ಅಮೆರಿಕ’ ಹೆಸರನ್ನು ಕನವರಿಸುವ ಕೋಟ್ಯಂತರ ಜನರು ವಿಶ್ವದೆಲ್ಲೆಡೆ ಇದ್ದಾರೆ. ಅಮೆರಿಕದಲ್ಲಿ ಓದಬೇಕು, ಅಲ್ಲೇ ಕೆಲಸ ಮಾಡಬೇಕು ಅಥವಾ ಜೀವಮಾನದಲ್ಲಿ ಒಮ್ಮೆಯಾದರೂ ಅಲ್ಲಿಗೆ ಪ್ರವಾಸ ಕೈಗೊಳ್ಳಬೇಕು... ಹೀಗೆ ಅಮೆರಿಕ ಹೆಸರಿನ ಸುತ್ತ ಸುತ್ತಿಕೊಂಡ ಕನಸುಗಳು ಹಲವರ ಮನಸ್ಸಿನಲ್ಲಿ ನಿತ್ಯವೂ ಅರಳುತ್ತಲೇ ಇರುತ್ತವೆ.

ಮನದೊಳಗಿನ ಆಸೆಗೆ ಕಿಡಿ ಹೊತ್ತಿಸುವ ಗುಣಕ್ಕೆ ಅನ್ವರ್ಥದಂತಿರುವ ಅಮೆರಿಕದ ಸಾಹಿತ್ಯ, ಕಲೆ, ಸಂಗೀತ, ಇತಿಹಾಸವೂ ಅಷ್ಟೇ ಶ್ರೀಮಂತವಾದುದು. ಅಮೆರಿಕದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಬಯಸುವವರಿಗೆ ಅನಿಯಮಿತ ಮಾಹಿತಿ ಮತ್ತು ಸಾಹಿತ್ಯವನ್ನು ಒದಗಿಸುವ ಗ್ರಂಥಾಲಯ ‘ಅಮೆರಿಕನ್ ಕಾರ್ನರ್’.

ರೇಸ್ಕೋರ್ಸ್ ರಸ್ತೆಯ, ಭಾರತೀಯ ವಿದ್ಯಾ ಭವನದ ಆವರಣದಲ್ಲಿರುವ ಅಮೆರಿಕನ್ ಕಾರ್ನರ್ ಅನ್ನು ಚೆನ್ನೈನಲ್ಲಿರುವ ಯುಎಸ್ ಕಾನ್ಸಲೇಟ್ ಕಚೇರಿ ಮತ್ತು ಭವನದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ. 2003ರ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡಿದ ಅಮೆರಿಕನ್ ಕಾರ್ನರ್, ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಎನ್.ರಾಮಾನುಜ ಮತ್ತು ಭವನದ ಈಗಿನ ನಿರ್ದೇಶಕ ಎಚ್.ಎನ್.ಸುರೇಶ್ ಅವರ ಪರಿಶ್ರಮದ ಫಲ. ಅಮೆರಿಕನ್ ಕಾರ್ನರ್ನ ನಿರ್ದೇಶಕರಾಗಿ ವಿ.ಮುರುಳೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನ ಜನತೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಅಲ್ಲಿನ ಕಲೆ, ಸಂಸ್ಕೃತಿ ಕುರಿತಂತೆ ಪರಿಚಯ ಮಾಡಿಕೊಡುವುದೇ ಅಮೆರಿಕನ್ ಕಾರ್ನರ್ನ ಮುಖ್ಯ ಉದ್ದೇಶ. ಅಲ್ಲದೇ ಅಮೆರಿಕದಲ್ಲಿ ವಿದ್ಯಾರ್ಥಿಗಳಿಗೆ ದೊರೆಯಬಲ್ಲ ಉನ್ನತ ಶಿಕ್ಷಣ ಕಾರ್ಯಕ್ರಮಗಳ ಬಗ್ಗೆಯೂ ಇಲ್ಲಿ ಮಾಹಿತಿ ಒದಗಿಸಲಾಗುತ್ತದೆ.

ಅಮೆರಿಕದಿಂದ ನಗರಕ್ಕೆ ಬರುವ ಗಣ್ಯರು, ಉದ್ಯಮಿಗಳನ್ನು ಆಹ್ವಾನಿಸಿ ಅವರಿಂದ ಭಾಷಣಗಳು ಹಾಗೂ ಆ ದೇಶದ ಕಲಾವಿದರ ಪ್ರದರ್ಶನಗಳನ್ನೂ ಇಲ್ಲಿ ಏರ್ಪಡಿಸಲಾಗುತ್ತದೆ. ಹಾಗೆಯೇ, ಅಮೆರಿಕನ್ ಶೈಲಿಯ ಇಂಗ್ಲಿಷ್ ಭಾಷೆ ಮಾತನಾಡುವ ಕುರಿತ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.

