ಮಂಗಳವಾರ, ಜೂನ್ 15, 2021
27 °C

ಕಬಡ್ಡಿ: ರೆಡ್‌ ಆರ್ಮಿ, ರೈಲ್ವೆಗೆ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಪ್ಪಾಣಿ: ದೆಹಲಿಯ ರೆಡ್‌ ಆರ್ಮಿ ಹಾಗೂ ಮುಂಬೈಯ ಕೇಂದ್ರ ರೈಲ್ವೆ ತಂಡದವರು ಇಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಅಖಿಲ ಭಾರತ ‘ಎ’ ಗ್ರೇಡ್‌ ಹೊನಲು ಬೆಳಕಿನ  ಕಬಡ್ಡಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. 



ಮುನ್ಸಿಪಲ್‌ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯ ಪುರುಷರ ಫೈನಲ್‌ನಲ್ಲಿ ರೆಡ್‌ ಆರ್ಮಿ ತಂಡವು ಮಹಾರಾಷ್ಟ್ರ ಪೊಲೀಸ್‌ ತಂಡವನ್ನು 19–2ರಿಂದ ಮಣಿಸಿತು. ದಕ್ಷಿಣ ಕನ್ನಡದ ಮೂಡಬಿದಿರೆಯ ಆಳ್ವಾಸ್‌ ತಂಡವನ್ನು 15–12ರಿಂದ ಸೋಲಿಸಿದ ಕೇಂದ್ರ ರೈಲ್ವೆ ತಂಡ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.



ಪುರುಷರ ಸೆಮಿಫೈನಲ್‌ನಲ್ಲಿ ರೆಡ್‌ ಆರ್ಮಿ ತಂಡ ಪಂಜಾಬ್‌ ಪೊಲೀಸ್‌ ತಂಡವನ್ನು 35–25ರಿಂದ ಹಾಗೂ ಮಹಾರಾಷ್ಟ್ರ ಪೊಲೀಸ್‌ ತಂಡ ಬೆಂಗಳೂರಿನ ವಿಜಯಾ ಬ್ಯಾಂಕ್‌ ತಂಡವನ್ನು 17–14ರಿಂದ ಪರಾಭವಗೊಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.