ಕ್ಯಾಂಡಿ (ಪಿಟಿಐ): ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿರುವ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನದ ಕೋಚ್ ವಕಾರ್ ಯೂನಿಸ್ ತಿಳಿಸಿದ್ದಾರೆ.

‘ಒಬ್ಬರ ಮೇಲೆ ಸೋಲಿನ ಹೊಣೆ ಹೊರಿಸಲು ಇದು ಸೂಕ್ತ ಸಮಯವಲ್ಲ. ಅವರು ಸರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿಲ್ಲ ಎಂಬುದು ನಿಜ. ಕೆಲ ಕ್ಯಾಚ್ ಕೈಬಿಟ್ಟರು. ಅವೇನು ಕಷ್ಟದ ಕ್ಯಾಚ್ ಆಗಿರಲಿಲ್ಲ. ಆದರೆ ಇದು ಕ್ರಿಕೆಟ್. ಅಂತಹ ಸಂಗತಿಗಳು ಸಂಭವಿಸುತ್ತವೆ. ಮಂಗಳವಾರ ಅವರ ಪಾಲಿಗೆ ಕೆಟ್ಟ ದಿನವಾಗಿತ್ತು. ಅದು ನಮ್ಮ ಸೋಲಿಗೆ ಕಾರಣವಾಯಿತು’ ಎಂದಿದ್ದಾರೆ.

ಈ ಕಾರಣ ಅವರನ್ನು ತಂಡದಿಂದ ಕೈಬಿಡಲಾಗುತ್ತದೆಯೇ ಎಂಬುದಕ್ಕೆ ಪ್ರತಿಕ್ರಿಯಿಸಿದ ವಕಾರ್, ‘ನನ್ನ ಪ್ರಕಾರ ವಿಶ್ವಕಪ್ ಬಳಿಕ ಕೈಬಿಡಬಹುದು. ಈ ಬಗ್ಗೆ ಈಗಲೂ ಯೋಚಿಸಬಹುದು. ಆದರೆ ನಾವು ಟೂರ್ನಿಯ ಮಧ್ಯೆದಲ್ಲಿದ್ದೇವೆ. ಈಗ ಆ ರೀತಿಯ ಬದಲಾವಣೆ ಮಾಡಿ ತಂಡವನ್ನು ಗೊಂದಲಕ್ಕೆ ಸಿಲುಕಿಸುವುದಿಲ್ಲ’ ಎಂದರು.

ಶತಕ ಗಳಿಸಿದ ನ್ಯೂಜಿಲೆಂಡ್ನ ರಾಸ್ ಟೇಲರ್ ಅವರನ್ನು ವಕಾರ್ ಶ್ಲಾಘಿಸಿದರು. ‘ನಿಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಆ ರೀತಿ ಇನಿಂಗ್ಸ್ ಆಡಲು ಸಾಧ್ಯ. ಅವರು ನೀಡಿದ ಕ್ಯಾಚ್ ಬಿಟ್ಟಿದ್ದು ಪಂದ್ಯದ ತಿರುವಿಗೆ ಕಾರಣವಾಯಿತು. ಜೊತೆಗೆ ನಮ್ಮ ಬೌಲಿಂಗ್ ಕೂಡ ಕೆಟ್ಟದಾಗಿತ್ತು’ ಎಂದರು.

ಈ ಸೋಲಿನಿಂದ ತಂಡ ಆಘಾತಕ್ಕೆ ಒಳಗಾಗಿಲ್ಲ. ಮತ್ತೆ ಗೆಲುವಿನ ಟ್ರ್ಯಾಕ್ ಕಂಡುಕೊಳ್ಳಲು ಸಿದ್ಧತೆ ನಡೆಸುತ್ತಿದ್ದೇವೆ. ಮುಂದೆ ಜಿಂಬಾಬ್ವೆ ವಿರುದ್ಧ ಪಂದ್ಯವಿದೆ. ನಂತರ ಆಸ್ಟ್ರೇಲಿಯಾ ಎದುರು ಆಡಬೇಕು. ಕ್ವಾರ್ಟರ್ ಫೈನಲ್ ಪಂದ್ಯವಿದೆ. ಹಾಗಾಗಿ ತಂಡ ಗಾಬರಿಗೆ ಒಳಗಾಗಬಾರದು ಎಂದು ಅವರು ವಿವರಿಸಿದ್ದಾರೆ. ‘ಎ’ ಗುಂಪಿನಲ್ಲಿ ನಾಲ್ಕು ಪಂದ್ಯವಾಡಿರುವ ಪಾಕ್ ಒಟ್ಟು ಆರು ಪಾಯಿಂಟ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.