ಹುಬ್ಬಳ್ಳಿ: ಆ ಊರಲ್ಲಿ `ಪುಟ್ಟಯ್ಯ ಈರಯ್ಯ ಹಿರೇಮಠ~ ಅಂದರೆ ಯಾರಿಗೂ ಗೊತ್ತಿಲ್ಲ. ಆದರೆ `ಕತ್ತೆಸ್ವಾಮಿ~ ಅಂದರೆ ಎಲ್ಲರಿಗೂ ಗೊತ್ತು! ತೆಂಗಿನಕಾಯಿ, ಬಾಳೆಕಾಯಿ ಸಾಗಾಟಕ್ಕೆ ಕತ್ತೆಗಳನ್ನು ಬಳಸಿಕೊಂಡ ಕಾರಣ ಊರಿನ ಜನ ಅವರಿಗೆ ಇಟ್ಟ ಅಡ್ಡ ಹೆಸರೇ `ಕತ್ತೆಸ್ವಾಮಿ~.

80ರ ಹರೆಯದ ಈ ಕತ್ತೆಸ್ವಾಮಿ ಅಂತಿಂಥ ಅಸಾಮಿಯಲ್ಲ. ದುಡಿಮೆಗೆ ಕತ್ತೆಗಳನ್ನು ಬಳಸಿಕೊಂಡು `ಲಕ್ಷಾಧೀಶ~ನಾದ ಕಾಯಕಜೀವಿ. ದಶಕಗಳಿಂದ ನಡೆಸುತ್ತಿರುವ ವ್ಯಾಪಾರದಲ್ಲಿ ಸ್ವಾಮಿಗೆ ಊರುಗೋಲಾಗಿ ಅವರ ಬದುಕನ್ನೇ ಬದಲಾಯಿಸಿ ಬಿಟ್ಟಿವೆ ಕತ್ತೆಗಳು!

ಮೂಲತಃ ಹಾವೇರಿಯ ಅಕ್ಕೂರಿನವರಾದ ಹಿರೇಮಠರ ತಂದೆ ಜೋಯಿಡಾ ತಾಲ್ಲೂಕಿನ ಉಳವಿಯಲ್ಲಿ ಅರ್ಚಕರಾಗಿದ್ದರು. 37 ವರ್ಷಗಳ ಹಿಂದೆ ಉಳವಿಗೆ ಬಂದ ಅವರು ತಂದೆಯ ಬಳಿಕ ಅಲ್ಲೇ ಉಳಿದು ಅಕ್ಕಮಹಾದೇವಿ ದೇವಾಲಯದ ಅರ್ಚಕನಾದರು. ಹೊಟ್ಟೆಹೊರೆಯುವುದು ಕಷ್ಟವಾದಾಗ ವ್ಯಾಪಾರಕ್ಕೆ ಇಳಿದರು.

ಉಳವಿ ದಟ್ಟ ಕಾಡಿನ ನಡುವೆ ಇದೆ. ಸುತ್ತಲಿನ ಶಿವಪುರ, ಚಿಲಿಮಿ, ಗದ್ದೆಮನೆ, ಕೊಡ್ತಳ್ಳಿ, ಬಾಬುಕುಂಬ್ರಿ, ಬೀರ್ಕೋಲು, ಬುಗರಿಗದ್ದೆಗೆ ಯಾವ ವಾಹನವೂ ಹೋಗುತ್ತಿರಲಿಲ್ಲ. ಮಳೆಗಾಲದಲ್ಲಿ ಇನ್ನೂ ಕಷ್ಟ. ತೆಂಗಿನಕಾಯಿ, ಬಾಳೆಕಾಯಿ ಹೊತ್ತು ನಡೆದು ಸುಸ್ತಾದ ಹಿರೇಮಠರು ಹಳಿಯಾಳದಿಂದ ರೂ. 100 ತೆತ್ತು ಕತ್ತೆ ತಂದರು. ಅದಕ್ಕೆ `ಕಮಲಿ~ ಎಂದು ಹೆಸರಿಟ್ಟು ತಮ್ಮದೇ ಆದ `ಸಾಗಣೆ~ ವ್ಯವಸ್ಥೆ ಮಾಡಿಕೊಂಡರು. ಅಲ್ಲಿಂದ ಹಿರೇಮಠರು `ಕತ್ತೆಸ್ವಾಮಿ~ಯಾದರು.

