ಚಾಮರಾಜನಗರ: ಉದ್ಯಾನವೆಂದರೆ ಹಸಿರು ಹೊದಿಕೆ ಮನದಲ್ಲಿ ಮೂಡುತ್ತದೆ. ಅಲಂಕಾರಿಕ, ಹೂವಿನ ಗಿಡಗಳನ್ನು ನೋಡುವುದೇ ಅಂದ. ಆದರೆ, ನಗರದ ವ್ಯಾಪ್ತಿಯ ಉದ್ಯಾನಗಳಿಗೆ ಭೇಟಿ ನೀಡಿದರೆ ಮರುಕ ಹುಟ್ಟುತ್ತದೆ. ಬಿಸಿಲಿಗೆ ಒಣಗಿ ನಿಂತಿರುವ ಅಲಂಕಾರಿಕ ಗಿಡಗಳು ಕಣ್ಣಿಗೆ ಬೀಳುತ್ತವೆ.

ಹೀಗಾಗಿ, ಸಂಜೆ ವೇಳೆ ವಾಯುವಿಹಾರಕ್ಕೆ ಉದ್ಯಾನದ ಬಳಿಗೆ ತೆರಳಲು ಈಗ ನಾಗರಿಕರಿಗೆ ಮನಸ್ಸಿಲ್ಲದಂತಾಗಿದೆ.ಸಮರ್ಪಕವಾಗಿ ಜಿಲ್ಲಾ ಕೇಂದ್ರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಎಡವಿದೆ. ಈ ನಡುವೆ ಉದ್ಯಾನಕ್ಕೆ ನೀರು ಪೂರೈಸಲು ಸಾಧ್ಯವೇ? ಎಂಬುದು ನಾಗರಿಕರ ಪ್ರಶ್ನೆ. ಹೀಗಾಗಿ, ನಗರಸಭೆ ವ್ಯಾಪ್ತಿಯ ಉದ್ಯಾನಗಳಲ್ಲಿ ಹಚ್ಚಹಸಿರು ಕಣ್ಮರೆಯಾಗಿದೆ. ಮರಗಿಡಗಳು ನೀರಿಲ್ಲದೆ ಸೊರಗುತ್ತಿವೆ.

ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ ಹೌಸಿಂಗ್ ಬೋರ್ಡ್ ಕಾಲೊನಿ, ದೊಡ್ಡಅರಸನ ಕೊಳ ಹಾಗೂ ಪುಟ್ಟಮ್ಮಣ್ಣಿ ಉದ್ಯಾನದ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು. ಈ ಮೂರು ಉದ್ಯಾನಗಳಿಗೆ ಕಾಯಕಲ್ಪ ನೀಡಲು ಸುಮಾರು 80 ಲಕ್ಷ ರೂ ವೆಚ್ಚ ಮಾಡಲಾಗಿತ್ತು. ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಉದ್ಯಾನಗಳ ಅಂದ ಹದಗೆಟ್ಟಿದೆ.

ಹೌಸಿಂಗ್ ಬೋರ್ಡ್ ಕಾಲೊನಿಯ ಉದ್ಯಾನದ ಸುತ್ತಲೂ ಗಿಡ ನೆಡಲಾಗಿದೆ. ಉಳಿದ ಖಾಲಿ ಸ್ಥಳದಲ್ಲಿ ಹಸಿರು ಬೆಳೆಸಿಲ್ಲ. ಅಲಂಕಾರಿಕ ಗಿಡ ಕೂಡ ನೆಟ್ಟಿಲ್ಲ. ಪ್ರಸ್ತುತ ಬೇಸಿಗೆ ಹಿನ್ನೆಲೆಯಲ್ಲಿ ನೆಟ್ಟಿರುವ ಗಿಡಗಳ ಪಾತಿಗಳಿಗೆ ಟ್ಯಾಂಕರ್ನಿಂದ ನೀರು ಬಿಡಲಾಗುತ್ತಿದೆ. ಪುಟ್ಟಮ್ಮಣ್ಣಿ ಉದ್ಯಾನದಲ್ಲಿ ಅಲಂಕಾರಿಕ ಗಿಡ ನೆಟ್ಟಿದ್ದರೂ ನೀರಿನ ಕೊರತೆ ಎದುರಾಗಿದೆ.

ಉಳಿದಂತೆ ದೊಡ್ಡಅರಸನ ಕೊಳದ ಉದ್ಯಾನ ಅಕ್ಷರಶಃ ನರಕದರ್ಶನ ನೀಡುತ್ತದೆ. ಅಭಿವೃದ್ಧಿಗೆ ಚಾಲನೆ ನೀಡಿದ ವೇಳೆಯೇ ಉದ್ಯಾನದಲ್ಲಿ ಅಲಂಕಾರಿಕ ಗಿಡ ನೆಡಲಿಲ್ಲ. ಈಗ ಮುಳ್ಳಿನ ಗಿಡಗಳು ಬೆಳೆದಿದ್ದು, ನಿರ್ವಹಣೆಯ ಕೊರತೆ ಎದ್ದುಕಾಣುತ್ತದೆ.

ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿರುವ ಅಲಂಕಾರಿಕ ಗಿಡಗಳು, ಮರಗಳು ಒಣಗುತ್ತಿವೆ. ನಗರದ ಹೃದಯ ಭಾಗದಲ್ಲಿರುವ ಈ ಉದ್ಯಾನದಲ್ಲಿ ಹಸಿರು ಹೊದಿಕೆ ಕಾಣಲಾಗುತ್ತಿಲ್ಲ. ಸಂಜೆ ವೇಳೆ ಮಕ್ಕಳು ಉದ್ಯಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಸೂಕ್ತ ಭದ್ರತೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಉದ್ಯಾನ ಸೊರಗಿ ಹೋಗಿದೆ. ನೀರಿನ ಲಭ್ಯತೆ ಇಲ್ಲದಿರುವ ಪರಿಣಾಮ ಬೇಸಿಗೆಯಲ್ಲಿ ತಂಪಿನ ತಾಣವಾಗಬೇಕಿದ್ದ ಉದ್ಯಾನಗಳು ಒಣಗಿ ನಿಂತಿರುವುದು ನಾಗರಿಕರಲ್ಲಿ ಅಸಮಾಧಾನ ತಂದಿದೆ.

`ನಾಗರಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆಗೆ ಸಾಧ್ಯವಾಗುತ್ತಿಲ್ಲ. ಇನ್ನು ಉದ್ಯಾನದ ಅಭಿವೃದ್ಧಿಗೆ ಒತ್ತು ನೀಡುವುದು ಕಡಿಮೆ. ಕನಿಷ್ಠ ಟ್ಯಾಂಕರ್ ಮೂಲಕ ಉದ್ಯಾನದಲ್ಲಿರುವ ಮರ-ಗಿಡಗಳಿಗೆ ನೀರು ಪೂರೈಸುವ ಕೆಲಸವಾಗಬೇಕಿದೆ. ಇಲ್ಲವಾದರೆ ಉಳಿದಿರುವ ಗಿಡಗಳು ಕೂಡ ಒಣಗಿ ಹೋಗಲಿವೆ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಕೂಡಲೇ ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸುತ್ತಾರೆ ಬುದ್ಧನಗರದ ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.