ಭಾನುವಾರ, ಜೂನ್ 13, 2021
26 °C

ಕನಕಗಿರಿ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲ­ಯದ ಆರ್ಯಭಟ ವಿಜ್ಞಾನ ಸಂಘ ಹಾಗೂ ರಾಮಾ­ನುಜಂ ಗಣಿತ ಸಂಘದ ಆಶ್ರಯದಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ನಾಯಕ ವಸ್ತು ಪ್ರದರ್ಶನದ ಕೊಠಡಿಯನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಉಪನ್ಯಾಸಕ ಸಂಜಯ ಸಜ್ಜನ್ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಕುರಿತು ತಿಳಿಸಿದರು.ಪ್ರಾಂಶುಪಾಲ ಬಸವರಾಜ ಎಸ್. ಹಳ್ಳೂರು, ಉಪ ಪ್ರಾಂಶುಪಾಲ ಎಚ್. ಕೆ. ಚಂದ್ರಪ್ಪ,  ಶಿಕ್ಷಕರಾದ ಜಿ. ಮಂಜುನಾಥ, ಎಚ್. ಸಿ. ವಿಜೇಂದ್ರ,  ಕೆ. ಶ್ರೀಮಂತಿನಿ ಮಾತನಾಡಿದರು. ಕರ್ನಾಟಕ ರಾಜ್ಯ  ಸರ್ಕಾರಿ ನೌಕರರ ಸಂಘ ಮಾಜಿ ನಿರ್ದೇಶಕ ಹನುಮಂತಪ್ಪ ಚವ್ಹಾಣ, ಶಿಕ್ಷಕರಾದ ತಿಪ್ಪಣ್ಣ, ಎಸ್. ವೈ. ಜಾಲಿಹಾಳ, ತಿಪ್ಪಮ್ಮ, ಕೆ. ಎಲ್. ಮಂಜುನಾಥ, ಶೈಲಾ ಚಿದಾನಂದ ಮೇಟಿ, ಚಂದಪ್ಪ ಕಂಚೇರ್, ಅಯ್ಯನಗೌಡ ಪಾಟೀಲ ಇತರರು ಇದ್ದರು.ವಿಜ್ಞಾನ ಶಿಕ್ಷಕರಾದ ಎಚ್. ಸಿ.  ವಿಜೇಂದ್ರ, ಕೆ. ಸೀಮಂತಿನಿ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.