ಗುರುವಾರ , ಜೂನ್ 24, 2021
27 °C

ಕನ್ನಡ ವಿಜ್ಞಾನ ಲೇಖಕರ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಹಯೋಗದೊಂದಿಗೆ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರಿಗಾಗಿ ಮೇ 7 ರಂದು ಚಿಕ್ಕಮಗಳೂರಿನ ಕೆಐಓಸಿಎಲ್‌ನಲ್ಲಿ ಕನ್ನಡ ವಿಜ್ಞಾನ ಲೇಖಕರ ತರಬೇತಿ ಶಿಬಿರವನ್ನು ಆಯೋಜಿಸಿದೆ.ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು, ಯುವ ಪತ್ರಿಕಾ ವರದಿಗಾರರು, ನಿರೂಪಕರು, ರೇಡಿಯೋ ಭಾಷಣಕಾರರು ಶಿಬಿರದಲ್ಲಿ ಭಾಗವಹಿಸಬಹುದು.ಶಿಬಿರದಲ್ಲಿ ಬರವಣಿಯೆ ಕೌಶಲ್ಯ, ಆಕರ ಮತ್ತು ಶಬ್ದ ಬಳಕೆ, ಅನುವಾದ ಕುರಿತು ನುರಿತ ವಿಜ್ಞಾನ ಬರಹಗಾರರು ಮಾಹಿತಿ ನೀಡಲಿದ್ದಾರೆ. ಶಿಬಿರಾರ್ಥಿಗಳು ವಿಜ್ಞಾನದ ವಿಷಯದಲ್ಲಿ ಕನಿಷ್ಠ ಒಂದು ಲೇಖನವನ್ನಾದರೂ ಪ್ರಕಟಿಸಿರಬೇಕು ಮತ್ತು ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಪ್ರಯಾಣ ಭತ್ಯೆಯ ಸೌಲಭ್ಯವನ್ನು ಒದಗಿಸಲಾಗುವುದು. ಭಾಗವಹಿಸಲಿಚ್ಛಿಸುವವರು ವ್ಯಕ್ತಿ ವಿವರದೊಂದಿಗೆ ಈಗಾಗಲೇ ಪ್ರಕಟಗೊಂಡ ಸ್ವ-ರಚಿ ಕನ್ನಡ ವೈಜ್ಞಾನಿಕ ಲೇಖನದ ಪ್ರತಿಯೊಂದಿಗೆ ಅರ್ಜಿಯನ್ನು ಏಪ್ರಿಲ್ 15ರ ಒಳಗೆ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು.

ವಿಳಾಸ- ಡಾ. ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನಭವನ, ನಂ. 24/2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ,

ಇ-ಮೈಲ್: krvp.info@gmail.com

ಮೊಬೈಲ್: 99868 40477.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.