ಜಾಮನಗರ: ಫುಟ್ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿ ಅವರು ಮಂಗಳವಾರ ಇಲ್ಲಿನ ವನ್ಯಜೀವಿ ಆರೈಕೆ ಮತ್ತು ಸಂರಕ್ಷಣಾ ಕೇಂದ್ರವಾದ ವಂತಾರಾಕ್ಕೆ ಭೇಟಿ ನೀಡಿದರು.

ಅನಂತ್ ಅಂಬಾನಿ ಸ್ಥಾಪಿಸಿರುವ ಈ ಸಂರಕ್ಷಣಾ ಕೇಂದ್ರದ ಸಿಬ್ಬಂದಿ ಜೊತೆ ಒಡನಾಡಿದರು. ಮೆಸ್ಸಿ ಜೊತೆ ಇಂಟರ್ಮಯಾಮಿ ಕ್ಲಬ್ನ ಸಹ ಆಟಗಾರರಾದ ಲೂಯಿಸ್ ಸೊರೇಝ್ ಮತ್ತು ರಾಡ್ರಿಗೊ ಡಿ ಪಾಲ್ ಅವರೂ ಹಾಜರಿದ್ದರು. ಅವರನ್ನು ಜಾನಪದ ಸಂಗೀತ, ಸಾಂಪ್ರದಾಯಿಕ ರೀತಿ ಆರತಿ ಬೆಳಗಿ ಸ್ವಾಗತಿಸಲಾಯಿತು.

ಈ ಕೇಂದ್ರದಲ್ಲಿರುವ ಹುಲಿ, ಚಿರತೆ, ಆನೆಗಳು, ಸರಿಸೃಪಗಳ ಆರೈಕೆ ವೀಕ್ಷಿಸಿದರು. ‘ಇದು ನಿಜವಾಗಿಯೂ ಸ್ತುತ್ಯರ್ಹ ಕಾರ್ಯ. ವನ್ಯಜೀವಿಗಳಿಗೆ ಸಿಗುತ್ತಿರುವ ಆರೈಕೆ ನೋಡಿ ಖುಷಿಯಾಗಿದೆ’ ಎಂದು ಮೆಸ್ಸಿ ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.