ಶನಿವಾರ, ಜನವರಿ 18, 2020
26 °C

ಕಠೋರ ಬೇಡ: ಪಶ್ಚಿಮಬಂಗಾಳ ಕಾಂಗ್ರೆಸ್‌ಗೆ ಎಐಸಿಸಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಪಶ್ಚಿಮ ಬಂಗಾಳದ ಆಡಳಿತರೂಢ ಮಿತ್ರ ಪಕ್ಷಗಳಲ್ಲಿ ಪರಸ್ಪರ ಟೀಕಾಪ್ರಹಾರದಲ್ಲಿ ಮಧ್ಯಪ್ರವೇಶಿಸಿರುವ ಎಐಸಿಸಿ, ಮಿತ್ರ ಪಕ್ಷದ ವಿರುದ್ಧ ಕಠಿಣ ಪದ ಬಳಕೆ ಬೇಡ ಎಂದು ರಾಜ್ಯದ ಕಾಂಗ್ರೆಸ್ ಘಟಕಕ್ಕೆ ಕಿವಿಮಾತು ಹೇಳಿದೆ. ಜೊತೆಗೆ ತೃಣಮೂಲ ಕಾಂಗ್ರೆಸ್ ಸಹ ಇದನ್ನೇ ಅನುಸರಿಸಬೇಕು ಎಂದು ಸಲಹೆ ನೀಡಿದೆ.

ಮೈತ್ರಿ ವಿರುದ್ಧ ಕಠಿಣ ಪದ ಬಳಸುವುದನ್ನು ಬಿಡಬೇಕು ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರನ್ನು ಕೋರಲಾಗಿದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಹೊತ್ತಿರುವ ಶಕೀಲ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದರು.

ತೃಣಮೂಲ ಕಾಂಗ್ರೆಸ್ ಸ್ಥಳೀಯ ಮುಖಂಡರಿಗೂ ಇದೇ ರೀತಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೋಲ್ಕತ್ತದಲ್ಲಿ ಇಂದಿರಾ ಭವನದ ಮರು ನಾಮಕರಣ, ಕಾಲೇಜು ಪ್ರಾಚಾರ್ಯರ ಮೇಲಿನ ಹಲ್ಲೆ ಇತರ ಸ್ಥಳೀಯ ಕಾರಣಗಳಿಂದಾಗಿ ಮಿತ್ರ ಪಕ್ಷಗಳಲ್ಲಿ ಬಿರುಕು ಉಂಟಾಗಿತ್ತು.

ಪ್ರತಿಕ್ರಿಯಿಸಿ (+)