ಅಮೆರಿಕದ ಬಗ್ಗೆ ತಿಳಿಯಬೇಕೆನ್ನುವ ಎಲ್ಲ ವ್ಯಕ್ತಿಗಳಿಗೂ ಈ ಗ್ರಂಥಾಲಯ ಬಾಗಿಲು ತೆರೆದಿರುತ್ತದೆ. ಅಮೆರಿಕನ್ ಕಾರ್ನರ್, 3000ಕ್ಕೂ ಹೆಚ್ಚಿನ ಅಮೆರಿಕನ್ ಸಾಹಿತ್ಯದ ಪುಸ್ತಕಗಳು, ಸೀಡಿ/ಡಿವಿಡಿಗಳ ಸಂಗ್ರಹ ಹೊಂದಿದೆ. ‘ಅಮೆರಿಕನ್ ಲೈಬ್ರರಿಗೆ ಸದಸ್ಯತ್ವ ಪಡೆಯಲು ಇಚ್ಛಿಸುವವರು ವರ್ಷಕ್ಕೆ ₹400, ಎರಡು ವರ್ಷಕ್ಕಾದರೆ ₹700 ಶುಲ್ಕ ಪಾವತಿಸಬೇಕು. ಸದಸ್ಯತ್ವ ಶುಲ್ಕವನ್ನು ಯುಎಸ್ ಕಾನ್ಸಲೇಟ್, ಚೆನ್ನೈ ಹೆಸರಿನಲ್ಲಿ ಡಿ.ಡಿ. ತೆಗೆಯಬೇಕು.

ಹೀಗೆ ಅಮೆರಿಕನ್ ಲೈಬ್ರರಿ ಸದಸ್ಯತ್ವ ಪಡೆದುಕೊಂಡವರಿಗೆ ಚೆನ್ನೈನ ಯುಎಸ್ ಕಾನ್ಸಲೇಟ್ನವರು ಇ–ಲೈಬ್ರರಿಯ ಪಾಸ್ವರ್ಡ್ ನೀಡುತ್ತಾರೆ. ಸದಸ್ಯರಿಗೆ ಅಮೆರಿಕನ್ ಕಾರ್ನರ್ನಲ್ಲಿರುವ ಪುಸ್ತಕಗಳ ಜೊತೆಗೆ ಚೆನ್ನೈನ ಯುಎಸ್ ಕಾನ್ಸಲೇಟ್ನ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಓದುವ ಅವಕಾಶ ಸಿಗುತ್ತದೆ. ಅಮೆರಿಕದ ಕಲೆ, ಸಾಹಿತ್ಯ, ಇತಿಹಾಸ ಮೊದಲಾದವುಗಳಿಗೆ ಸಂಬಂಧಪಟ್ಟ ಜನಪ್ರಿಯ ಪುಸ್ತಕಗಳೆಲ್ಲವೂ ಡಿಜಿಟಲೈಸ್ ಆಗಿರುವುದರಿಂದ ಸದಸ್ಯರು ತಮ್ಮ ಪಾಸ್ವರ್ಡ್ ಬಳಸಿ ಕುಳಿತಲ್ಲೇ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು’ ಎನ್ನುತ್ತಾರೆ ಅಮೆರಿಕನ್ ಕಾರ್ನರ್ನ ನಿರ್ದೇಶಕ ವಿ.ಮುರಳೀಧರ್.

ಅಮೆರಿಕನ್ ಕಾರ್ನರ್ನ ಉಪಯೋಗ ಪಡೆದುಕೊಳ್ಳುತ್ತಿರುವವರಲ್ಲಿ ನಗರದವರಷ್ಟೇ ಅಲ್ಲದೆ ಜಿಲ್ಲಾ ಕೇಂದ್ರಗಳ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳೂ ಇದ್ದಾರೆ. ‘ಭಾರತೀಯ ವಿದ್ಯಾ ಭವನದಲ್ಲಿರುವ ಅಮೆರಿಕನ್ ಕಾರ್ನರ್ ಅನ್ನು ಅಮೆರಿಕದ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರಿಗೆ ಇರುವ ಮೊದಲ ಮೆಟ್ಟಿಲು (ಎಂಟ್ರಿ ಲೆವೆಲ್) ಎನ್ನಬಹುದು. ಅಲ್ಲಿ ವಿದ್ಯಾಭ್ಯಾಸ ಮಾಡಲು ಇಷ್ಟಪಡುವ ವಿದ್ಯಾರ್ಥಿಗಳಿಗಾಗಿಯೇ ನಾವು ಓರಿಯೆಂಟೇಷನ್ ಪ್ರೋಗ್ರಾಂ ನಡೆಸುತ್ತೇವೆ. ಈ ಕಾರ್ಯಕ್ರಮ ನಡೆಸಲು ನಿರ್ದಿಷ್ಟ ತಿಂಗಳು, ವಾರ ಅಂತೇನೂ ಇಲ್ಲ.

