ಪಂಚಾಯತ್ ರಾಜ್ ವ್ಯವಸ್ಥೆಯ `ಕಾವಲುಗಾರ'ನಾಗಿ ಕಾರ್ಯನಿರ್ವಹಿಸಬೇಕಾದ ಗ್ರಾಮ ಸಭೆಗಳು ಅಧಿಕಾರ ವಿಕೇಂದ್ರೀಕರಣದ ಮಹತ್ವದ ಅಂಗ. ರಾಜ್ಯದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಾಗ ಅದರ ಮುಖ್ಯ ಉದ್ದೇಶ ಸ್ಥಳೀಯ ಆಡಳಿತವನ್ನು ಅಲ್ಲಿನ ಜನಪ್ರತಿನಿಧಿಗಳೇ ನೋಡಿಕೊಳ್ಳಬೇಕೆಂಬುದಾಗಿತ್ತು.

ಹಾಗೆಯೇ ಹಳ್ಳಿಯ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಧಾನಸೌಧಕ್ಕೆ ಅಲೆಯಬಾರದು ಎಂಬ ಆಶಯವನ್ನೂ ಹೊಂದಿತ್ತು. ಆದರೆ ಪ್ರಜಾಸತ್ತೆಯ ಬೇರುಗಳನ್ನು ಬಲಪಡಿಸುವ ಈ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ.

ನಿಯಮಾವಳಿಯಂತೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಲು ವಿಫಲವಾಗುವ ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಆಯಾ ವಾರ್ಡ್ ಸದಸ್ಯರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಗೆ ಸದನದಲ್ಲಿ ಒಪ್ಪಿಗೆ ಪಡೆದು ಅಸ್ತಿತ್ವಕ್ಕೆ ತರುವ ಮೂಲಕ ಹಿಡಿದ ಗ್ರಹಣವನ್ನು ಬಿಡಿಸುವ ಕೆಲಸವನ್ನು ಮಾಡಲಾಗಿದೆ. ಇದೊಂದು ಸ್ವಾಗತಾರ್ಹ ನಡೆಯಾದರೂ, ಇದನ್ನು ಆತುರಾತುರವಾಗಿ ತರುವ ಬದಲು ಮತ್ತಷ್ಟು ಚರ್ಚೆಗೆ ಒಳಪಡಿಸ ಬಹುದಾಗಿತ್ತು.

ಗ್ರಾಮೀಣಭಾಗದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಚುನಾಯಿತ ಪ್ರತಿನಿಧಿಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವುದಕ್ಕೆ ಈ ತಿದ್ದುಪಡಿ ನೆರವಾಗುತ್ತದೆ ಎಂದು ಪ್ರತಿಪಕ್ಷಗಳು ತಿದ್ದುಪಡಿ ಉದ್ದೇಶವನ್ನು ತೀವ್ರವಾಗಿ ವಿರೋಧಿಸಿವೆ. ವಾರ್ಡ್ ಸದಸ್ಯರೇ ಸಭೆ ಕರೆಯಬೇಕು ಎಂಬ ತಿದ್ದುಪಡಿ ಮಾಡಿದರೆ ಅಪಾಯ ಇದೆ ಎಂದು ಸಭಾಧ್ಯಕ್ಷರೇ ಎಚ್ಚರಿಕೆ ನೀಡಿದ್ದಾರೆ. ಆದರೂ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಬೇಕು ಎಂಬ ಸದುದ್ದೇಶದಿಂದ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಗ್ರಾಮಪಂಚಾಯಿತಿಗಳಿಗೆ ಹೆಚ್ಚಿನ ಮಹತ್ವ ಇರಬೇಕು, ಅವುಗಳು ಶಾಸನಾತ್ಮಕವಾದ ಕರ್ತವ್ಯಗಳನ್ನು ನಿಭಾಯಿಸಬೇಕು ಆ ಕಾರ್ಯವನ್ನು ಮಾಡದಿದ್ದಾಗ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಇರಬೇಕು ಎಂದು ಅವರು ವಾದಿಸಿರುವುದು ಅಸಾಂವಿಧಾನಿಕ ಹಾಗೂ ಅಸಮರ್ಥನೀಯ. ಗ್ರಾಮಪಂಚಾಯಿತಿಗಳ ಬಡ ಅಧ್ಯಕ್ಷರ ಮೇಲೆ ಮಾತ್ರ ಬ್ರಹ್ಮಾಸ್ತ್ರ ಏಕೆ? ಇಂತಹ ಕ್ರಮ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೂ ಅನ್ವಯವಾಗಬೇಕು. ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎನ್ನುವ ನಿಯಮವಿದ್ದರೂ ಅದು ನಡೆಯದಿದ್ದ ಪಕ್ಷದಲ್ಲಿ ವಿಧಾನಸಭಾ ಸದಸ್ಯರಿಗೂ ಅದು ಅನ್ವಯವಾಗಬೇಕು. ಆಗ ಸುಧಾರಣೆ ಸಾಧ್ಯವಾಗಬಹುದು. ಇಲ್ಲದಿದ್ದರೆ ಈ ತಿದ್ದುಪಡಿ ದುರುಪಯೋಗವಾಗುವ ಸಂಭವ ಇಲ್ಲದಿಲ್ಲ.

