

ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಕುರಿತು ಕಾರ್ಯಸಾಧ್ಯತಾ ವರದಿ ಸಲ್ಲಿಸಲು ತಜ್ಞರ ಸಮಿತಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅಧಿಕೃತ ಆದೇಶ ಮಾಡಿರುವುದು ಗಮನಕ್ಕೆ ಬಂದಿಲ್ಲ. ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲಎಸ್.ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಭಾಗವಾಗಿ ಕೇರಳ ಸರ್ಕಾರ ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಈಗಾಗಲೇ ಕರ್ನಾಟಕದಿಂದ ಕರಿಕಲ್ಲು ಮರಳು ಸಹಿತ ನೈಸರ್ಗಿಕ ಸಂಪತ್ತು ಹಗಲಿನಲ್ಲೇ ಕೇರಳಕ್ಕೆ ಸಾಗಾಟವಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳ ಕುಮ್ಮಕ್ಕೂ ಇದೆ. ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ ಚಾಮರಾಜನಗರ ಜಿಲ್ಲೆಯ ಸಂಪತ್ತು ಲೂಟಿ ಹೊಡೆಯುವುದರಲ್ಲಿ ಸಂಶಯವಿಲ್ಲ.ಹೊನ್ನೂರು ಪ್ರಕಾಶ್ ರೈತ ಮುಖಂಡ
ಬಂಡೀಪುರ ಅರಣ್ಯದೊಳಗೆ ಸುರಂಗ ಮಾರ್ಗ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾವ ಮುಂದಿಟ್ಟಿರುವ ಮೂರ್ಖರಿಗೆ ಜೀವವೈವಿಧ್ಯ ಪರಿಸರ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಮಹತ್ವದ ಬಗ್ಗೆ ಅರಿವಿಲ್ಲ. ಈಗಾಗಲೇ ಪರಿಸರದ ಮೇಲಿನ ದೌರ್ಜನ್ಯದ ಫಲವಾಗಿ ಅತಿವೃಷ್ಟಿ ಅನಾವೃಷ್ಟಿಗಳು ಸಂಭವಿಸುತ್ತಿದ್ದರೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬೆಳಗಿನ ವಾಹನ ಸಂಚಾರ ಮುಕ್ತವಾಗಿರುವಾಗ ರಾತ್ರಿ ಸಂಚಾರದ ಅಗತ್ಯವೇನಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಹುಲಿ ಅಭಯಾರಣ್ಯ ನಾಶವಾಗಲಿದೆ ಮಾನವ ಪ್ರಾಣಿ ಸಂಘರ್ಷ ಮಿತಿಮೀರದಲಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಯೋಜನೆ ವಿರೋಧಿಸಬೇಕು. ಈ ಬಗ್ಗೆ ಶೀಘ್ರ ಜನಾಂದೋಲನ ರೂಪಿಸಲಾಗುವುದು.–ಜೋಸೆಫ್ ಹೂವರ್ ಪರಿಸರವಾದಿ
ಚಾಮರಾಜನಗರ ಜಿಲ್ಲೆ ಮಳೆ ನೆರಳಿನ ಪ್ರದೇಶವಾಗಿರುವುದರಿಂದ ಮಳೆ ಕೊರತೆಯ ಪರಿಣಾಮ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಸುರಂಗ ಮಾರ್ಗ ನಿರ್ಮಾಣವಾದರೆ ಭೂಮಿಯೊಳಗಿನ ನೀರಿನ ಹರಿವಿನ ದಿಕ್ಕು ಬದಲಾಗಲಿದೆ ನೀರಿನ ಒರತೆ ಬತ್ತಿಹೋಗಿ ಸಂಪೂರ್ಣ ಬರಪೀಡಿತ ಪ್ರದೇಶವಾಗಲಿದೆ. ಕೃಷಿ ಕ್ಷೇತ್ರ ಸಂಪೂರ್ಣ ನಾಶವಾಗಲಿದೆ. ಜೀವವೈವಿಧ್ಯ ಬಲಿಯಾಗಲಿದ್ದು ಸಾವಿರಾರು ಎಕರೆ ಪರಿಸರ ಸೂಕ್ಷ್ಮ ಪ್ರದೇಶ ನಾಶವಾಗಲಿದೆ. ಈಗಾಗಲೇ ಕೇರಳ ಹಾಗೂ ಕರ್ನಾಟಕದ ಮಧ್ಯೆ 15 ಗಂಟೆ ವಾಹನಗಳ ಸಂಚಾರಕ್ಕೆ ಅವಕಾಶ ಇರುವಾಗ ರಾತ್ರಿ ಹೊತ್ತು ವಾಹನಗಳ ಸಂಚಾರದ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಜಾರಿಗೆ ಮುಂದಾದರೆ ಕಾನೂನು ಹೋರಾಟದ ಜೊತೆಗೆ ಜನಾಂದೋಲನ ರೂಪಿಸಲಾಗುವುದು.–ನಾಗಾರ್ಜುನ ಕುಮಾರ್ ಪರಿಸರವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.