ಒಲಿಂಪಿಕ್ ಕ್ರೀಡಾಂಗಣದತ್ತ ಜನಸಾಗರ

7

ಒಲಿಂಪಿಕ್ ಕ್ರೀಡಾಂಗಣದತ್ತ ಜನಸಾಗರ

Published:
Updated:
ಒಲಿಂಪಿಕ್ ಕ್ರೀಡಾಂಗಣದತ್ತ ಜನಸಾಗರ

ವಿಶ್ವದ ಅತಿದೊಡ್ಡ ಕ್ರೀಡಾ ಉತ್ಸವದ ಸೊಬಗು ನೋಡುವ ಕಾತರಲಂಡನ್:
ಎಲ್ಲರಿಗೂ ವಿಶ್ವದ ಅತಿದೊಡ್ಡ ಕ್ರೀಡಾ ಉತ್ಸವದ ಸೊಬಗು ನೋಡುವ ಕಾತರ. ಆದ್ದರಿಂದಲೇ ಅವರೆಲ್ಲರಿಗೆ ಕ್ರೀಡಾಂಗಣ ಸೇರುವ ಅವಸರ. ದೊಡ್ಡ ಹೆಜ್ಜೆ ಹಾಕಿದರು, ಓಡಿದರು...!ಎಲ್ಲ ಬೀದಿಗಳಿಂದ ಜನಸಾಗರ ಹರಿದಿದ್ದು 30ನೇ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದ ಮುಖ್ಯ ಕ್ರೀಡಾಂಗಣದತ್ತ. ಕೂಟದ ಉದ್ಘಾಟನೆಗೆ ಆರು ತಾಸು ಇರುವಂತೆಯೇ ರಸ್ತೆಗಳ ತುಂಬಾ ಬಸ್ಸು ಹಾಗೂ ಕಾರುಗಳ ದರ್ಬಾರು. ಆದರೆ ಕ್ರೀಡಾಂಗಣದಿಂದ ಬಹು ದೂರದಲ್ಲಿಯೇ ಪಾರ್ಕಿಂಗ್. ಆದ್ದರಿಂದ ಎಲ್ಲರೂ ನಡೆದೇ  ಕ್ರೀಡಾಂಗಣ ಸೇರಿದರು..ಕ್ರೀಡಾಂಗಣದ ಸಮೀಪದಲ್ಲಿಯೇ ಇರುವ ಭೂಗತ ರೈಲು ನಿಲ್ದಾಣಗಳಿಂದ ನಿರಂತರ ಜನಪ್ರವಾಹ. ಒಬ್ಬೊಬ್ಬರ ಕೈಯಲ್ಲಿ ಒಂದೊಂದು ದೇಶದ ಧ್ವಜ. ಗಮನ ಸೆಳೆಯುವ ಹುಮ್ಮಸ್ಸು. ಆದ್ದರಿಂದಲೇ ಬಣ್ಣಬಣ್ಣದ ಟೋಪಿ ತೊಟ್ಟುಕೊಂಡು ಮುಖಕ್ಕೆ ಬಣ್ಣ ಮೆತ್ತಿಕೊಂಡ ಯುವಕ -ಯುವತಿಯರ ದಂಡು ಕೂಡ ಅಪಾರ.ಭಾರಿ ಭದ್ರತೆಯ ನಡುವೆಯೂ ಕ್ರೀಡಾಪ್ರೇಮಿಗಳಿಗೆ ಕ್ರೀಡಾಂಗಣ ಪ್ರವೇಶ ಕಸರತ್ತು ಎನಿಸಲಿಲ್ಲ. ಪ್ರತಿಯೊಂದು ಗ್ಯಾಲರಿ ಪ್ರವೇಶಕ್ಕೆ ಹತ್ತಾರು `ಸೆಕ್ಯೂರಿಟಿ ಗೇಟ್~ ಇದ್ದುದರಿಂದ ದೇಶ ವಿದೇಶಗಳಿಂದ ಬಂದ ಪ್ರವಾಸಿಗರ ಸಾಲುಗಳಲ್ಲಿ ನಿಂತು ಚಡಪಡಿಸಲಿಲ್ಲ.ಕಷ್ಟ ಪಟ್ಟಿದ್ದು ವಾಹನ ದಟ್ಟಣೆ ಹೆಚ್ಚಿದ್ದ ಬೀದಿಗಳಲ್ಲಿ ಸಾಗಿ ಬರುವಾಗ ಮಾತ್ರ. ತಾವು ಕ್ರೀಡಾಂಗಣ ಪ್ರವೇಶಿಸುವ ಪ್ರತಿಯೊಂದು ಕ್ಷಣವನ್ನು ನೆನಪಾಗಿ ಉಳಿಸಿಕೊಳ್ಳುವ ಉತ್ಸಾಹ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry