ಗುರುವಾರ , ಮೇ 13, 2021
35 °C

ಕರಡಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ: ಆಹಾರಕ್ಕಾಗಿ ಅಲೆಯುತ್ತಿದ್ದ 12 ವರ್ಷದ ಹೆಣ್ಣು ಕರಡಿಯೊಂದು ದುಷ್ಕರ್ಮಿಗಳ ಗುಂಡೇಟಿನಿಂದ ತೀವ್ರ ಗಾಯಗೊಂಡ ಘಟನೆ ತಾಲ್ಲೂಕಿನ ಚೇಳೂರು ಹೋಬಳಿ ಗಂಗಯ್ಯನಪಾಳ್ಯದ ಮಠದಲ್ಲಿ ಬುಧವಾರ ರಾತ್ರಿ ನಡೆದಿದೆ.ಗಂಗಯ್ಯನ ಪಾಳ್ಯದ ಮಠದ ರೈತರಾದ ಜಯರಂಗಮ್ಮ ಅವರ ತೋಟದಲ್ಲಿ ಸಿಕ್ಕಿದ ಕರಡಿ ರಕ್ತಸ್ರಾವವಾಗಿ ಜ್ಞಾನ ತಪ್ಪಿ ಬಿದ್ದಿತ್ತು. ಸುಮಾರು ಆರು ಗುಂಡುಗಳು ತಗುಲಿದ ಬಗ್ಗೆ ಸಾರ್ವಜನಿಕರು ತಾಲ್ಲೂಕು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ತೀವ್ರ ಗಾಯಗೊಂಡ ಕರಡಿಯನ್ನು ಗುಬ್ಬಿಗೆ ತಂದು ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ನೀಡಿ, ಗುರುವಾರ ಸಂಜೆ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಕರಡಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಯಾರೆಂದು ತಿಳಿದಿಲ್ಲ ಎಂದು ಅರಣ್ಯ ಇಲಾಖಾ ಅಧಿಕಾರಿ ಹರೀಶ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.