ಭಾನುವಾರ, ಜೂನ್ 20, 2021
25 °C

ಕನ್ನಡ ತಾಯಿ ಸೇವೆಗಾಗಿ ಮಕ್ಕಳ ಪಕ್ಷ: ಖೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಕರ್ನಾಟಕ ಮಕ್ಕಳ ಪಕ್ಷ ತಾಯಿ ಪಕ್ಷ. ತಾಯಿ ಸೇವೆ ಮಾಡಲು ಮುಂದಾಗಿದ್ದೇವೆ, ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ಮಕ್ಕಳ ಪಕ್ಷ ಶ್ರಮಿಸಲಿದೆ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ತಾಯಿ ಕನ್ನಡ ಭುವನೇಶ್ವರಿ ಹೆಸರಿನಲ್ಲಿ ಕರ್ನಾಟಕ ಮಕ್ಕಳ ಪಕ್ಷ ಕಟ್ಟಿದ್ದೇವೆ ಎಂದು ಅಶೋಕ ಖೇಣಿ ಹೇಳಿದರು.ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ವಿ.ಬಿ. ಪಾಟೀಲ ಖಂಡಿಬಾಗೂರು ಮೈದಾನದಲ್ಲಿ ಭಾನುವಾರ ನಡೆದ ಕರ್ನಾಟಕ ಮಕ್ಕಳ ಪಕ್ಷದ ಉದ್ಘಾಟನೆ ಮತ್ತು ಹಾವೇರಿ ಮತ್ತು ದಾವಣಗೆರೆ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭ್ರಷ್ಟ ಅಧಿಕಾರಿಗಳನ್ನು ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಕಡಿವಾಣ ಹಾಕುವುದೇ ಪ್ರಮುಖ ಉದ್ದೇಶವಾಗಿದೆ, ಪಕ್ಷ ಸೇರುವವರಿಗೆ ಸಿಹಿ ಹಂಚಿ ಸ್ವಾಗತಿಸುವುದಿಲ್ಲ, ಒಳ್ಳೆ ಕೊಲ್ಲಾಪುರ ಚಪ್ಪಲಿ ಕೊಡಿಸಿ ಭ್ರಷ್ಟರನ್ನು ಹೊಡೆದೋಡಿಸಲು ಸಲಹೆ ನೀಡುತ್ತೇನೆ ಎಂದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಂಬ ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು 100 ಕೋಟಿ ಆಸ್ತಿ ಹೊಂದಿದ್ದರು. ಈಗ ಬಡ ಜನತೆಯ ಹಣವನ್ನು ಲೂಟಿ ಮಾಟಿ 13ನೂರು ಕೋಟಿ ರೂ ಅಕ್ರಮ ಆಸ್ತಿ ಹೊಂದಿ ್ದದಾರೆ. ಹಾಗಾದರೆ ಈ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರ ಹಣ ಅಧಿಕಾರದ ವ್ಯಾಮೋಹದಿಂದ ಒಬ್ಬ ಹೆಂಡತಿ ಸಾಲದ್ದಕ್ಕೆ ಇಬ್ಬರು ಹೆಂಡರು ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.