ಮಂಡ್ಯ: ‘ವೀಲ್ಚೇರ್ ಕ್ರಿಕೆಟ್ ರೋಮಾಂಚನಕಾರಿಯಾಗಿದೆ. ಅಂಗವಿಕಲರ ಕ್ರೀಡೆ ಮತ್ತು ಸಮಾಜಮುಖಿ ಕೆಲಸಗಳಿಗೆ ನಮ್ಮ ಟ್ರಸ್ಟ್ ಸದಾ ಸ್ಪಂದಿಸುತ್ತದೆ. ಕ್ರೀಡಾಪಟುಗಳು ಮಂಡ್ಯ ನೆಲದಲ್ಲಿ ಉತ್ತಮ ಸಾಧನೆ ಮಾಡಲಿ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಅಂಗವಿಕಲರ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಜಿಲ್ಲಾ ಪ್ಯಾರಾ ಒಲಂಪಿಕ್ಸ್ ಅಸೋಸಿಯೇಷನ್ ಆಫ್ ಮಂಡ್ಯ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ, ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ, ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್, ಕರ್ನಾಟಕ ಸ್ಟೇಟ್ ದಿವ್ಯಾಂಗ ವೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ ಎಂದರು.

ರಾಜ್ಯಮಟ್ಟದ ಅಂಗವಿಕಲರ ವೀಲ್ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 4 ತಂಡಗಳು ಭಾಗವಹಿಸಿದ್ದವು. ಬೆಂಗಳೂರು ತಂಡ ಪ್ರಥಮ, ವಿಜಯಪುರ ದ್ವಿತೀಯ, ಬಾಗಲಕೋಟೆ ತೃತೀಯ, ಮಂಡ್ಯ ತಂಡ ಸಮಾಧಾನಕರ ಬಹುಮಾನ ಪಡೆದವು.

ಕಾರ್ಯಕ್ರಮದಲ್ಲಿ ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನ ಅಧ್ಯಕ್ಷ ಎ.ಸಿ.ರಮೇಶ್, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಸಮಾಜಸೇವಕ ಎಂ.ಎಸ್.ಮನ್ವಂತ್, ಎಂ.ಜೆ. ರಂಗಸ್ವಾಮಿ, ಶಂಕರೇಗೌಡ, ಸಿದ್ದರೂಢ ಕೊಪ್ಪಾಧರ್, ಮಹೇಶ್ ತೋಟದ, ತಿಪ್ಪೇಸ್ವಾಮಿ, ರಾಘವೇಂದ್ರ, ಕಾರ್ಯಕಾರಿ ಮಂಡಳಿಯ ಬಿ.ಬೋರೇಗೌಡ, ರಾಘವೇಂದ್ರ, ಕೆ.ಶಿವಲಿಂಗಯ್ಯ, ಸೋಮಶೇಖರ್, ಸಿ.ಕೆ.ಕೃಷ್ಣ, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.