ನವದೆಹಲಿ (ಪಿಟಿಐ): ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಪತ್ತೆ, ನಿಯಂತ್ರಣಕ್ಕಾಗಿ ರಚಿಸಲಾಗಿರುವ ಹಣಕಾಸು ಬೇಹುಗಾರಿಕಾ ಘಟಕವು (ಎಫ್ಐಯು) ಕಪ್ಪುಹಣ ಹಾಗೂ ತೆರಿಗೆ ವಂಚನೆ ಪತ್ತೆಗೆ ಆದಾಯ ತೆರಿಗೆ ಇಲಾಖೆ, ಸಿಬಿಐನಂತಹ ಸಂಸ್ಥೆಗಳ ಜತೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.

ಅಪರಾಧ, ಅಕ್ರಮ ಹಣ ವರ್ಗಾವಣೆ, ತೆರಿಗೆ ಹಾಗೂ ಸುಂಕ ತಪ್ಪಿಸುವಿಕೆಯಂತಹ ವಿಷಯಗಳಲ್ಲಿ ಎಫ್ಐಯು ಸಂಬಂಧಿಸಿದ ಸಂಸ್ಥೆಗಳಿಂದ ಮುಕ್ತವಾಗಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಈ ಒಡಂಬಡಿಕೆಗಳು ಅನುವು ಮಾಡಿಕೊಡಲಿವೆ. ಕೇಂದ್ರಿಯ ಅಬಕಾರಿ ನಿರ್ದೇಶನಾಲಯ, ಕಂದಾಯ ನಿರ್ದೇಶನಾಲಯ ಹಾಗೂ ಜಾರಿ ನಿರ್ದೇಶನಾಲಯಗಳೊಂದಿಗೆ ಈ ಒಡಂಬಡಿಕೆಗಳನ್ನು ಸಂಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾನದಂಡದ ಅನ್ವಯ ಅಕ್ರಮ ಹಣ ವರ್ಗಾವಣೆ (ಅಕ್ರಮ ಲೇವಾದೇವಿ ವ್ಯವಹಾರ ತಡೆ ಕಾಯ್ದೆ ಅನ್ವಯ ) ತಡೆಯಲು ಎಫ್ಐಯು ಜತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಮೇ 16ರಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಸಿಬಿಐ ಆಗಾಗ ನಡೆಸುತ್ತಿದ್ದು ಇಂತಹ ಸಂದರ್ಭಗಳಲ್ಲಿ ಬಂಧನಕ್ಕೊಳಗಾಗುವ ವ್ಯಕ್ತಿಗಳ ಕುರಿತು ಎಫ್ಐಯುಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಹೀಗೆ ನೀಡಲಾದ ಮಾಹಿತಿಯನ್ನು ಗೋಪ್ಯವಾಗಿಡುವ ಅಂಶವೂ ಒಪ್ಪಂದದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.