ಮಾಹಿತಿ ಬೇಕಿರುವ ವಿದ್ಯಾರ್ಥಿಗಳು ಬಂದು ನಮ್ಮನ್ನು ಕೇಳಿಕೊಂಡರೆ ಆಯೋಜಿಸುತ್ತೇವೆ. ಒಂದು ಓರಿಯೆಂಟೇಷನ್ ಪ್ರೋಗ್ರಾಂ ಆಯೋಜಿಸಲು ಕೊನೆಪಕ್ಷ 25 ವಿದ್ಯಾರ್ಥಿಗಳಾದರೂ ಇರಬೇಕು. ಆಸಕ್ತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಚೆನ್ನೈನ ಕಾನ್ಸಲೇಟ್ನಲ್ಲಿರುವ ಸ್ಟೂಡೆಂಟ್ ಎಜುಕೇಷನ್ ಅಡ್ವೈಸರ್ ಬರುತ್ತಾರೆ. ಅವರು ಅಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲ ಬಗೆಯ ಮಾಹಿತಿಯನ್ನೂ ನೀಡುತ್ತಾರೆ. ಒಂದು ಕೋರ್ಸ್ಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರವೇಶ ಪರೀಕ್ಷೆ, ಏನೇನು ದಾಖಲೆಗಳನ್ನು ಒದಗಿಸಬೇಕು, ಪರೀಕ್ಷೆಗೆ ಸಿದ್ಧಗೊಳ್ಳುವ ಬಗೆ, ಅಲ್ಲಿ ಸಿಗುವ ವಿದ್ಯಾರ್ಥಿ ವೇತನ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಅಮೆರಿಕದ ಒಂದೊಂದು ರಾಜ್ಯದಲ್ಲೂ ಒಂದೊಂದು ಬಗೆಯ ಹವಾಗುಣವಿದೆ. ಅಸ್ತಮಾ ಇರುವ ಒಬ್ಬ ವಿದ್ಯಾರ್ಥಿ ಸದಾಕಾಲ ಥಂಡಿ ಹವಾಗುಣವಿರುವ ರಾಜ್ಯವನ್ನು ತನ್ನ ಓದಿಗೆ ಆಯ್ಕೆ ಮಾಡಿಕೊಂಡರೆ ಆತ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ, ಅಮೆರಿಕದ ಎಲ್ಲ ರಾಜ್ಯಗಳ ಹವಾಗುಣದ ಸ್ಥಿತಿಗತಿಯ ಬಗ್ಗೆ ತಿಳಿಸುತ್ತಾರೆ. ಹಾಗೆಯೇ, ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಫಸ್ಟ್ ಕಮ್ ಫಸ್ಟ್ ಸರ್ವ್ ನಿಯಮದ ಬಗ್ಗೆಯೂ ತಿಳಿಸಿಕೊಡುತ್ತಾರೆ.

ಅಂದರೆ, ಯಾವ ಒಬ್ಬ ವಿದ್ಯಾರ್ಥಿ ಒಂದು ವಿಶ್ವವಿದ್ಯಾಲಯಕ್ಕೆ ಮೊದಲು ಅರ್ಜಿ ಸಲ್ಲಿಸುತ್ತಾನೋ ಅಂತಹ ವಿದ್ಯಾರ್ಥಿಗೆ ಹಾಸ್ಟೆಲ್ ಫೀ, ಟ್ಯೂಷನ್ ಫೀ ಮೊದಲಾದವುಗಳಲ್ಲಿ ರಿಯಾಯಿತಿ ಸಿಗುತ್ತದೆ. ಎಂ.ಎಸ್., ಏರೋ ಟೆಕ್ನಾಲಜಿ, ಕಲೆಯ ಬಗ್ಗೆ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವವರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಉಪಯೋಗ ಪಡೆದುಕೊಂಡಿದ್ದಾರೆ’ ಎನ್ನುವುದು ಮುರುಳೀಧರ್ ನೀಡುವ ವಿವರಣೆ.

ಅಮೆರಿಕನ್ ಕಾರ್ನರ್ಗೆ ಎಲ್ಲರಿಗೂ ಪ್ರವೇಶವಿದೆ. ಆದರೆ, ಅಲ್ಲಿಗೆ ಹೋಗಲಿಚ್ಛಿಸುವವರು ಹೋಗುವ ಮುನ್ನ ಅಂದರೆ ಎರಡು ದಿನ ಮುಂಚಿತವಾಗಿ ತಾವು ಈ ಕಾರಣಕ್ಕೆ ಬರುತ್ತಿದ್ದೇವೆ ಎಂದು ಅಲ್ಲಿನ ನಿರ್ದೇಶಕರಿಗೆ ದೂರವಾಣಿ/ಇ–ಮೇಲ್ ಮುಖೇನ ತಿಳಿಸಬೇಕು. ವಾರದ ಐದು ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರ) ಬೆಳಿಗ್ಗೆ 10.30ರಿಂದ ಸಂಜೆ 5ರವರೆಗೆ ಗ್ರಂಥಾಲಯ ತೆರೆದಿರುತ್ತದೆ. ಶನಿವಾರ ಅರ್ಧ ದಿನವಷ್ಟೇ ಗ್ರಂಥಾಲಯ ಲಭ್ಯ. ಭಾನುವಾರ ರಜಾದಿನ.
ಹೆಚ್ಚಿನ ಮಾಹಿತಿಗೆ: 080 2235 5426, 2226 7421.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.