ಸೋಮವಾರ, ಮೇ 23, 2022
21 °C

ಕಡಿಮೆ ನೀರು ಬಳಕೆ ಕೃಷಿ ವಿಧಾನ ಅನುಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಕಡಿಮೆ ನೀರಿನಲ್ಲಿ ಹೆಚ್ಚಿನ ಆದಾಯ ಪಡೆಯುವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಜೀವೇಂದ್ರಕುಮಾರ ತಿಳಿಸಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆ, ನವನಗರ, ಕೃಷಿ ವಿವಿ, ಧಾರವಾಡದ ನೀರು ನಿರ್ವಹಣಾ ಸಂಶೋಧನಾ ಕೇಂದ್ರ, ಬೆಳಮಟಗಿ ಆಶ್ರಯದಲ್ಲಿ ವೈಜ್ಞಾನಿಕ ನೀರು ನಿರ್ವಹಣೆ ಕುರಿತು ನವನಗರದಲ್ಲಿ  ಈಚೆಗೆ ಆರಂಭವಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಹಾಗೂ ರೈತ ಮಹಿಳೆಯರಿಗಾಗಿ ಹಮ್ಮಿಕೊಂಡ ಈ ಕಾರ್ಯಾಗಾರದಲ್ಲಿ ನೀರು ನಿರ್ವಹಣಾ ಕೇಂದ್ರದ ಮುಖ್ಯಸ್ಥ ಡಾ. ಎ.ಬಿ. ಖೋತ ನೀರಿನ ನಿರ್ವಹಣೆ ಹಾಗೂ ಉತ್ಪಾದಕತೆ ಮಹತ್ವವನ್ನು ತಿಳಿಸಿಕೊಟ್ಟರು.ತರಬೇತಿ ಮುಖಾಂತರ ಕೃಷಿಯಲ್ಲಿ ನೀರಿನ ಉತ್ಪಾದಕತೆ ಹೆಚ್ಚಿಸಿ, ರೈತರ ಜೀವನೋಪಾಯ ವೃದ್ಧಿಸುವ ಯೋಜನೆ ಅಡಿಯಲ್ಲಿ ರೈತರು ಹಾಗೂ ರೈತ ಮಹಿಳೆಯರಿಗಾಗಿ ತರಬೇತಿ ನೀಡುವವರಿಗಾಗಿ ಈ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಯೋಜನೆಯ ಧಾರವಾಡ ಜಿಲ್ಲೆಯ ನಿರ್ದೇಶಕ ಸೀತಾರಾಮ್ ಶೆಟ್ಟಿ ತಿಳಿಸಿದರು.

ಧಾರವಾಡ ಕೃಷಿ ವಿವಿಯ ಡಾ.ವಿಠ್ಠಲ ಮಾತನಾಡಿದರು. ಸಿದ್ಧಲಿಂಗಮ್ಮ ನಿರೂಪಿಸಿದರು. ವಿಶಾಲ ಮಲ್ಲಾಪುರ ಸ್ವಾಗತಿಸಿದರು. ಡಾ.ಎಸ್.ಎಸ್.ಗುಂಡ್ಲೂರು, ಡಾ.ಜೆ.ಕೆ. ನೀಲಕಾಂತ ಮೊದಲಾದವರು ಹಾಜರಿದ್ದರು.ಮೇಲು ಹೊದಿಕೆ ಕುರಿತು ಮಾಹಿತಿ:

ಶುಕ್ರವಾರ ನಡೆದ ಶಿಬಿರದಲ್ಲಿ ಭೀಮರಾಯನಗುಡಿ ಕೃಷಿ ವಿವಿಯ ಮುಖ್ಯಸ್ಥ ಡಾ.ಎಂ.ಬಿ. ಚಿತ್ತಾಪುರ  ‘ತೋಟಗಾರಿಕೆ ಬೆಳೆಯಲ್ಲಿ ನೀರಿನ ತೇವಾಂಶ ರಕ್ಷಿಸಲು ಅಗತ್ಯವಿರುವ ಮೇಲು ಹೊದಿಕೆ ಮಹತ್ವದ ಕುರಿತು ತಿಳಿಸಿದರು.‘ಮಣ್ಣಿನ ಕ್ಷಾರಗಳನ್ನು ಹೋಗಲಾಡಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಕುರತು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.