ಗುರುವಾರ , ಮೇ 6, 2021
31 °C

ಕನ್ನಡ ಪುಸ್ತಕ ಓದಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಹಾಸ್ಯ ಮನುಷ್ಯನ ಜೀವನಕ್ಕೆ ಮಾರಕವಾಗಿರುವ ರಕ್ತದೊತ್ತಡ, ಸಕ್ಕರೆ ರೋಗ, ಮಾನಸಿಕ ಕಾಯಿಲೆಗಳಂತಹ ದೈಹಿಕ ಜಾಢ್ಯಗಳನ್ನು ನಿವಾರಿಸಬಲ್ಲ ದಿವ್ಯ ಔಷಧಿಯಾಗಿದೆ ಎಂದು  ನರೇಗಲ್‌ನ ಹಾಸ್ಯ ಸಾಹಿತಿ ಅರುಣ ಕುಲಕರ್ಣಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ನಿತ್ಯ ಜೀವನದಲ್ಲಿ ಹಾಸ್ಯದ ಪ್ರಸಂಗಗಳು ಸಾಕಷ್ಟು ಜರುಗುತ್ತವೆ. ಬದುಕಿನ ವಿರಸ ದೂರ ಮಾಡಲು ನಗು ಬೇಕು. ನಗುವಿಲ್ಲದ ಮನೆ, ದೀಪವಿಲ್ಲದ ಕತ್ತಲ ಕೋಣೆ. ಆದ್ದರಿಂದ ಬದುಕಿನಲ್ಲಿ  ಹಾಸ್ಯ ಪ್ರಜ್ಞೆ ಬೆಳೆೆಯಬೇಕಾದ್ದಲ್ಲಿ ಕನ್ನಡ ಪುಸ್ತಕ  ಹೆಚ್ಚು ಓದಬೇಕು. ಕನ್ನಡ ಸಾಹಿತ್ಯವನ್ನು ಬೆಳೆಸುವಲ್ಲಿ ಯುವಕರು ಮುಂಚೂಣಿಯಲ್ಲಿ ಇರಬೇಕು ಎಂದು ಕುಲಕರ್ಣಿ ನುಡಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಸಂಗಮೇಶ ತಮ್ಮನಗೌಡರ ಮಾತನಾಡಿ,  ಗಂಟು ಮೋರೆ ವ್ಯಕ್ತಿಗಳಾಗದೆ ಹೃದಯ ಶ್ರೀಮಂತಿಕೆ ಮೆರೆಯುವ ಮನೋವೃತ್ತಿ ಬೆಳಸಿಕೊಂಡಾಗ ಸಂತಸದ ಕೃತಕವಲ್ಲದ ನಗು ಸಹಜವಾಗಿ ಹುಟ್ಟುತ್ತದೆ.  ಪರಿಷತ್ ವತಿಯಿಂದ ಈ ರೀತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.ರೋಣದ ಉದಯೋನ್ಮುಖ ಕವಿ ಸಾಕ್ಷರತೆ ಸಂಯೋಜಕ ಬಿ.ಜಿ.ಹಾವಣಗಿ, ಸರಸ್ವತಿಯ ಸ್ತುತಿ, ತ್ಯಾಗ, ಪಾಪ, ದೇವರು ಎಂಬ ಕಾವ್ಯ ವಾಚನ ಮಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಜಿಲ್ಲಾ ಕೋಶಾಧ್ಯಕ್ಷ ಡಿ. ಎಚ್. ಮಲ್ಲೆೀಶ, ಜಿಲ್ಲಾ ಸಲಹಾ ಮಂಡಳಿ ಸದಸ್ಯ ಪ್ರಾಚಾರ್ಯ ಕೆ.ಎಚ್.ಬೇಲೂರು, ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಶಶಿಕಾಂತ ಕೊರ್ಲಹಳ್ಳಿ, ಕವಿತಾ ದಂಡಿನ, ಪ್ರೊ. ಎ. ಎಸ್. ಸಾವಂತ, ಬಿ. ಡಿ. ಕಿಲಬುನವರ, ಎಂ.ಎಫ್. ಕೋಲಕಾರ, ಹಿರಿಯ ಸಾಹಿತಿ ಬಿ.ಎಸ್.ಇಂಡಿ, ಪ್ರಾಚಾರ್ಯ ಕೆ.ವಿ. ಕನ್ನೂರು, ವಾಸುಮಾಮಾ ಟಿಕಾಂದಾರ, ಬಸವರಾಜ ವಾರಿ, ಮಾಹಾಂತೇಶ ಮದ್ನೂರ, ಬಸಯ್ಯ ನಂದಿಕೋಲಮಠ ಹಾಜರಿದ್ದರು.ಶಿಕ್ಷಕ ಕೆ. ಕೆ. ಹುಗಾರ ನಿರೂಪಿಸಿದರು ಜಿಲ್ಲಾ ಪ್ರತಿನಿಧಿ ಮಲ್ಲಿಕಾರ್ಜುನ ಪೂಜಾರ ಪ್ರಾರ್ಥಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಕಿಶೋರಬಾಬು ನಾಗರ ಕಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ  ಆರ್.ಜಿ.ಚಿಕ್ಕಮಠ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.