`ಕಮಲಿ~ ಈಗ ಇಲ್ಲ. ಆದರೆ ಕಮಲಿಯ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಸ್ವಾಮಿ ಬಳಿ ಏಳು ಕತ್ತೆಗಳಿವೆ. ಅವುಗಳೆಂದರೆ ಲಕ್ಷ್ಮಿ, ಸರಸ್ವತಿ, ಕಮಲಿ, ಗಂಗಿ, ಭೀಮ, ಲಕ್ಷ್ಮಣ, ರಾಮ. ಅವರು ಹೆಸರು ಕರೆದರೆ ಸಾಕು ಕತ್ತೆಗಳು ಎದುರು ಬಂದು `ಸ್ವಾಮಿ ನಿಷ್ಠೆ~ ಮೆರೆಯುತ್ತವೆ!

ಸ್ವಾಮಿ ಬಳಿ ಐದು ಕುದುರೆಗಳಿವೆ. ಅವೆಂದರೆ ಸರಸ್ವತಿ, ಮಾದೇವಿ, ಗಂಗೆ ಇನ್ನೆರಡು ಮರಿಗಳಾದ ಅಮಾಸಿ ಮತ್ತು ಸಾಮಿ. ಹೊರೆ ಹೊತ್ತು ಕತ್ತೆಗಳು ಸಾಗುವಾಗ ಅವುಗಳ ಹಿಂದೆ ಇವರು ಕುದುರೆ ಮೇಲೆ ಸಾಗುತ್ತಾರೆ.
ಹಳ್ಳಿಗಳಲ್ಲಿ ಖರೀದಿಸಿದ ಕಾಯಿಗಳನ್ನು ಕತ್ತೆಯ ಬೆನ್ನಿಗೆ ಹೊರಿಸಿ ಉಳವಿಗೆ ತಂದು.

ಅಲ್ಲಿಂದ ಜೀಪುಗಳಲ್ಲಿ ಜೋಯಿಡಾ, ದಾಂಡೇಲಿಗೆ ಸಾಗಿಸಿ ವ್ಯಾಪಾರ ಮಾಡುತ್ತಾರೆ ಸ್ವಾಮಿ. ಇತರರು ಸ್ವಾಮಿಯ ಕತ್ತೆ ಮೇಲೆ ಕಾಯಿ ಸಾಗಿಸಿದರೆ ಕಾಯಿಂದಕ್ಕೆ ಎರಡು ರೂಪಾಯಿಯಂತೆ ಬಾಡಿಗೆ ಕೊಡಬೇಕು.

ಒಂದು ಕತ್ತೆಯಿಂದ ದಿನಕ್ಕೆ 100 ರೂಪಾಯಿ ಸಂಪಾದನೆ ಇದೆಯಂತೆ. ಇದೇ ಸಂಪಾದನೆಯಿಂದ ಸ್ವಾಮಿ ಉಳವಿಯಲ್ಲಿ ಸ್ವಂತ ಮನೆ ಕಟ್ಟಿಸಿದ್ದಾರೆ. ಒಬ್ಬ ಅಳಿಯನಿಗೆ ಟೆಂಪೊ, ಇನ್ನೊಬ್ಬನಿಗೆ ಜೀಪು `ಗಿಫ್ಟ್~ ಕೊಟ್ಟಿದ್ದಾರೆ!
`ಕತ್ತೆ ಭಾರಿ ನಂಬಿಕೆಯ ಪ್ರಾಣಿ. ನಿಷ್ಠೆಯಿಂದ ದುಡೀತಾವೆ. ಮನುಷ್ಯರಂತೆ ಹೇಗೇಗೊ ಆಡೋದಿಲ್ಲ. ಕಾಡಿನಲ್ಲಿ ಸಾಗುವಾಗ ಕರಡಿ, ಕಾಡುನಾಯಿ, ಕಾಡುಕೋಣ ಎದುರಾದಾಗ ಒಂದೇ ಸಮ ಅರಚಿ ಅವುಗಳಿಗೆ ಲಾತ ಕೊಟ್ಟು ನನ್ನನ್ನು ಬಚಾವ್ ಮಾಡಿವೆ~ ಎನ್ನುತ್ತಾರೆ ಹೆಮ್ಮೆಯಿಂದ.

`ಮನೆಯಲ್ಲಿ ಹೆಂಡತಿ ಕಾಶವ್ವ ಮತ್ತು ನಾನು ಇಬ್ಬರೇ. ಎಷ್ಟು ಸಾಧ್ಯವೊ ಅಷ್ಟು ದುಡಿಯೋದು, ಮುಂದಿನದು ದೇವ್ರಿಗೆ ಬಿಟ್ಟದ್ದು~ ಎನ್ನುತ್ತಾರೆ ಕತ್ತೆಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.