‘ಮ್ಯಾಕ್ಸ್’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ನ ಸೂತ್ರಧಾರ. ‘ಮ್ಯಾಕ್ಸ್’ನಲ್ಲಿ ಕಥೆಯನ್ನು ನೇರವಾಗಿ ಹೇಳಿದ್ದ ವಿಜಯ್, ‘ಮಾರ್ಕ್’ನಲ್ಲಿ ಕಥೆಯನ್ನು ವಿಜೃಂಭಿಸಲು ಹೋಗಿ ಎಡವಿದ್ದಾರೆ. ಅಭಿಮಾನಿಗಳನ್ನಷ್ಟೇ ಕೇಂದ್ರೀಕರಿಸಿ ಚಿತ್ರಕಥೆ ಸಿದ್ಧಪಡಿಸಿರುವುದು ಸ್ಪಷ್ಟ.

‘ಮ್ಯಾಕ್ಸ್’ನಲ್ಲಿರುವಂತೆ ಇಲ್ಲಿಯೂ ಸುದೀಪ್ ಪೊಲೀಸ್ ಅಧಿಕಾರಿ. ವ್ಯತ್ಯಾಸವೇನೆಂದರೆ ‘ಮ್ಯಾಕ್ಸ್’ನಲ್ಲಿ ಅಮಾನತುಗೊಂಡ ಪೊಲೀಸ್ ಅಧಿಕಾರಿಯೊಬ್ಬ ಮತ್ತೆ ಸೇವೆಗೆ ಸೇರಿದ ದಿನ ನಡೆಯುವ ಘಟನೆ ಇದೆ. ‘ಮಾರ್ಕ್’ನಲ್ಲಿ ಸೇವೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬ ಅಮಾನತುಗೊಂಡ ದಿನಗಳಲ್ಲಿ ನಡೆಯುವ ಘಟನೆಯಿದೆ. ಎರಡೂ ‘ರಿಯಲ್ ಟೈಂ’ ಜಾನರ್ನಲ್ಲಿವೆ. ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ‘ಮ್ಯಾಕ್ಸ್’ ತೆರೆದುಕೊಂಡಿತ್ತು. ‘ಮಾರ್ಕ್’ ಸಿನಿಮಾ ತದ್ವಿರುದ್ಧವಾಗಿದೆ.

ಅಮಾನತುಗೊಂಡಿರುವ ‘ಸೂಪರಿಂಟೆಂಡೆಂಟ್ ಆಫ್ ಪೊಲೀಸ್’ ಅಜಯ್ ಮಾರ್ಕಂಡೇಯ ಎ.ಕೆ.ಎ. ‘ಮಾರ್ಕ್’(ಸುದೀಪ್) ತಾಯಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಯೊಬ್ಬ ಅವರ ಬಳಿ ಇದ್ದ ನೆರೆ ಮನೆಯ ಮಗುವನ್ನು ಅಪಹರಣ ಮಾಡುತ್ತಾನೆ. ಆ ದಿನ ಇದೇ ರೀತಿ ಮಂಗಳೂರಿನಲ್ಲಿ ಸುಮಾರು ಹದಿನೈದು ಮಕ್ಕಳ ಅಪಹರಣ ನಡೆಯುತ್ತದೆ. ಈ ಪ್ರಕರಣವನ್ನು ತನ್ನೊಂದಿಗೇ ಅಮಾನತುಗೊಂಡಿರುವ ಸಿಬ್ಬಂದಿ ಜೊತೆಗೂಡಿ ಭೇದಿಸುವುಕ್ಕೆ ‘ಮಾರ್ಕ್’ ಇಳಿಯುತ್ತಾನೆ. ಅದೇ ಜಿಲ್ಲೆಯಲ್ಲಿ ₹2 ಸಾವಿರ ಕೋಟಿ ಮೊತ್ತದ ಡ್ರಗ್ಸ್ ಅನ್ನು ಪೊಲೀಸ್ ವಶಪಡಿಸಿಕೊಂಡಿರುತ್ತಾರೆ. ಅದೇ ಸಂದರ್ಭದಲ್ಲಿ ರಾಜ್ಯದ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಬಲ್ಲ ಸುದ್ದಿಯೊಂದು ‘ಮಾರ್ಕ್’ ಕಿವಿಗೆ ಬೀಳುತ್ತದೆ. ಈ ಮೂರೂ ಪ್ರಕರಣಗಳ ಹಾದಿಯಲ್ಲಿ ‘ಮಾರ್ಕ್’ ಪಯಣವೇ ಈ ಸಿನಿಮಾ.

