ಮಂಗಳವಾರ, ಏಪ್ರಿಲ್ 20, 2021
26 °C

ಒತ್ತಡ ರಹಿತ ಜೀವನ ನಡೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಮ್ಮ ಮಾನಸಿಕ ಒತ್ತಡಗಳು ಕಿವುಡು, ಅಂಧತ್ವ ಮೊದಲಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಒತ್ತಡ ರಹಿತ ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಮನೋವೈದ್ಯ ಡಾ. ವಿನೋದ ಕುಲಕರ್ಣಿ ಸಲಹೆ ನೀಡಿದರು.ಅಕ್ಷಯ ಕಾಲೊನಿಯಲ್ಲಿರುವ ಗ್ಲೋಬಲ್ ವ್ಯವಹಾರ ನಿರ್ವಹಣೆ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ `ವಿಕಾಸ್-2012~ ಕಾರ್ಯಕ್ರಮದಲ್ಲಿ  ಬುಧವಾರ ಅವರು ಉಪನ್ಯಾಸ ನೀಡಿದರು. ನಮ್ಮ ನೋವು-ನಲಿವುಗಳಿಗೆ ತಕ್ಕಂತೆ ದೇಹದಿಂದ ಹಾರ್ಮೋನುಗಳು ಬಿಡುಗಡೆ ಆಗುತ್ತವೆ. ಧನಾತ್ಮಕ ಆಲೋಚನೆಗಳು ನಮ್ಮ ಯಶಸ್ಸಿನತ್ತ ಹಾಗೂ ಋಣಾತ್ಮಕ ಆಲೋಚನೆಗಳು ಖಿನ್ನತೆಯತ್ತ ಕೊಂಡೊಯ್ಯುತ್ತವೆ ಎಂದು ನುಡಿದರು.ಸಿಗ್ಮಂಡ್ ಫ್ರಾಯ್ಡ ಹೇಳುವಂತೆ ಮನುಷ್ಯನಲ್ಲಿ ಜಾಗೃತ ಮನಸ್ಸು ಹಾಗೂ ಸುಪ್ತ ಮನಸ್ಸು ಎಂಬ ಎರಡು ಮನಸ್ಸುಗಳಿವೆ. ಸುಪ್ತ ಮನಸ್ಸಿನಲ್ಲಿ ನಮಗೆ ಅರಿವಿಲ್ಲದಂತೆ ನಮ್ಮೆಲ್ಲ ಭಾವನೆಗಳು ದಾಖಲಾಗುತ್ತವೆ ಎಂದರು. ಮಿದುಳಿಗಿಂತ ಸೂಪರ್ ಕಂಪ್ಯೂಟರ್ ಇನ್ನೊಂದಿಲ್ಲ. ಆದರೆ ಅದು ನಮ್ಮ ಅಭ್ಯುದಯಕ್ಕೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.ಇಂದಿನ ಚಲನಚಿತ್ರಗಳು ಯುವಕರನ್ನು ದಾರಿತಪ್ಪಿಸುತ್ತಿವೆ ಎಂದು ಆರೋಪಿಸಿದ ಅವರು, ಉತ್ತಮ ಶಿಕ್ಷಣ, ಆರೋಗ್ಯ ಹೊಂದುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಪ್ರಾಚಾರ್ಯ ಪ್ರೊ. ರವಿಕುಮಾರ್ ಕಬ್ಬಿಣದ, ಬಿಸಿಎ ವಿಭಾಗದ ಮುಖ್ಯಸ್ಥ ಅಶ್ವಿನ್‌ಕುಮಾರ್ ಕೋಟಿ, ಉಪನ್ಯಾಸಕಿ ಅಕ್ಷತಾ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರಥಮ ವರ್ಷದ ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ವತಿಯಿಂದ ಇದೇ ತಿಂಗಳ ಎರಡರಿಂದ `ವಿಕಾಸ್~ ಎನ್ನುವ ಮೂರು ದಿನಗಳ ಪರಿಚಯಾತ್ಮಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. ಬಿಬಿಎ ವಿಭಾಗದಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕೃಷ್ಣ ಮೂರ್ತಿ, ಪ್ರೊ. ಸಂಜೀವ ದೇಶಪಾಂಡೆ, ಪಿ.ಸಿ. ಜಾಬಿನ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಎಸ್.ಬಿ. ನಾಡಗೌಡ, ಪ್ರೊ. ಎಂ. ಉಮಾ, ಪ್ರೊ. ರಾಣಿ ಪ್ರಜ್ವಲಾ ಉಪನ್ಯಾಸ ನೀಡಿದರು.ಬಿಸಿಎ ವಿಭಾಗದಲ್ಲಿ ಪ್ರೊ. ಅಶ್ವಿನ್‌ಕುಮಾರ್ ಕೋಟಿ, ಪ್ರೊ. ವಿಜಯ್, ಕಬ್ಬೂರು ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಎಂ.ಬಿ. ಪಂಚಮುಖಿ, ಹೆಸ್ಕಾಂ ಎಂಜಿನಿಯರ್ ರಾಘವೇಂದ್ರ ಕಮ್ಮಾರ, ಸಿವಿಲ್ ನ್ಯಾಯಾಧೀಶ ಜೆ. ಬಾಬಾಸಾಹೇಬ್ ಉಪನ್ಯಾಸ ನೀಡಿದರು. ಇದಲ್ಲದೆ ಎರಡೂ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.