ಶನಿವಾರ, ಜೂನ್ 19, 2021
28 °C

ಕನಸಾಗಿಯೇ ಉಳಿದ ರೈಲು ಮಾರ್ಗ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ಗದಗ- ಮುಂಡರಗಿ -ಹಡಗಲಿ-ಹರಿಹರ ರೈಲು ಮಾರ್ಗ ಕನಸಾಗಿ ಉಳಿದಿದೆ ಎಂದು ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಮುಖಂಡ ರಾದ ಬಸವರಾಜ ನವಲಗುಂದ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಈ ಬಜೆಟ್‌ನಲ್ಲಿಯೂ ನಮ್ಮ ರೈಲ್ವೆ ಮಾರ್ಗವನ್ನು ಕೈಬಿಡಲಾಗಿದೆ ಸರ್ಕಾರ ಗಳು ಮೂಲಸೌಕರ್ಯ ಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದರು.ಇದೇ ತಿಂಗಳು 20ರಂದು ನೂತನ ರೈಲ್ವೆ ಮಾರ್ಗಕ್ಕೆ ಮಂಜೂರಾತಿಗಾಗಿ ಗದಗ ನಗರದ ಗಾಂಧಿ ಚೌಕಿನಲ್ಲಿ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಹೂವಿನಹಡಗಲಿ ಸಂಘಟಕರು ನಮ್ಮ ಹೋರಾಟಕ್ಕೆ ಬೆಂಬಲ ಕೊಡಬೇಕೆಂದು ಅವರು ಕೇಳಿದರು.ರೈಲ್ವೆ ಹೋರಾಟವನ್ನು ನಾವು ಹಂತ-ಹಂತವಾಗಿ ಮಾಡುತ್ತಿದ್ದೇವೆ. ಜಂತರ್-ಮಂತರ್‌ನಲ್ಲಿ ಹೋಗಿ ಒಂದು ದಿನ ಸತ್ಯಾಗ್ರಹ ಮಾಡಿ ಬಂದಿದ್ದೇವೆ, ಮುಂಡರಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡಿದ್ದೇವೆ, ಅಂಚೆ ಪತ್ರ, ಪಾದಯಾತ್ರೆ ಯಂತಹ ಹೋರಾಟಗಳು ನಿರಂತರ ವಾಗಿ ನಡೆದಿವೆ ಆದರೂ ಸರ್ಕಾರ ನಮ್ಮ ಕೂಗನ್ನು ಕಿವಿಯಲ್ಲಿ ಹಾಕಿಕೊಂಡಿಲ್ಲ ಎಂದರು.ಮುಂಡರಗಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ದೇಸಾಯಿ ಮಾತನಾಡಿ ರೈಲ್ವೆ ಮಾರ್ಗ ವನ್ನು ಪಡೆಯುವುದು ನಮ್ಮ ಹಕ್ಕಾಗಿದೆ ಪಕ್ಷಾತೀತವಾಗಿ ಹೋರಾಟವನ್ನು ಮುಂದುವರಿಸೋಣ ಎಂದರು.

ಜನರು ಕಟ್ಟಿದ ತೆರಿಗೆ ಅಭಿವೃದ್ಧಿಯ ರೂಪದಲ್ಲಿ ಜನರಿಗೆ ಸೇರಬೇಕು ಆದರೆ ಸರ್ಕಾರ ಈ ಸೌಲಭ್ಯವನ್ನು ಕೊಡುವಲ್ಲಿ ವಿಫಲವಾಗಿದೆ ಎಂದರು.ಹೂವಿನಹಡಗಲಿಯ ಹೋರಾಟ ಗಾರರು ಈಗಾಗಲೇ ಬೈಕ್‌ರ‌್ಯಾಲಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಬರುವ ದಿನಗಳಲ್ಲಿ ಹೋರಾಟವನ್ನು ಚುರುಕುಗೊಳಿಸುವ ಮೂಲಕ ಸೌಲಭ್ಯ ಪಡೆಯಲು ಮುಂದಾಗೋಣ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹೋರಾಟಗಾರ ಹಣ್ಣಿ ವೀರಣ್ಣ, ಶೇಷನಗೌಡ, ಪ್ರೊ.ಎಸ್.ಎಸ್. ಪಾಟೀಲ್, ಬಿ. ಪೀರ್ ಬಾಷಾ ಮಾತ ನಾಡಿ ನೂತನ ರೈಲು ಮಾರ್ಗವನ್ನು ಪಡೆಯ ಬೇಕಾದರೆ ವ್ಯವಸ್ಥಿತವಾದ ಹೋರಾಟದ ರೂಪುರೇಷೆಗಳನ್ನು ಮಾಡಿಕೊಳ್ಳಬೇಕಿದೆ.

 

ಮುಂಡರಗಿ ಮತ್ತು ಹೂವಿನಹಡಗಲಿಯ ಎಲ್ಲ ಪ್ರಗತಿಪರ ಹೋರಾಟಗಾರರು ಮತ್ತು ಚಿಂತಕರು ಸೇರಿ ಒಂದು ಉತ್ತಮವಾದ ಜಂಟಿ ರೈಲ್ವೆ ಹೋರಾಟ ಸಮಿತಿಯನ್ನು ರಚಿಸಿಕೊಂಡು ಮುಂದಿನ ಹೆಜ್ಜೆಗಳನ್ನು ಹಾಕಬೇಕಾಗಿದೆ ಎಂದರು.ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಜಿ.ಬುಳ್ಳಪ್ಪ, ಬಿ.ಎಲ್. ಶ್ರೀಧರ್, ಮತ್ತಿಹಳ್ಳಿ ಬಸವರಾಜ, ಪುತ್ರೇಶ್, ಕೆ.ಅಯ್ಯನಗೌಡ, ಅಶ್ವಥ ನಾರಾಯಣ, ಸೋಮಶೇಖರ, ಎಸ್.ಎಂ. ಬಸವರಾಜ, ವಿಶ್ವನಾಥ ಹಳ್ಳಿಗುಡಿ, ಜಗದೀಶ, ಶಿವಕುಮಾರ ಪತ್ರಿಮಠ, ಅಶೋಕ, ಮಲ್ಲನಗೌಡ, ಚಂದ್ರಪ್ಪ, ಎಸ್.ಎಂ.ಜಾನ್, ಇರ್ಫಾನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.