ಶುಕ್ರವಾರ, ಮೇ 7, 2021
21 °C

ಕಂಬಾರರು

ಅದಿತಿ ಎಸ್. ನಾಯಕ, ಬೆಂಗಳೂರು Updated:

ಅಕ್ಷರ ಗಾತ್ರ : | |

ಶಿವಾಪುರವನ್ನು ತಾವು ಧೇನಿಸುತ್ತಲೇ

ಅದನ್ನು ಎಲ್ಲರ ಕಣ್ಣೆದುರಿಗೆ

ತಂದವರಿವರು

ನವಿಲಿನ ಸಾವಿರ ಕಣ್ಣುಗಳನ್ನು

ವರ್ಣಿಸುತ್ತಲೇ

ಅದನ್ನು ನಮ್ಮೆಲ್ಲರ

ಕಣ್ಣ ಮುಂದೆ ಕುಣಿಸಿದವರು

ಬಿಂಬ ಪ್ರತಿಬಿಂಬಗಳ ಮಾಯಕ

ಹೇಳುವುದೂ ಅವರ ಕಾಯಕ

ಅಲ್ಲಿಂದ ಮುಂದೆ ಚಕೋರಿಯ ಚುರುಕು

ಚಂದ್ರಶಿಕಾರಿಯ ಬೇಟೆ, ಬೇಟ

ಯಾವ ವಸ್ತುವಿಗಿಲ್ಲ ಫರಕು

ಎಲ್ಲ ಮಾಯಾಲೋಕವನ್ನು

ಚುಂಬಕದಂತೆ ಸೆಳೆವ ತಾವನ್ನು

ಅರ್ಧ ಶತಮಾನದಿಂದ ಮುಂದೆ

ಇಡುತ್ತಲೇ ಇರುವವರು

ನಮ್ಮ ಘೋಡಗೇರಿಯ

ಚಂದ್ರಶೇಖರ ಕಂಬಾರರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.