ಅತ್ಯುತ್ಕೃಷ್ಟ ಗುಣಮಟ್ಟದ ಅಮೂಲ್ಯ ವಜ್ರ, ರೂಬಿ, ಪಚ್ಚೆ, ಹರಳುಗಳೊಂದಿಗೆ ಹೊಳೆ ಹೊಳೆವ ವಜ್ರದಾಭರಣಗಳ ಪ್ರದರ್ಶನ ನಡೆಸುತ್ತಿದೆ ರೆಸಿಡೆನ್ಸಿ ರಸ್ತೆ ಕ್ಯಾಷ್ ಫಾರ್ಮಸಿ ಬಳಿಯ ದೇವತಾ ಪ್ಲಾಜಾದ ಭುರಾಮಲ್ ರಾಜಮಲ್ ಸುರಾನಾ ಮಳಿಗೆ.

ಇದರ ಜತೆಗೆ ರಾಜಸ್ತಾನಿ ವಿನ್ಯಾಸಗಳ ವೈಶಿಷ್ಟ್ಯವಾದ ಮೀನಾಕಾರಿ, ಪೊಲ್ಕಿ ಕುಸುರಿಯೂ ಸೇರಿ ಮೆರುಗು ಹೆಚ್ಚಿದೆ. ಕಪ್ಪು, ಗುಲಾಬಿ, ಬಿಳಿಯ ವಜ್ರದಾಭರಣಗಳು, ಕಟ್ ಮತ್ತು ಅನ್ಕಟ್ ವಜ್ರದಾಭರಣಗಳ ಸೊಬಗು ಕಣ್ಸೆಳೆಯುತ್ತವೆ. ಕಿವಿ ಆಭರಣಗಳು, ಕಾಕ್ಟೇಲ್ ಬೆರಳಿನುಂಗುರಗಳು, ಅಗಲವಾದ ಬ್ರೇಸ್ಲೆಟ್ಗಳು, ಚೋಕರ್, ನೆಕ್ಲೇಸ್ ವಿನ್ಯಾಸಗಳೆಲ್ಲ ಅಪರೂಪದ ಕೈಕುಸುರಿಯ ಕಲಾವಂತಿಕೆ ಮೆರೆದಿವೆ.

ಬಿಳಿ ಲೋಹದ ಮೇಲೆ ಕಪ್ಪು ರ್ಹೋಡಿಯಂ ನೋಟ ನೀಡಿದ ರೂಬಿ ಮತ್ತು ಅನ್ಕಟ್ ಡೈಮಂಡ್ನ ಚೋಕರ್, ಸ್ಕಾರ್ಫ್ ಪಿನ್ ಮತ್ತು ಬ್ರೇಸ್ಲೆಟ್ನ ಸೆಟ್ ಅನನ್ಯ. ಜಾಲು ಕುಸುರಿಯ ಬ್ರೇಸ್ಲೆಟ್, ಕಪ್ಪು ಮತ್ತು ಬಿಳಿಯ ವಜ್ರದ ಬಳೆಗಳನ್ನು ಜೋಡಿಸಿದಂತಿರುವ ಅಗಲವಾದ ಬ್ರೇಸ್ಲೆಟ್ಗೆ ರೋಸ್ಕಟ್ನ ಡೈಮಂಡ್ ವಿಶೇಷ ಮೆರುಗು. ಎಂಬೋಸ್, ಎನ್ಗ್ರೇವ್ ಮಾಡಿದ ಮೀನಾಕಾರಿ ಕುಸುರಿಯ ನೆಕ್ಲೇಸ್ನಲ್ಲಿ ಮೊಘಲ್ ಕಲೆಯೂ ಹದವಾಗಿ ಮಿಳಿತವಾಗಿದೆ. ಹಳೆಯ ಕಟ್ಸ್ರಿ ಶೈಲಿಯ ಚೋಕರ್ ಕಮ್ ನೆಕ್ಲೇಸ್ ಸೆಟ್ ಕೂಡ ಅತ್ಯಾಕರ್ಷಕ.

ಭುರಾಮಲ್ ರಾಜಮಲ್ ಸುರಾನಾ ಜೈಪುರದ ಆಭರಣ ತಯಾರಕರು. 1735ರಲ್ಲಿ ಜೈಪುರದ ಎರಡನೇ ಸವಾಯಿ ಜೈಸಿಂಗ್ ತನ್ನ ರಾಜಮನೆತನದ ಆಭರಣಕಾರರನ್ನಾಗಿ ಆಹ್ವಾನಿಸಿದಂದಿನಿಂದಲೂ ಆಭರಣ ಕುಸುರಿಯ ಕೌಶಲಗಳಲ್ಲಿ ನೈಪುಣ್ಯ ಮೆರೆಯುತ್ತಲೇ ಸಾಗಿರುವ ಖ್ಯಾತಿ ಇವರದು. ಅನೇಕ ತಲೆಮಾರುಗಳಿಂದ ತಮ್ಮದೇ ವಿಶಿಷ್ಟ ಆಭರಣ ತಯಾರಿಕೆಯೊಂದಿಗೆ ಗುರುತಿಸಿಕೊಂಡಿದ್ದು ಸಾಂಪ್ರದಾಯಿಕ, ಜಡಾವ್, ಕುಂದನ್ ಮತ್ತು ಮೀನಾಕಾರಿ ಕುಸುರಿಗಳೊಂದಿಗೆ ತಳುಕು ಹಾಕಿಕೊಂಡ ಹೆಸರು.

ಇದೀಗ ಬೆಂಗಳೂರಿನ ಸಮಕಾಲೀನ ಸ್ತ್ರೀಯರಿಗೆಂದೇ ಸಾಂಪ್ರದಾಯಿಕ ಕಳೆಯ ಆಧುನಿಕ ನೋಟದ ವಜ್ರದಾಭರಣಗಳನ್ನು ಪರಿಚಯಿಸುತ್ತಿರುವುದಾಗಿ ಸುರಾನಾ ಸಮೂಹದ ರಜನೀಶ್ ಮೂಕಿಮ್ ಹೇಳುತ್ತಾರೆ. ಪ್ರದರ್ಶನ ಬುಧವಾರ ಮುಕ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.