ಶುಕ್ರವಾರ, ಮೇ 7, 2021
27 °C

ಕಪ್ಪೆ ತಿನ್ನುವುದು ಕ್ಯಾನ್ಸರ್‌ಗೆ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಐಎಎನ್‌ಎಸ್): ಸಿಗರೇಟು ಸೇವನೆ ಮಾತ್ರ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುವುದಿಲ್ಲ, ಕಪ್ಪೆ ತಿನ್ನುವುದೂ ಕೂಡ ಕ್ಯಾನ್ಸರ್‌ಗೆ ದಾರಿ ಎಂದು ಗೋವಾ ಅರಣ್ಯ ಇಲಾಖೆ ತಿಳಿಸಿದೆ.ವರ್ಷದ ಈ ಅವಧಿಯಲ್ಲಿ ಕಳ್ಳ ಬೇಟೆಗಾರರು ಜವುಗು ಭೂಮಿಯಲ್ಲಿ ಹಾಗೂ ಮಳೆಯಿಂದ ಮುದ್ದೆಯಾದ ಪ್ರದೇಶದಲ್ಲಿ ಕಪ್ಪೆ ಹಾಗೂ ಅವುಗಳ ಮಾಂಸಭರಿತ ಹಿಂದಿನ ಕಾಲುಗಳಿಗಾಗಿ ಬೇಟೆಯಾಡುತ್ತಾರೆ.

ಹೀಗಾಗಿ ಅರಣ್ಯ ಅಧಿಕಾರಿಗಳು ಕಪ್ಪೆ ಮಾಂಸ ತಿನ್ನುವುದರಿಂದ ವಿಲಕ್ಷಣವಾದ ಕಾಯಿಲೆ ಉಂಟಾಗುತ್ತದೆ, ಕ್ಯಾನ್ಸರ್‌ನಿಂದ ಹಿಡಿದು ಕಿಡ್ನಿ ವೈಫಲ್ಯ ಹಾಗೂ ಪಾರ್ಶ್ವವಾಯುವಿನವರೆಗೂ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ಸಲಹಾ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ.`ಮನುಷ್ಯರು ಕಪ್ಪೆಗಳ ಹಾಗೂ ಅವುಗಳನ್ನು ಮನಸೋ ಇಚ್ಛೆ ಕೊಂದು ಜಲಚರ ಜೀವಸಂಕುಲವನ್ನು ನಾಶ ಮಾಡುವ ಮಹಾ ಪರಭಕ್ಷಕರು' ಎಂದು ಮಾರ್ಗದರ್ಶಿ ಕರೆದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರೂ 25,000 ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಇದ್ದಾಗ್ಯೂ ಗೋವಾದಲ್ಲಿ ಕಪ್ಪೆ ಮಾಂಸಕ್ಕೆ ಬೇಡಿಕೆ ಹೆಚ್ಚಾದಂತೆಲ್ಲಾ ಹಳ್ಳಿ ಬಾಲಕರು ಹಾಗೂ ಯುವಕರು ಸಾಂಪ್ರದಾಯಿಕವಾಗಿ ಕಪ್ಪೆಗಳ ಬೇಟೆಗಾಗಿ ಸಜ್ಜಾಗುತ್ತಾರೆ.ದಂಡ ಹಾಗೂ ಶಿಕ್ಷೆಯ ಭಯವಿಲ್ಲದಿದ್ದರೂ ಕನಿಷ್ಠ ಕ್ಯಾನ್ಸರಿನ ಭಯದಿಂದಾಗಿ ಕಪ್ಪೆಗಳನ್ನು ಕೊಲ್ಲುವುದು ಹಾಗೂ ತಿನ್ನುವುದನ್ನು ಜನ ನಿಲ್ಲಿಸುತ್ತಾರೆ ಎಂಬ ಭಾವನೆಯಿಂದ ಅರಣ್ಯ ಇಲಾಖೆ ಈ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.