ತಮ್ಮನ್ನು ಎಡತಾಕುವ ನಿರ್ಮಾಪಕರಿಗೆ ಅವರು ಹೇಳುವುದು ಕೂಡ ನಿಧಾನವೇ ಪ್ರಧಾನ ಎನ್ನುವ ಮಾತನ್ನು. ‘ತಾವು ನಾಯಕರಾಗಿ ಅಭಿನಯಿಸುತ್ತಿರುವ ಎರಡು ಚಿತ್ರಗಳ ಬಿಡುಗಡೆಗೆ ಕನಿಷ್ಠ ಮೂರು ತಿಂಗಳ ಅಂತರ ಇರಬೇಕು’ ಎನ್ನುವುದು ನಿರ್ಮಾಪಕರಿಗೆ ಅವರ ಷರತ್ತು.

ಕೋಮಲ್ ಮಾತು ಮತ್ತೆ ಮತ್ತೆ ‘ಕಳ್ ಮಂಜ’ ಚಿತ್ರದ ಯಶಸ್ಸಿನತ್ತಲೇ ಹೊರಳುತ್ತದೆ. ಕ್ರಿಕೆಟ್ ಜ್ವರದ ನಡುವೆಯೂ ಸಿನಿಮಾ ಸಾಧಿಸಿದ ಗೆಲುವು ಅವರಿಗೆ ಸಮಾಧಾನ ತಂದುಕೊಟ್ಟಿದೆ. ‘ನನ್ನ ಚಿತ್ರದ ಆಜೂಬಾಜು ಮೂವತ್ತಕ್ಕೂ ಹೆಚ್ಚು ಸಿನಿಮಾ ತೆರೆಕಂಡಿವೆ. ಆದರೆ ಗೆದ್ದಿರುವುದು ಕಳ್ ಮಂಜ ಮಾತ್ರ. ಸುದೀಪ್ರ ಕೆಂಪೇಗೌಡ ಬಿಟ್ಟರೆ ನನ್ನ ಚಿತ್ರದ್ದೇ ದೊಡ್ಡ ಗೆಲುವು’ ಎನ್ನುವಾಗ ಅವರ ಧ್ವನಿಯಲ್ಲಿ ಖುಷಿ ಇಣುಕುತ್ತದೆ.

‘ಕಳ್ ಮಂಜ’ ನಂತರ ಪೋಷಕ ಪಾತ್ರಗಳಿಗೂ ಹೆಚ್ಚು ಅವಕಾಶಗಳು ಕೋಮಲ್ ಅವರಿಗೆ ಬರುತ್ತಿವೆಯಂತೆ.ಅವುಗಳನ್ನೇನೂ ಕೋಮಲ್ ಒಲ್ಲೆ ಎನ್ನುತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಆಗುವಂತಿದ್ದರೆ ಪಾತ್ರ ಚಿಕ್ಕದಾದರೇನು ದೊಡ್ಡದಾದರೇನು ಎನ್ನುವ ನಿಲುವು ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.