ಭಾನುವಾರ, ಜೂನ್ 20, 2021
25 °C

ಒಂದೇ ದಿನ 17 ಕಾಮಗಾರಿಗಳಿಗೆ ಚಾಲನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಚುನಾವಣೆ ಘೋಷಣೆ ಆದರೆ ಕಾಮಗಾರಿಗೆ ಚಾಲನೆ ನೀಡಲು ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಶಾಸಕ ರಮೇಶಬಂಡಿಸಿದ್ದೇಗೌಡ ಭಾನುವಾರ ಒಂದೇ ದಿನ 17 ಕಾಮಗಾರಿಗಳಿಗೆ ಚಾಲನೆ ನೀಡಿದರು.ಮೈಸೂರು– ಕೊತ್ತತ್ತಿ ಮಾರ್ಗದ ಮಹದೇವಪುರ, ತರೀಪುರ ಹಾಗೂ ಹಂಪಾಪುರ ಗ್ರಾಮಗಳ ಸಂಪರ್ಕ ರಸ್ತೆಯನ್ನು ಅನುಬಂಧ–ಇ ಅಡಿಯಲ್ಲಿ ರೂ.3 ಕೋಟಿ ವೆಚ್ಚದ 7.4 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿದರು. ವಿಶೇಷ ಘಟಕ ಯೋಜನೆಯಡಿ ಅರಕೆರೆ, ಪೀಹಳ್ಳಿ, ಮಾರಸಿಂಗನಹಳ್ಳಿ, ಗೆಂಡೆಹೊಸಹಳ್ಳಿ, ನೇರಲಕೆರೆ, ಚನ್ನಹಳ್ಳಿ, ಬೊಂತಗಹಳ್ಳಿ, ಚಿಕ್ಕಅಂಕನಹಳ್ಳಿ, ಉರುಳಿ ಕ್ಯಾತನಹಳ್ಳಿ, ಬೆಳವಾಡಿ, ನಗುವನಹಳ್ಳಿ ಕಾಲೋನಿ, ಮೊಗರಹಳ್ಳಿ, ಬೆಳಗೊಳ, ಕೆಆರ್‌ಎಸ್‌ ಮತ್ತು ಕಾರೇಕುರ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಚಾಲನೆ ಸಿಕ್ಕಿತು.ಅನುಬಂಧ–ಇ ಯೋಜನೆ ಹೊರತು ಪಡಿಸಿ ವಿಶೇಷ ಘಟಕ ಯೋಜನೆಯಡಿ ₨ 56 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಪೂಜೆ ನಡೆಯಿತು. ಜತೆಗೆ ಬೆಟ್ಟಹಳ್ಳಿ ಗ್ರಾಮದಲ್ಲಿ 450 ಮೀಟರ್‌ ರಸ್ತೆಯನ್ನು ರೂ.6.5ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಎಸ್‌ಡಿಪಿ ಯೋಜನೆಯಡಿ ಡಾಂಬರು ಮಾಡಲಾಗುವುದು ಎಂದು ಇಲಾ ಖೆಯ ಸಹಾಯಕ ಕಾರ್ಯ­ಪಾಲಕ ಎಂಜಿನಿಯರ್‌ ರಮೇಶ್‌ ತಿಳಿಸಿದರು.ಮಂಗಳವಾರ (ಮಾ.4) ಕೆ.ಶೆಟ್ಟಹಳ್ಳಿ, ಹಂಗರಹಳ್ಳಿ, ಬಾಬುರಾಯನಕೊಪ್ಪಲು, ಲಾಲಿಪಾಳ್ಯ, ಯಲಿಯೂರು, ಉರಮಾರ ಕಸಲಗೆರೆ, ರಾಂಪುರ ಸೇರಿ ಒಟ್ಟು 14 ಕಡೆ ರಸ್ತೆ ನಿರ್ಮಾಣ ಕಾಮಗಾರಿಗಳು ಚಾಲನೆ ಪಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹದೇವಪುರ ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ಜವನೇಗೌಡ, ಜಿ.ಎಲ್‌. ಲಕ್ಷ್ಮೇಗೌಡ, ಹಂಗರಹಳ್ಳಿ ಗೋವಿಂದೇಗೌಡ, ಕಾಳೇಗೌಡ, ಸಹಾಯಕ ಎಂಜಿನಿಯರ್‌ ಸುನಿಲ್‌, ಕಾವೇರಿ ನೀರಾವರಿ ನಿಗಮದ ಎಇಇ ಗುರುಮೂರ್ತಿ, ಜೂನಿಯರ್‌ ಎಂಜಿನಿಯರ್‌ ಉದಯಕುಮಾರ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.