ಶುಕ್ರವಾರ, ಮೇ 20, 2022
26 °C

ಒಡಿಶಾ: ಪ್ರವಾಹದಿಂದ ಪ್ರತಿವರ್ಷ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ):  ಒಳ್ಳೆಯ ರಕ್ಷಣಾ ವ್ಯವಸ್ಥೆ ಇದ್ದರೂ  ಒಡಿಶಾದಲ್ಲಿ ಪ್ರತಿವರ್ಷ ಪ್ರವಾಹದಿಂದ ಸರಾಸರಿ 33 ಮಂದಿ ಸಾವನ್ನಪ್ಪುತ್ತಾರೆ ಹಾಗೂ ರೂ. 322 ಕೋಟಿಯಷ್ಟು ಆಸ್ತಿ ನಾಶವಾಗುತ್ತದೆ.ಮುಂಗಾರಿನಲ್ಲಿ ಮಹಾನದಿ, ಸುಬರ್ಣರೇಖಾ, ಬ್ರಹ್ಮಣಿ, ಬೈತರಣಿ, ವಂಶಧಾರಾ ಮತ್ತು ಋಶಿಕುಲ್ಯ ನದಿಗಳ ಪ್ರವಾಹದಿಂದಾಗಿ ಆಸ್ತಿಪಾಸ್ತಿ ಮತ್ತು ಪ್ರಾಣಹಾನಿಗಳು ಉಂಟಾಗುತ್ತವೆ.`1980 ಮತ್ತು 2011 ರ ನಡುವೆ ಪ್ರವಾಹದಿಂದ ಒಟ್ಟು 1,043 ಮಂದಿ ಮೃತಪಟ್ಟಿದ್ದು ಇದೇ ಕಾಲಾವಧಿಯಲ್ಲಿ ರಾಜ್ಯದಲ್ಲಿ ರೂ. 10,000 ಕೋಟಿ ಮೌಲ್ಯದ ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ~ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.