ಶುಕ್ರವಾರ, ಜನವರಿ 24, 2020
21 °C

ಕಣ್ಣೀರಿಟ್ಟ ಥಾಯ್‌ ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಂಕಾಕ್‌ (ಪಿಟಿಐ): ಸರ್ಕಾರಿ ವಿರೋಧಿ ದಂಗೆ ಮತ್ತು ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸೋಮವಾರ ಸಂಸತ್‌ ವಿಸರ್ಜನೆ ಮಾಡಿದ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲಕ್‌ ಶಿನವತ್ರಾ  ತೀವ್ರ ಭಾವುಕರಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.ಥಾಯ್‌ ಆರ್ಮಿ ಕ್ಲಬ್‌ನಲ್ಲಿ ನಡೆದ ವಾರದ ಸಚಿವ ಸಂಪುಟದ ಸಭೆ ಈ ಘಟನೆಗೆ ಸಾಕ್ಷಿಯಾಯಿತು.ಸಂಸತ್‌ ವಿಸರ್ಜನೆಯ ನಂತರ ನಡೆದ ಮೊದಲ ಸಭೆಯಲ್ಲಿ ಮಾತನಾಡುವ ವೇಳೆ ತೀವ್ರ ಭಾವುಕರಾದ ಅವರು,  ತಾನು ಮಾಡಿದ ತಪ್ಪಾದರೂ ಏನು ಎಂದು ವಿರೋಧಿಗಳನ್ನು ಪ್ರಶ್ನಿಸಿದರು.ಪ್ರಧಾನಿ ಹುದ್ದೆಯಿಂದ  ಕೆಳಗಿಳಿಯಲು  ಪ್ರತಿಭಟನಾಕಾರರು 24 ಗಂಟೆಗಳ ಗಡುವು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಯ ನಂತರ ತುರ್ತುಸಭೆ ನಡೆಸಿದ ಆಡಳಿತರೂಢ ಫೆ ಥಾಯ್‌ ಪಕ್ಷ, ಶಿನವತ್ರಾ ನೇತೃತ್ವದಲ್ಲಿಯೇ  ಮುಂದಿನ ಚುನಾವಣೆ ಎದುರಿಸುವುದಾಗಿ ಘೋಷಿಸಿದೆ. 

ಥಾಯ್ಲೆಂಡ್‌ನಲ್ಲಿ ಮಂಗಳವಾರ ಯಾವುದೇ ಪ್ರತಿಭಟನೆ ನಡೆಯಲಿಲ್ಲ.

ಪ್ರತಿಕ್ರಿಯಿಸಿ (+)