ಶುಕ್ರವಾರ, ಮಾರ್ಚ್ 5, 2021
21 °C

ಔರಾದ್‌ನಲ್ಲಿ ಮಾಸಿಮಾಡೆ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್‌ನಲ್ಲಿ ಮಾಸಿಮಾಡೆ ಮತಯಾಚನೆ

ಔರಾದ್: ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಿದ್ರಾಮಪ್ಪ ಮಾಸಿಮಾಡೆ ಸೋಮವಾರ ಸಂಜೆ ಪರಿಷತ್ತಿನ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.ಹಿರಿಯ ಸದಸ್ಯ ಬಸವಣಪ್ಪ ಅಲ್ಮಾಜೆ, ಬಂಡೆಪ್ಪ ಕಂಟೆ, ಶಿವರಾಜ ಅಲ್ಮಾಜೆ ಸೇರಿದಂತೆ ಪರಿಷತ್ತಿನ ಹಲವು ಸದಸ್ಯರು ಪಾಲ್ಗೊಂಡು ತಮ್ಮ ಗೆಲುವಿಗೆ ಶ್ರಮಿಸುವುದಾಗಿ ಮಾಸಿಮಾಡೆ ಅವರಲ್ಲಿ ಆತ್ಮವಿಶ್ವಾಸ ತುಂಬಿದರು.

 

ಇದೇ ವೇಳೆ ಮಾತನಾಡಿದ ಮಾಸಿಮಾಡೆ ಪರಿಷತ್ತಿನ ಸದಸ್ಯರ ಮತ್ತು ಗುರು ಹಿರಿಯರ ಆಶೀರ್ವಾದ ನುಡಿಗಳು ನಾನು ಮತ್ತೊಮ್ಮೆ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಾಯಿತು. ನನಗೆ ಮೊದಲ ಅವಧಿಯಲ್ಲಿ ಅವಕಾಶ ಸಿಕ್ಕಾಗ ಪರಿಷತ್ತು ಗ್ರಾಮೀಣ ಭಾಗಕ್ಕೆ ಪರಿಚಯಿಸುವ ಕೆಲಸ ಮಾಡಿದ್ದೇನೆ.ಹಾರಕೂಡದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ, ಮೇಹಕರ, ಶೆಡೋಳ, ಚಿಟಗುಪ್ಪಾ, ಮನ್ನಾಎಖ್ಖಳ್ಳಿ, ಠಾಣಾಕುಶನೂರ್‌ನಲ್ಲಿ ವಲಯ ಸಮ್ಮೇಳನ ನಡೆಸಲಾಗಿದೆ ಎಂದರು.  ಎರಡನೇ ಅವಧಿಯಲ್ಲಿ ಅವಕಾಶ ಸಿಕ್ಕಾಗ 15 ಹೋಬಳಿ, 7 ತಾಲ್ಲೂಕು, 2 ಜಿಲ್ಲಾ, 1 ಜಿಲ್ಲಾ ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಜಿಲ್ಲಾದ್ಯಂತ ಕನ್ನಡ ಸಾಹಿತ್ಯ ಪರಂಪರೆ ಜನಮನಕ್ಕೆ ಮುಟ್ಟಿಸಲಾಗಿದೆ. ಇದರಿಂದ ನನ್ನ ಅಂತರಾಳದಲ್ಲಿರುವ ಕನ್ನಡ ಭಾಷೆ ಮತ್ತು ಸಂಸ್ಕತಿ ಜಾಗೃತಗೊಳಿಸುವಂತೆ ಮಾಡಿದೆ ಎಂದರು.  ವಿವಿಧ ಬಡಾವಣೆಗಳ ಮತದಾರರ ಮನೆ ಬಾಗಿಲಿಗೆ ಹೋಗಿ ಅವರ ಜೊತೆ ಸಮಾಲೋಚನೆ ಮಾಡಿ ನುಡಿ ಸೇವೆಗೆ ಮತ್ತೊಮ್ಮೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.ಚಂದ್ರಕಾಂತ ನಿರ್ಮಳೆ, ಪ್ರಶಾಂತ ಮಠಪತಿ, ಜಗನ್ನಾಥ ಮೂಲಗೆ, ಧನರಾಜ ರಾಜೋಳೆ, ಕಲ್ಲಪ್ಪ ಬಾವುಗೆ, ಸುಭಾಷ ಸಿರಂಜೆ, ಪ್ರಕಾಶ ತಂಬಾಕೆ, ವಿರೇಶ ಮೀಸೆ, ನೀಲಕಂಠ ಕೊಡಗೆ, ಪಂಕಜ್ ಮುಸ್ತುರೆ, ಧನರಾಜ ನಿಟ್ಟೂರೆ, ಬಾಲಾಜಿ ಮೇತ್ರೆ, ಶರಣು ಪಾಟೀಲ, ಸೂರ್ಯಕಾಂತ ಸಿರಂಗಜೆ, ಸಂತೋಷ ಕಮಲನಗರ, ಧನರಾಜ ಭವರಾ, ಬಾಲಾಜಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.