ಬುಧವಾರ, ಏಪ್ರಿಲ್ 14, 2021
24 °C

ಕನ್ನಡ ನುಡಿ ತೇರಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ:  ವಿಶ್ವ ಕನ್ನಡ ಸಮ್ಮೇಳನ ಅಂಗವಾಗಿ ತಾಲ್ಲೂಕಿನ ಗಡಿ ಪ್ರದೇಶವಾದ ಮಿಟ್ಟೇಮರಿಗೆ ಆಗಮಿಸಿದ ಕನ್ನಡ ನುಡಿ ತೇರನ್ನು ಮಂಗಳವಾರ ಅದ್ದೂರಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಎ.ಹನುಮಂತರಾಯ ಅವರು ಪೂಜೆ ಸಲ್ಲಿಸಿ, ಸ್ವಾಗತಿಸಿದರು. ಪಟ್ಟಣದ ನ್ಯಾಷನಲ್ ಕಾಲೇಜಿನ ಮುಂಭಾಗದಿಂದ ಹೊರಟ ಕನ್ನಡ ನುಡಿ ತೇರು ಪಟ್ಟಣದ ಮುಖ್ಯರಸ್ತೆಯಲ್ಲಿ ವಿವಿಧ ಕಲಾ ತಂಡಗಳೊಂದಿಗೆ  ಮೆರವಣಿಗೆ ಸಾಗಿತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ತೇರನ್ನು ಸ್ವಾಗತಿಸಿದರು. ನಗಾರಿ, ತಮಟೆ, ಪಟ, ಗಾರುಡಿ ಕುಣಿತಗಳ ಮಧ್ಯೆ ಮೆರವಣಿಗೆ ಎಲ್ಲರ ಕಣ್ಮನ ಸೆಳೆಯಿತು. ಕಲಾವಿದ ಮುನಿರೆಡ್ಡಿ ಹಾಗೂ ತಂಡದವರು ವಿವಿಧ ವೇಷ ಧರಿಸಿ ನೃತ್ಯ ಪಸ್ತುತ ಪಡಿಸಿದರು.ಶಾಲಾ ಮಕ್ಕಳು  ಕನ್ನಡ ಬಾವುಟ ಹಿಡಿದು ಕನ್ನಡ ನುಡಿ ತೇರಿಗೆ ಸಾಥ್ ನೀಡಿದರು. ಮುಖ್ಯ ರಸ್ತೆಯಲ್ಲಿ ಸಂಚರಿಸಿದ ಕನ್ನಡ ನುಡಿ ತೇರನ್ನು ಗುಡಿಬಂಡೆ ತಾಲ್ಲೂಕಿಗೆ ಬೀಳ್ಕೊಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಅಮರಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗಪ್ಪ, ಲೋಕೊಪಯೋಗಿ ಇಲಾಖೆಯ ಎಇಇ ಮಲ್ಲೇಶಪ್ಪ, ಬಿಇಒ ಎಂ.ಆರ್.ಕೃಷ್ಣಪ್ಪ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಉಪಾಧ್ಯಕ್ಷ ಮಹಮದ್ ಜಾಕೀರ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ನರಸಿಂಹನಾಯ್ಡು, ಪುರಸಭಾ ಸದಸ್ಯರಾದ ಮಹಮದ್ ನೂರುಲ್ಲಾ, ಅಬ್ದುಲ್ ಮಜೀದ್, ಪಿ.ಎಲ್.ಗಣೇಶ್, ಕಸಪಾ ತಾಲ್ಲೂಕು ಅಧ್ಯಕ್ಷ ಬಿ.ಆರ್.ಕೃಷ್ಣ, ಪ್ರಾಧ್ಯಾಪಕ ಕೆ.ಟಿ.ವೀರಾಂಜನೇಯಲು, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಗ ಅಧ್ಯಕ್ಷ ನಾರಾಯಣಸ್ವಾಮಿಶೆಟ್ಟಿ, ದೈಹಿಕ ಶಿಕ್ಷಣ ತಾಲ್ಲೂಕು ನಿದೇರ್ಶಕ ಬಿ.ಎನ್.ನಟರಾಜ್, ಜಯ ಕರ್ನಾಟಕ ಜಿಲ್ಲಾ ಮುಖಂಡ ಬಿ.ಎಸ್. ನಾಗಭೂಷಣ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಕರವೇ ಚಂದ್ರಶೇಖರ್ , ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಮ್ಮ, ಪ್ರಧಾನ ಕಾರ್ಯದರ್ಶಿ ನಿರ್ಮಲ, ತಾಲ್ಲೂಕು ಅಧ್ಯಕ್ಷೆ ನಾಗಮಣಿ, ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್, ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಜಿ.ವೆಂಕಟೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ತ್ರೀ ಶಕ್ತಿಸಂಘಗಳ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.