ನವದೆಹಲಿ (ಪಿಟಿಐ): ವಿದ್ಯುತ್ ಜಾಲ ವೈಫಲ್ಯದಿಂದ ಸಂಚಾರ ಸ್ಥಗಿತಗೊಳಿಸಿ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದ್ದ ದೆಹಲಿಯ ಮೆಟ್ರೊ ರೈಲುಗಳು ಬುಧವಾರ ಒಂದೇ ದಿನದಲ್ಲಿ ಒಟ್ಟು 22 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಮತ್ತೊಂದು ಹೊಸ ದಾಖಲೆಗೆ ಕಾರಣವಾಯಿತು.

ದೆಹಲಿ ಮೆಟ್ರೊ ಇತಿಹಾಸದಲ್ಲಿಯೇ ಹತ್ತು ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ಇಂಥದೊಂದು ದಾಖಲೆ ನಿರ್ಮಾಣವಾಗಿದೆ. ಕೆಲವೇ ದಿನಗಳ ಹಿಂದೆ ಒಂದೇ ದಿನದಲ್ಲಿ 21 ಲಕ್ಷ ಪ್ರಯಾಣಿಕರು ಸಂಚರಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಆದರೆ, ಬುಧವಾರ 21.95 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿದರು.

ಮೆಟ್ರೊದ ಎಲ್ಲ ಆರು ಮಾರ್ಗಗಳು ಬುಧವಾರ ಜನರಿಂದ ಕಿಕ್ಕಿರಿದ್ದ್ದಿದು, ಇದು ಕೂಡಾ ಒಂದು ದಾಖಲೆ.
ಜನದಟ್ಟಣೆಯಿಂದಾಗಿ 24 ಮೆಟ್ರೊ ನಿಲ್ದಾಣಗಳಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್ಗಳನ್ನು ತೆರೆಯಲಾಗಿದೆ. ಗುರುವಾರ `ರಕ್ಷಾ ಬಂಧನ~ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಮೆಟ್ರೊ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ ಎಂದು ಮೆಟ್ರೊ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.