ಪಂಚಾಯಿತಿ ವ್ಯವಸ್ಥೆ ಯಶಸ್ಸಾಗಬೇಕಾದರೆ ಗ್ರಾಮಸಭೆಗಳಲ್ಲಿ ಜನ ಸೇರಬೇಕು, ಪ್ರಶ್ನಿಸುವ ಮೂಲಕ ಆಡಳಿತ ಸುಧಾರಣೆಗೆ ನೆರವಾಗಬೇಕು. ಹಳ್ಳಿಯ ಪ್ರತಿಯೊಬ್ಬನೂ ಗ್ರಾಮಸಭೆಯ ಸದಸ್ಯ. ಆದರೆ ಆ ಸದಸ್ಯನಿಗೆ ತನ್ನ ಅಧಿಕಾರದ ಶಕ್ತಿಯೇ ಗೊತ್ತಿಲ್ಲ ಎನ್ನುವುದೇ ದುರಂತ. ಗ್ರಾಮಸಭೆಗಳು ಫಲಾನುಭವಿಗಳ ಸಭೆಯಾಗಿ ಮಾರ್ಪಟ್ಟಿರುವುದು, ಸ್ವಂತ ಕೆಲಸಕ್ಕೆ ಸಭೆಗೆ ಆಗಮಿಸುವ ಪ್ರವೃತ್ತಿ ಇರುವುದು ಒಂದು ದೌರ್ಬಲ್ಯ.

ಹೀಗಾಗಿ ಕರ್ನಾಟಕದಲ್ಲಿ ಗ್ರಾಮಸಭೆಗಳು ವೈಫಲ್ಯದ ಹಾದಿಯಲ್ಲಿವೆ. ಮೂಲ ಉದ್ದೇಶದಲ್ಲಿ ಶೋಚನೀಯವಾಗಿ ಸೋತಿವೆ.ನೆರೆಯ ರಾಜ್ಯದಲ್ಲಿ ಸಮರ್ಪಕವಾಗಿ ಇದು ಈಡೇರಿರಬೇಕಾದರೆ ನಮ್ಮಲ್ಲಿ ಏಕೆ ಸಾಧ್ಯವಿಲ್ಲ? ಗ್ರಾಮ ಸಭೆಯ ಮಹತ್ವವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವ, ಅವರ ಅರಿವನ್ನು ಹೆಚ್ಚಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಪ್ರಜಾಸತ್ತೆಯ ಬೇರುಗಳನ್ನು ಕೆಳಹಂತದಲ್ಲಿ ಬಲಪಡಿಸುವ ಕಾರ್ಯ ಇನ್ನಾದರೂ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.