ಭಾನುವಾರ, ಏಪ್ರಿಲ್ 2, 2023
31 °C

ಕತ್ರಿನಾ ಯಶೋಯಾನ

ಪೂರ್ವಿ Updated:

ಅಕ್ಷರ ಗಾತ್ರ : | |

ಕತ್ರಿನಾ ಯಶೋಯಾನ

ಮೂರು ವರ್ಷಗಳಿಂದ ಸೆಕ್ಸಿ ತಾರೆ ಪಟ್ಟ ಬಿಟ್ಟಿಳಿಯದ ಕತ್ರಿನಾ ಒಂದು ಕಡೆ. ಅವರ ಜೋಡಿ ಕೂಡಿ ಹಾಡಿ, ಕುಣಿದು, ನಕ್ಕು ನಗಿಸಿ ಹಿಟ್ ಮಾಡಲು ಅಕ್ಷಯ್ ಕುಮಾರ್ ಇನ್ನೊಂದು ಕಡೆ. ಈಗ ಹಾದಿಬದಿಗೆ ಪ್ರಚಾರಕ್ಕೆಂದು ಇಬ್ಬರೂ ಅಡ್ಡಾಡತೊಡಗಿರುವ ಸಿನಿಮಾ ‘ತೀಸ್ ಮಾರ್ ಖಾನ್’. ಫರ್ಹಾ ಖಾನ್ ಇದರ ನಿರ್ದೇಶಕಿ. ಬಂಡವಾಳದಲ್ಲಿ ಅಕ್ಷಯ್ ಕುಮಾರ್ ಪಾಲೂ ಇದೆ. ಈ ಚಿತ್ರ ಗೆಲ್ಲಿಸಲು ಸಂಕಲ್ಪ ಮಾಡಿದಂತೆ ಅವರು ಬಿರುಸಿನ ಪ್ರಚಾರದಲ್ಲಿ ತೊಡಗಲು ಅದೂ ಕಾರಣವಿರಬಹುದು.ನಟಿಯಾಗಿ ಅಷ್ಟೇನೂ ಒಳ್ಳೆಯ ವಿಮರ್ಶೆ ಪಡೆಯದ ಕತ್ರಿನಾ ಸೌಂದರ್ಯದ ವಿಷಯದಲ್ಲಿ ಮಾತ್ರ ಸದಾ ಮುಂದು. ಅಕ್ಷಯ್ ಮಾತಿನಲ್ಲೇ ಹೇಳುವುದಾದರೆ ಅವರು ಅದೃಷ್ಟ ದೇವತೆ. ‘ಜನ ಬೆಕ್ಕು ಅಡ್ಡಬಂತು ಅಂತ ಸ್ವಲ್ಪ ಹೊತ್ತು ನಿಲ್ಲುತ್ತಾರೆ. ಆದರೆ, ಕೆಲವರಿಗೆ ಸುಂದರವಾದ ಕರಿಬೆಕ್ಕು ಅಡ್ಡಬಂದರೆ ಒಳ್ಳೆಯದಾಗುತ್ತದೆ. ಕತ್ರೀನಾ ಕೂಡ ಹಾಗೆಯೇ. ಅದಕ್ಕೇ ನಾನು ಅವಳನ್ನ ಪ್ರೀತಿಯಿಂದ ಬ್ಲಾಕ್ ಕ್ಯಾಟ್ (ಕೆ ಫಾರ್ ಕ್ಯಾಟ್) ಅಂತ ಕರೀತೀನಿ. ಅಭಿನಯದ ಅಖಾಡಕ್ಕಿಳಿದರೆ ಯಾರ ಜೊತೆಗೂ ಪೋಟಿಗೆ ನಿಲ್ಲುವ ಹುಡುಗಿ. ಚೆಲುವಿನಲ್ಲಿ ಎರಡು ಮಾತಿಲ್ಲ. ಅವಳು ಸುಳಿದರೆ ಸಾಕು, ಎಂಥವರೂ ಸುಸ್ತಾಗುವ ಸೌಂದರ್ಯ. ನನ್ನ, ಅವಳ ಎತ್ತರ ಹೊಂದುವುದರಿಂದ ಜೋಡಿಯೂ ಕ್ಲಿಕ್ಕಾಗುತ್ತಿದೆಯೋ ಏನೋ? ಈ ಸಿನಿಮಾ ಕೂಡ ಹಿಟ್ ಆದರೆ ಸಾಕು ಅಂತ ಇಷ್ಟದೇವರನ್ನು ಪ್ರಾರ್ಥಿಸುತ್ತಿದ್ದೇನೆ’ ಅಂತಾರೆ ಅಕ್ಷಯ್ ಕುಮಾರ್.ಅಕ್ಷಯ್ ಇಷ್ಟೆಲ್ಲ ಹೊಗಳುವ ಕತ್ರಿನಾ ಅದೃಷ್ಟವಂತೆ ಎನ್ನಲು ಇನ್ನೂ ಒಂದು ಕಾರಣವಿದೆ. ಕರೀನಾ ಕಪೂರ್ ಒಂದಲ್ಲ ಒಂದು ಕಾರಣಕ್ಕೆ ನಟಿಸಲು ಆಗದ ‘ನಮಸ್ತೆ ಲಂಡನ್’, ‘ರೇಸ್’ ಹಾಗೂ ‘ಸಿಂಗ್ ಈಸ್ ಕಿಂಗ್’ ಚಿತ್ರಗಳಲ್ಲಿ ಕತ್ರಿನಾ ನಟಿಸಿದರು. ಅವೆಲ್ಲಾ ಹಣ ಮಾಡಿದವು. ಕರೀನಾ ಕೂಡ ಈಗ ಕತ್ರಿನಾ ಕಡೆ ಬೆರಗುಗಣ್ಣು ಬೀರುತ್ತಿರುವುದು ಅದೇ ಕಾರಣಕ್ಕೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.