ಚಿತ್ರದ ಮೊದಲಾರ್ಧದ ಸ್ಕ್ರೀನ್ಪ್ಲೇ ವೇಗವಾಗಿ ಸಾಗುತ್ತದೆ. ಮುಂದೆ ಏನಾಗಲಿದೆ ಎನ್ನುವ ತಳಮಳ, ಕೌತುಕ ಇಲ್ಲಿ ಸೃಷ್ಟಿಯಾಗಿದೆ. ‘ಮ್ಯಾಕ್ಸ್’ನಲ್ಲಿರುವಂತೆ ಇಲ್ಲಿ ಕಥೆಗೆ ನೇರವಾಗಿ ಧುಮುಕಿಲ್ಲ. ಸಿದ್ಧಸೂತ್ರಕ್ಕೆ ಅಂಟಿಕೊಂಡು ಹೀರೊಗೊಂದು ಪ್ರವೇಶ ನೀಡಿದ್ದಾರೆ. ಇಲ್ಲಿಂದಲೇ ಬರವಣಿಗೆಯ ಕೊರತೆ ಎದ್ದು ಕಾಣುತ್ತದೆ. ಹೆಸರು ಹೇಳಿದರೇ ತಿಳಿಯುವ, ತಮ್ಮದೇ ಜಿಲ್ಲೆಯಲ್ಲಿರುವ ‘ಸೂಪರಿಂಟೆಂಡೆಂಟ್ ಆಫ್ ಪೊಲೀಸ್’ನ ಗುರುತು ಪೊಲೀಸ್ ಸಿಬ್ಬಂದಿಗೆ ಸಿಗುವುದಿಲ್ಲ ಎನ್ನುವ ಬರವಣಿಗೆ ಹಾಸ್ಯಾಸ್ಪದ. ಅವರ ಬಾಯಿಯಲ್ಲೇ ಆತನ ಸಾಧನೆಯ ಬಣ್ಣನೆ ಇನ್ನೊಂದು ತಮಾಷೆ. ಮಕ್ಕಳ ಹಾಡು, ಕಾಳಿ ದೇವತೆಯ ಮುಂದಿನ ಹಾಡು, ದೃಶ್ಯಗಳ ಅವಶ್ಯಕತೆ ಇರಲಿಲ್ಲ. ತನ್ನಿಷ್ಟದಂತೆ ಕೊಚ್ಚುವ, ಸುಡುವ ‘ಮಾರ್ಕ್’ ಖಳನಾಯಕನ ಜೊತೆ ಮಾತ್ರ ಮುಷ್ಟಿ ಯುದ್ಧಕ್ಕೆ ಇಳಿಯುತ್ತಾನೆ! ಇವುಗಳಿಂದ ದ್ವಿತೀಯಾರ್ಧ ಹಿಗ್ಗಿದೆ. 144 ನಿಮಿಷಕ್ಕೆ ತಲುಪಿದೆ.

ನಾಯಕನೇ ಎಲ್ಲಾ ಕಡೆ ಇರಬೇಕು ಎನ್ನುವ ಸಿದ್ಧಸೂತ್ರವನ್ನೂ ನಿರ್ದೇಶಕರು ಬಿಟ್ಟಿಲ್ಲ. ಕ್ಲೈಮ್ಯಾಕ್ಸ್ನಲ್ಲಿ ಬರುವ ಸಾಹಸ ದೃಶ್ಯಗಳನ್ನು ವಿನಾಕಾರಣ ಎಳೆದಾಡಲಾಗಿದೆ. ಭಾವನಾತ್ಮಕ ದೃಶ್ಯಗಳನ್ನು ಪೋಣಿಸಿದ್ದರೂ ಅವುಗಳಲ್ಲಿ ಕೊರತೆ ಕಾಣಿಸುತ್ತದೆ. ‘ಮಾರ್ಕ್’ ಅಮಾನತ್ತಾಗಿರುವುದು ಏಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ. ಹೀಗೆ ಪ್ರಶ್ನೆ ಹುಟ್ಟಿಸುವ ಹಲವು ದೃಶ್ಯಗಳಿವೆ. ಒಟ್ಟಾರೆ ಬರವಣಿಗೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿತ್ತು. ‘ಮಾರ್ಕ್’ಗೆ ಹೋಲಿಸಿದರೆ ‘ಮ್ಯಾಕ್ಸ್’ ಬರವಣಿಗೆ ಚೆನ್ನಾಗಿತ್ತು.

ನಟನೆಯಲ್ಲಿ ಸುದೀಪ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಪಾತ್ರವನ್ನು ಹೊರತುಪಡಿಸಿ ಉಳಿದ ಪಾತ್ರಗಳಿಗೆ ಸಂಭಾಷಣೆ ಕಡಿಮೆ. ಅಜನೀಶ್ ನೀಡಿರುವ ಹಿನ್ನೆಲೆ ಸಂಗೀತ, ಶೇಖರ್ ಚಂದ್ರ ಛಾಯಾಚಿತ್ರಗ್ರಹಣ ಚೆನ್ನಾಗಿದೆ.

ನೋಡಬಹುದಾದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.