ಬುಧವಾರ, ಮಾರ್ಚ್ 3, 2021
19 °C

ಕನಿಷ್ಕ ವಿಮಾನ ದುರಂತದ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಿಷ್ಕ ವಿಮಾನ ದುರಂತದ ಸ್ಮರಣೆ

ಒಟ್ಟಾವ, ಕೆನಡಾ (ಐಎಎನ್‌ಎಸ್): ಇಲ್ಲಿನ ಸರ್ಕಾರವು ಕನಿಷ್ಕ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದೆ. ‘ದೇಶದ ರಕ್ಷಣೆಗೆ ನಿರಂತರ ಜಾಗೃತಾವಸ್ಥೆ ಅಗತ್ಯ’ ಎಂದು ಕೆನಡಾ ಪ್ರಧಾನಿ ಸ್ಟೀಫನ್ ಹ್ಯಾರ್ಪ್‌ರ್ ಈ ವೇಳೆ ಹೇಳಿದರು.



1985ರ ಜೂನ್ 23ರಂದು ಏರ್ ಇಂಡಿಯಾದ ಕನಿಷ್ಕ ವಿಮಾನ ಟೊರಂಟೊದಿಂದ ಲಂಡನ್‌ಗೆ ಹಾರುತ್ತಿದ್ದಾಗ ಸಿಖ್‌ ಉಗ್ರರು ನಡೆಸಿದ ಬಾಂಬ್ ದಾಳಿಯಿಂದ ಅಪಘಾತಕ್ಕೀಡಾಗಿ 329 ಪ್ರಯಾಣಿಕರು ಮೃತಪಟ್ಟಿದ್ದರು. ಮೃತರಲ್ಲಿ ಹೆಚ್ಚಿನವರು ಭಾರತ ಮೂಲದವರಾಗಿದ್ದರು.



ಈ ಮಧ್ಯೆ, ಐರ್ಲೆಂಡ್‌ನಲ್ಲೂ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ  ಭಾರತದ ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್, ಐರಿಷ್ ವಿದೇಶಾಂಗ ಸಚಿವ ಚಾರ್ಲೀ ಫ್ಲನಗಾನ್ ಹಾಗೂ ಕೆನಡಾ ನ್ಯಾಯಾಂಗ ಸಚಿವ ಪೀಟರ್ ಮ್ಯಾಕೇ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.