ಜಕ್ಕೂರು - ಯಲಹಂಕದ ನಡುವಿನ ರಸ್ತೆ ವಿಶಾಲವಾಗಿ, ನಯವಾಗಿ ಅಭಿವೃದ್ಧಿ ಹೊಂದಿದೆ. ಈ ರಸ್ತೆಗೆ ಹೊಂದಿಕೊಂಡಂತೆ ಯಲಹಂಕ ಬಿ.ಬಿ.ಎಂ.ಪಿ. ವ್ಯಾಪ್ತಿಯ `ಶಿವನಹಳ್ಳಿ'ಯಲ್ಲಿ `ವಿ.ಡಿ.ಬಿ.' ಸೆಲ್ಡಾನೆ ಎಂಬ ಸುಮಾರು ಒಂದು ಸಾವಿರ ಕುಟುಂಬಗಳು ವಾಸಿಸುವ ಅಪಾರ್ಟ್ಮೆಂಟ್ ಇದೆ.

ಕೋಟಿ ಕೋಟಿ ವೆಚ್ಚ ಮಾಡಿದವರು ಒಳ ಚರಂಡಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಮಾಡದ ಕಾರಣ ಯು.ಜಿ.ಡಿ. ಪೈಪ್ ಮೂಲಕ ಇತ್ತೀಚೆಗಷ್ಟೇ ನಿರ್ಮಾಣವಾದ ರಸ್ತೆ ಮೇಲೆ ಹರಿಯುತ್ತಿದೆ.

ಈ ವಿಚಾರವಾಗಿ ಯಲಹಂಕ ಬಿ.ಬಿ.ಎಂ.ಪಿ. ಕಚೇರಿಯಲ್ಲಿ ಕೇಳಿದರೆ ಇದಕ್ಕೂ ನಮಗೂ ಸಂಬಂಧ ಇಲ್ಲ ಉಪನಗರದಲ್ಲಿರುವ (ಬಿ.ಡಬ್ಲ್ಯು.ಎಸ್.ಎಸ್. ನರಸಣ್ಣ ಇ. ಇ. 98454 44139) ಇವರಿಗೆ ತಿಳಿಸಿರಿ ಎಂಬ ಉತ್ತರ ಬಂತು.

ಮೇಲ್ಕಂಡ ನರಸಣ್ಣ ಇ.ಇ. ಅವರಿಗೆ ಕರೆ ಮಾಡಿದರೆ ಅಲ್ಲಿ ರಸ್ತೆ ಮೇಲೆ ಹರಿಯುವ ಮಲಿನ ನೀರಿನ ವಿಚಾರವೇ ತಿಳಿದಿಲ್ಲ, ನಮ್ಮ ಎಂಜಿನಿಯರ್ಸ್ನ ಕಳುಹಿಸುತ್ತೇನೆ ಎಂದವರು ರಸ್ತೆ ಮೇಲೆ ನೀರು ಹರಿಯುವುದನ್ನು ತಡೆಯಲು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

ಇಲ್ಲಿನ ಪಾಲಿಕೆ ಸದಸ್ಯರಾಗಲಿ, ಶಾಸಕರಾಗಲಿ ತಕ್ಷಣ ಸಮಸ್ಯೆ ಬರಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ.
-ಜಕ್ಕೂರು .ಎಸ್. ನಾಗರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.