ನಾನು ಹಣ ಮಾಡಲು ಪಕ್ಷ ಕಟ್ಟಿಲ್ಲ, ದುಡ್ಡು, ಜಾತಿ ಮೇಲೆ ಪಕ್ಷ ಕಟ್ಟಿಲ್ಲ, ದೇವರು ನನಗೆ ಎಲ್ಲಾ ಕೊಟ್ಟು ಚೆನ್ನಾಗಿ ಇಟ್ಟಿದ್ದಾನೆ, ಅಧಿಕಾರ ಬೇಕಾ ಗಿಲ್ಲ, ಜನಸೇವೆ ಮಾಡುವದೇ ನಮ್ಮ ಧ್ಯೇಯ ಎಂದರು. ಮೀಣ ಪ್ರದೇಶದಲ್ಲಿ 25 ಕಿಮೀ ಅಂತರದಲ್ಲಿ ಉತ್ತಮ ಶಾಲೆ, ಉಗ್ರಾಣ, ಆಸ್ಪತ್ರೆ, ಪಶುಆಸ್ಪತೆ, ರಸಗೊಬ್ಬರ ಕೇಂದ್ರ,  ರೈತರು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ನೀಡುವಂತ ಕೃಷಿ ಕೇಂದ್ರವನ್ನು ತೆರೆಯಲಾಗುವುದು ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ  60 ರಿಂದ 89 ಕ್ಷೇತ್ರಗಳಲ್ಲಿ ಕರ್ನಾಟಕ ಮಕ್ಕಳ ಪಕ್ಷ ಗೆಲುವು ಸಾಧಿಸಲಿದೆ.   ಕರ್ನಾ ಟಕ ಮಕ್ಕಳ ಪಕ್ಷ ಬೆಂಬಲಿಸಿದ 5 ವರ್ಷದಲ್ಲಿ ಕರ್ನಾಟಕ ಮಾತೆ ಸ್ವರ್ಗ ಮಾತೆ ಆಗುತ್ತಾಳೆ ಎಂದರು. ರಾಜ್ಯ ಘಟಕದ ಅಧ್ಯಕ್ಷ ಎಚ್.ಪಿ. ನಾಗೇಂದ್ರ ಪ್ರಸಾದ್, ಯಾವುದೇ ಆಪೇಕ್ಷೆಯಿಲ್ಲದೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ  ಮಕ್ಕಳ ಪಕ್ಷದ ಉದ್ಘಾಟನೆ ಸಮಾ ವೇಶಕ್ಕೆ ಇಷ್ಟೊಂದು ಜನ ಸೇರಿದ್ದೇ ಸಾಕ್ಷಿ ಎಂದರು.ರಾಜ್ಯ ಖಜಾಂಚಿ ಬಾಬು ಧನ್ವಂತರಿ, ದಾವಣ ಗೆರೆ ಹಾಲೇಶ ಅಂಗಡಿ, ಹಿರೇಕೆರೂರು ನಿಂಗಣ್ಣ ಚಳಗೇರಿ, ಚಂದ್ರಶೇಖರ ಬೆಣ್ಣಿ, ರಾಣೆ ಬೆನ್ನೂರಿನ ಶಂಕರ, ಕಣವಿ, ದಿಲೀಪ ಬಡಪ್ಪ ನವರ, ಎಂ.ಎಸ್.ಪಾಟೀಲ, ಹರಪನಹಳ್ಳಿ ರಾಮಾ ನಾಯಕ,  ಈರಣ್ಣ, ಜಯರಾಜ್, ಜಗಳೂರು ಚಿತ್ತಪ್ಪ, ಬಸವರಾಜ ಗೊಬ್ಬಿ, ಕೆ.ಬಿ. ಬಳ್ಳಾರಿ,   ಬ್ಯಾಡಗಿ ಸುರೇಶಗೌಡ ಪಾಟೀಲ, ಸದಾನಂದಗೌಡ,  ಸವಣೂರು ಉಮೇಶ ಪೂಜಾರ, ಅಣಜಿ ತಿಪ್ಪಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.ಹರಿದ ಜನಸಾಗರಎಲ್ಲಿ ನೋಡಿದರೂ ನಗರದ ತುಂಬ ಬೃಹತ್ ಸಮಾವೇಶದ ಕಟೌಟ್‌ಗಳೇ ತುಂಬಿ ್ದದವು. ಯುವಕರ ದಂಡು ನಗರದ ತುಂಬೆಲ್ಲ ಕರ್ನಾಟಕ ಮಕ್ಕಳ ಪಕ್ಷದ ಧ್ವಜ ಕಟ್ಟಿಕೊಂಡು ಸುಡು ಬಿಸಿಲನ್ನು ಲೆಕ್ಕಿಸದೆ ಸಿಳ್ಳೆ ಹಾಕುತ್ತಾ  ಖೇಣಿ ಅವರಿಗೆ ಜಯವಾಗಲಿ, ಕರ್ನಾಟಕ ಮಕ್ಕಳ ಪಕ್ಷಕ್ಕೆ ಜಯವಾಗಲಿ, ತಾಯಿ ಭುವನೇಶ್ವರಿಗೆ ಜಯವಾಗಲಿ, ಭ್ರಷ್ಟ ರಾಜ ಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಹೊಡೆದೋಡಿಸಲು ನಮ್ಮ ಜೊತೆ ಕೈಜೋ ಡಿಸಿ ಎನ್ನುತ್ತಾ ಸುತ್ತಾಡಿದರು.  ವಿವಿಧ ಊರು ಗಳಿಂದ ಖೇಣಿ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.