿಧಿಗಳು ಈ ಕಾರ್ಯದಲ್ಲಿ ತಪ್ಪದೇ ಹಾಜರಾಗಬೇಕು ಎಂದು ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.25ರಂದು ನಾಮಪತ್ರ

ಗುಲ್ಬರ್ಗ:
ಗುಲ್ಬರ್ಗ ಮೀಸಲು ಲೋಕ­ಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಮಹಾದೇವ ಬಿ.ಧನ್ನಿ ಅವರು ಮಾ. 25ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.521ಲೀ. ಮದ್ಯ ವಶ

ಗುಲ್ಬರ್ಗ:
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಮಾ. ೨2ರ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ೪೧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಒಟ್ಟು ೫೨೧.೧೦ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದ್ದು, ೩೬ ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

ಮಾ. ೨೨ ರಂದು ಅಬಕಾರಿ ಇಲಾಖೆಯಿಂದ ೨ ಪ್ರಕರಣ ದಾಖಲಿಸಿದ್ದು, ೨೦.೫೩ ಲೀ. ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ ೨ ಪ್ರಕರಣ ದಾಖಲಿಸಿದ್ದು, ೧೦ ಲೀ. ಮದ್ಯ ಮತ್ತು ೧.೫ ಕೆ.ಜಿ. ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ.ಇದುವರೆಗೆ ದಾಖಲಿಸಿದ ಒಟ್ಟು ೪೧ ಪ್ರಕರಣಗಳಲ್ಲಿ ಅಬಕಾರಿ ಇಲಾಖೆಯಿಂದ ದಾಖಲಿಸಿದ ೨೯ ಪ್ರಕರಣಗಳಿಂದ ೩೦೬.೭೯ ಲೀ. ಮದ್ಯ ಹಾಗೂ ಪೊಲೀಸ್ ಇಲಾಖೆಯಿಂದ ದಾಖಲಿಸಿದ ೧೨ ಪ್ರಕರಣಗಳಿಂದ ೨೦೪.೨೮ ಲೀ. ಮದ್ಯ ಹಾಗೂ ೧.೫ ಕೆ.ಜಿ. ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಧಿಕಾರಿ ನೇಮಕ

ಗುಲ್ಬರ್ಗ:
ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕರ್ನಾಟಕ ಪಂಚಾಯತ್ ರಾಜ್ ನಿಯಮಗಳ ೧೯೯೫ರ ನಿಯಮ ೩ರ ಪ್ರಕಾರ ಅಫಜಲಪುರ ತಾಲ್ಲೂಕು ಪಂಚಾ­ಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಆದೇಶ ಹೊರಡಿಸಿದ್ದಾರೆ.ಚುನಾವಣೆ ನಡೆಸಿ, ಫಲಿತಾಂಶದ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.28ರಂದು ಸೈಕಲ್ ಜಾಥಾ

ಗುಲ್ಬರ್ಗ:
ಲೋಕಸಭಾ ಚುನಾವಣೆ ಅಂಗವಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಯುವಕ ಹಾಗೂ ಯುವತಿ ಮಂಡಳಿಗಳ ವತಿಯಿಂದ ಆಯಾ ಗ್ರಾಮಗಳಲ್ಲಿ ಮಾ. ೨೮ ರಂದು ಸೈಕಲ್ ಜಾಥಾ ಆಯೋಜಿಸಲಾಗಿದೆ.  ಯುವಕ ಹಾಗೂ ಯುವತಿ ಮಂಡಳಿಗಳ ಎಲ್ಲಾ ಸದಸ್ಯರು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು, ಸಾರ್ವ­ಜನಿಕರು ಮುಕ್ತ ಮತ್ತು ನ್ಯಾಯ­ಸಮ್ಮತ ಮತದಾನದಲ್ಲಿ ಸಹಭಾಗಿತ್ವ ವಹಿಸುವಂತಹ ಕಾರ್ಯಕ್ರಮ ಹಮ್ಮಿ­ಕೊಳ್ಳಬೇಕು ಎಂದು ಯುವ ಸಬಲೀ­ಕರಣ ಮತ್ತು ಕ್ರೀಡಾ ಇಲಾಖೆ ಸಹಾ­ಯಕ ನಿರ್ದೇಶಕರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.