ಔರಾದ್: ತಾಲ್ಲೂಕಿನಲ್ಲಿ 103 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಎಚ್. ಪಾಯಕ್ ತಿಳಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ 103 ತೀವ್ರ ಮತ್ತು 12,292 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ಇಷ್ಟೊಂದು ದೊಡ್ಡ ಸಂಖ್ಯೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಗಮನಿಸಿದರೆ ಆ ಮಕ್ಕಳಿಗೆ ನೀವು ಪೌಷ್ಟಿಕ ಆಹಾರ ನೀಡುತ್ತಿಲ್ಲ ಎನ್ನುವುದು ಖಾತ್ರಿಯಾಗತ್ತದೆ ಎಂದು ಪ್ರೊಬೆಷನರಿ ಸಹಾಯಕ ಆಯುಕ್ತೆ ವಿದ್ಯಾವತಿ ಬೀಳಿಗಿ ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ನಾವು ನಿಯಮಾನುಸಾರ ಮಕ್ಕಳಿಗೆ ಸರ್ಕಾರ ನೀಡುವ ಪೌಷ್ಟಿಕ ಆಹಾರ ವಿತರಿಸುತ್ತಿದ್ದೇವೆ. ಅನುವಂಶಿಯತೆ, ಪರಿಸರ ಇತರೆ ಕಾರಣಗಳಿಂದ ಮಕ್ಕಳು ಅಪೌಷ್ಟಿಕತೆಯಿಂದ ಹೊರ ಬರುತ್ತಿಲ್ಲ ಎಂದು ಸಿಡಿಪಿಒ ಪಾಯಕ್ ಸ್ಪಷ್ಟನೆ ನೀಡಿದರು. ಇದೊಂದು ಗಂಭೀರ ವಿಷಯವಾಗಿದ್ದು, ಜಾಗೂರೂಕತೆ ವಹಿಸುವಂತೆ ಸಹಾಯಕ ಆಯುಕ್ತರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿವಾರು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿವರ ಇಂತಿದೆ. ವಡಗಾಂವ್ (ಡಿ)–10, ಠಾಣಾಕುಶನೂರ–13, ಲಾಧಾ–3, ಕೌಠಾ (ಬಿ)–2, ಭಂಡಾರಕುಮಟಾ–1, ಚಿಕ್ಲಿ (ಯು)–2, ಬೊಂತಿ–1, ಹೊಕ್ರಾಣಾ–2, ಜಮಗಿ–3, ಚಿಕ್ಲಿ (ಜೆ)–1, ಹಾಲಹಳ್ಳಿ–1, ಕೊರೆಕಲ್–6, ಬೆಳಕುಣಿ (ಸಿ)–2, ಬಳತ (ಬಿ)–2, ಹೆಡಗಾಪುರ–02, ಚಾಂದೋರಿ–1, ಚಿಂತಾಕಿ–4, ಸುಂದಾಳ–1, ನಾಗಮಾರಪಳ್ಳಿ–2, ಮುಧೋಳ (ಬಿ)–5, ಔರಾದ್–5. ಬಾದಲಗಾಂವ್–1, ಕಮಲನಗರ–6, ಸೋನಾಳ–3, ಮದನೂರ–2, ಮುರ್ಕಿ–2, ಡಿಗ್ಗಿ–1, ಎಕಲಾರ–1, ಧುಪತಮಹಾಗಾಂವ್–2, ಸಂತಪುರ–1. ಮಾರ್ಚ್–2014ರ ವರೆಗೆ 88 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈಗ ಅದರ ಸಂಖ್ಯೆ 103ಕ್ಕೆ ಹೆಚ್ಚಿದೆ ಎಂದು ಸಿಡಿಪಿಒ ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.